ಚನ್ನರಾಯಪಟ್ಟಣ: ಜಾನುವಾರುಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮ್ಯಾಟ್ಗಳನ್ನು ವಿತರಿಸಲಾಗುತ್ತಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಪಟ್ಟಣದ ಹೊರವಲಯದ ಶೆಟ್ಟಿಹಳ್ಳಿಡೇರಿಯಲ್ಲಿ ಶನಿವಾರ ಹೈನುಗಾರರಿಗೆ₹ 1.50 ಕೋಟಿ ಮೌಲ್ಯದ 6 ಸಾವಿರ ಮ್ಯಾಟ್ಗಳನ್ನು ವಿತರಿಸಿ ಮಾತನಾಡಿದರು.

280 ಹಾಲಿನ ಡೇರಿ ವ್ಯಾಪ್ತಿಯಲ್ಲಿ ಆರು ಸಾವಿರ ಮ್ಯಾಟ್ಗಳನ್ನು ವಿತರಿಸಲಾಗುತ್ತಿದೆ. ಕೊಟ್ಟಿಗೆಯಲ್ಲಿ ಶುಚಿತ್ವ ಹಾಗು ಜಾನುವಾರುಗಳ ಆರೋಗ್ಯದ ದೃಷ್ಟಿಯಿಂದ ಇದು ಉತ್ತಮವಾಗಿದೆ. ಈ ಹಿಂದೆಯೂ 15-20 ಸಾವಿರ ಮ್ಯಾಟ್ಗಳನ್ನು ವಿತರಿಸಲಾಗಿತ್ತು. ಇನ್ನೂ 20 ಸಾವಿರ ಮ್ಯಾಟ್ಗಳಿಗೆ ಬೇಡಿಕೆ ಇದೆ. ಟೆಂಡರ್ ಕರೆದು ಏಪ್ರಿಲ್ ನಂತರ ಎರಡನೇ ಹಂತದಲ್ಲಿ 10 ಸಾವಿರ ಮ್ಯಾಟ್ಗಳನ್ನು ವಿತರಿಸಲಾಗುವುದು ಎಂದು ಹೇಳಿದರು.

ಡೇರಿ ಕಟ್ಟಡ ನಿರ್ಮಿಸಲು ಇ-ಸ್ವತ್ತು ಸಮಸ್ಯೆ ಇದೆ. ಪರವಾನಗಿ ಮತ್ತು ಇ-ಸ್ವತ್ತನ್ನು ಸರಳೀಕರಣ ಮಾಡುವಂತೆ ವಿಧಾನಸಭೆಯ ಕಲಾಪದಲ್ಲಿ ಪ್ರಸ್ತಾಪಿಸಲಾಗಿದೆ. ಇ-ಸ್ವತ್ತು ಸರಳೀಕರಣ ಮಾಡುವುದರಿಂದ ಕಟ್ಟಡ ನಿರ್ಮಿಸಲು ಅನುಕೂಲವಾಗಲಿದೆ. ಪ್ರತಿಯೊಬ್ಬ ರೈತರು, ಜಾನುವಾರುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ಜಾನುವಾರು ಮೃತಪಟ್ಟರೆ ರೈತರಿಗೆ ₹ 60ಸಾವಿರ ಪರಿಹಾರ ದೊರಕುತ್ತದೆ. ಅದೇ ರೀತಿ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಸಾಲ ಪಡೆದಿರುವ 18-40 ವರ್ಷದೊಳಗಿನ ರೈತರು ವಾರ್ಷಿಕ ₹ 437 ವಿಮೆ ಪಾವತಿಸಬೇಕು. ಸ್ವಾಭಾವಿಕವಾಗಿ ಮೃತಪಟ್ಟರೆ ಕೇಂದ್ರ ಸರ್ಕಾರದಿಂದ ₹ 2 ಲಕ್ಷ ವಿಮೆ ಪರಿಹಾರ ಲಭಿಸಲಿದೆ ಎಂದು ತಿಳಿಸಿದರು.

ಹಾಸನದಲ್ಲಿ ಮೆಗಾ ಡೇರಿ ಶೀಘ್ರ ಉದ್ಘಾಟನೆಯಾಗಲಿದೆ. ಹಾಲು ಉತ್ಪಾದಕರ ಹಿತ ಕಾಪಾಡುವುದು ಮುಖ್ಯ. ರಾಜ್ಯದಲ್ಲಿ ಹಾಲಿನ ಉತ್ಪಾದನೆಯಲ್ಲಿ ಚನ್ನರಾಯಟ್ಟಣ ತಾಲ್ಲೂಕು ನಾಲ್ಕನೇ ಸ್ಥಾನದಲ್ಲಿದೆ. ಹಾಸನ, ಕನಕಪುರ, ಚನ್ನಪಟ್ಟಣ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿದೆ ಎಂದು ಹೇಳಿದರು.

ನಿರ್ದೇಶಕಿ ಕೆ.ವಿ. ವಸಂತಮ್ಮ, ಎಂಪಿಎಂಸಿ ಮಾಜಿ ಅಧ್ಯಕ್ಷರಾದ ಬಿ.ಎಚ್. ಶಿವಣ್ಣ, .ವಿ.ಎನ್. ಮಂಜುನಾಥ್, ಅಧಿಕಾರಿಗಳಾದ ಕೃಷ್ಣಮೂರ್ತಿ, ದಯಾನಂದ್, ಯೋಗೀಶ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-36-1446130177

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.