ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ಕಿರಣ್‌ ಕುಮಾರ್‌ ಆತ್ಮಹತ್ಯೆ ಪ್ರಕರಣ: ಅಂತಿಮ ಹಂತದಲ್ಲಿ ಪೊಲೀಸ್‌ ತನಿಖೆ

ಚನ್ನರಾಯಪಟ್ಟಣ ನಗರ ಠಾಣೆ ಪಿಎಸ್‌ಐ ಕಿರಣ್‌ ಕುಮಾರ್‌ ಆತ್ಮಹತ್ಯೆ ಪ್ರಕರಣ
Last Updated 27 ಸೆಪ್ಟೆಂಬರ್ 2020, 11:14 IST
ಅಕ್ಷರ ಗಾತ್ರ

ಹಾಸನ: ಚನ್ನರಾಯಪಟ್ಟಣ ನಗರ ಠಾಣೆ ಕಿರಣ್ ಕುಮಾರ್ ಆತ್ಮಹತ್ಯೆ ಪ್ರಕರಣದ ತನಿಖೆ ಅಂತಿಮ ಹಂತಕ್ಕೆ ಬಂದಿದೆ ಎಂದು ತಿಳಿದು ಬಂದಿದೆ.

ತನಿಖಾಧಿಕಾರಿಯಾಗಿರುವ ಅರಸೀಕೆರೆ ಡಿವೈಎಸ್‌ಪಿ ನಾಗೇಶ್‌ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರಕುಟುಂಬದ ಸದಸ್ಯರು, ಮಾಧ್ಯಮದವರು, ರಾಜಕೀಯ ಮುಖಂಡರು ಸೇರಿ ವಿವಿಧ ಕ್ಷೇತ್ರಗಳ ಹಲವುಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಆತ್ಮಹತ್ಯೆಗೂ ಮುನ್ನ ಕಿರಣ್‌ ಮೊಬೈಲ್‌ಗೆ ಕರೆ ಮಾಡಿ, ಮಾಧ್ಯಮದವರು, ಜನಪ್ರತಿನಿಧಿಗಳು ಮಾತನಾಡಿದ್ದಾರೆ. ಇವರಲ್ಲಿ ಮಾಧ್ಯಮದವರ ವಿಚಾರಣೆ ಮುಗಿದಿದೆ. ಜನಪ್ರತಿನಿಧಿಗಳು, ರಾಜಕೀಯಮುಖಂಡರು, ಅವರ ಆಪ್ತ ಸಹಾಯಕರ ವಿಚಾರಣೆ ಬಾಕಿ ಇದೆ. 30ಕ್ಕೂಹೆಚ್ಚು ಜನರ ವಿಚಾರಣೆ ಪೂರ್ಣಗೊಂಡಿದೆ.‌

ಒಂದೂವರೆ ವರ್ಷದಿಂದ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಆಗಿ ಕರ್ತವ್ಯನಿರ್ವಹಿಸುತ್ತಿದ್ದ ಅರಸೀಕೆರೆ ತಾಲ್ಲೂಕಿನ ಲಾಳನಕೆರೆ ಗ್ರಾಮದ ಕಿರಣ್‌ ಕುಮಾರ್, ಜುಲೈ 31ರಂದು ಬೆಳಿಗ್ಗೆ ತಮ್ಮ ನಿವಾಸದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆ ನಡೆದಾಗ ಪತ್ನಿ, ಮಕ್ಕಳು ಮನೆಯಲ್ಲಿ ಇರಲಿಲ್ಲ.ಚನ್ನರಾಯಪಟ್ಟಣ ನಗರ ಠಾಣೆ ವ್ಯಾಪ್ತಿಯಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ ಎರಡು ಕೊಲೆಗಳು ನಡೆದಿದ್ದವು. ಜುಲೈ 30ರಂದು ಬಾಗೂರು ರಸ್ತೆಯಲ್ಲಿ ನಡೆದಿದ್ದ ಸಮೀವುಲ್ಲಾ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳನ್ನುಬಂಧಿಸುವಲ್ಲಿ ಕಿರಣ್‌ ಯಶಸ್ವಿಯಾಗಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಸ್ಥಳೀಯ ಕಾಂಗ್ರೆಸ್‌ ಮುಖಂಡರೊಬ್ಬರ
ಕಾರು ಚಾಲಕ ಸಂಪತ್‌ ಕೊಲೆ ಆಗಿತ್ತು. ಇದು ರಾಜಕೀಯ ತಿರುವು ಪಡೆದುಕೊಂಡಿತ್ತು.

ಕಿರಣ್‌ ಕುಮಾರ್ ಆತ್ಮಹತ್ಯೆಗೆ ಮೇಲಧಿಕಾರಿಗಳು ಹಾಗೂ ರಾಜಕಾರಣಿಗಳ ಕಿರುಕುಳ ಕಾರಣ ಎಂಬಆರೋಪವೂ ಕೇಳಿ ಬಂದಿತ್ತು. ಪಟ್ಟಣದಲ್ಲಿ ಸರಣಿ ಕೊಲೆ ಹಿನ್ನೆಲೆಯಲ್ಲಿ ದಕ್ಷಿಣ ವಲಯ ಐಜಿಪಿ ವಿಫುಲ್ ಕುಮಾರ್‌ ಭೇಟಿ ನೀಡುತ್ತಿದ್ದು, ಅವರ ಅಮಾನತು ಆದೇಶ ಹೊರ ಬೀಳಲಿದೆ ಎಂಬ ವಂದತಿಗಳೂ ಹರಿದಾಡಿದವು. ಆದರೆ,ಐಜಿಪಿ ಚನ್ನರಾಯಪಟ್ಟಣಕ್ಕೆ ಬರುವ ಮಾಹಿತಿ ಕಿರಣ್‌ ಕುಮಾರ್ ಅವರಿಗೆ ತಿಳಿದಿರಲೇ ಇಲ್ಲ. ಅಲ್ಲದೇ ಸೌಮ್ಯಸ್ವಭಾವದ ಕಿರಣ್‌ಗೆ ಕರ್ತವ್ಯವೇ ದೇವರೆಂದೂ ನಂಬಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಆತ್ಮಹತ್ಯೆ ಪ್ರಕರಣ ತನಿಖೆ ಪ್ರಗತಿಯಲ್ಲಿದ್ದು, ಪೂರ್ಣಗೊಂಡ ಬಳಿಕ ನಿಖರ ಕಾರಣ ಗೊತ್ತಾಗಲಿದೆ’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT