ಚನ್ನರಾಯಪಟ್ಟಣ: ‘ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡುವುದರಿಂದ ನೊಂದವರಿಗೆ ಸಹಾಯವಾಗಲಿದೆ’ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಪಟ್ಟಣದ ಸರ್ಕಾರಿ ನೌಕರ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ತಾಲ್ಲೂಕು ಕೇಂದ್ರದಲ್ಲಿಯೂ ರಕ್ತದಾನ ಕೇಂದ್ರ ಇರುವುದರಿಂದ ಶೀಘ್ರದಲ್ಲಿ ರಕ್ತದ ನೆರವು ದೊರಕಲಿದೆ. ಈ ಕ್ಷೇತ್ರದಲ್ಲಿ ರೆಡ್ ಕ್ರಾಸ್ ಸಂಸ್ಥೆ ಹಲವು ವರ್ಷಗಳಿಂದ ಗಣನೀಯ ಸೇವೆ ಮಾಡುತ್ತಿದೆ. ಪ್ರಥಮ ಮತ್ತು ದ್ವಿತೀಯ ಮಹಾಯುದ್ದದಲ್ಲಿ ಗಾಯಾಳುಗಳಿಗೆ ಶುಶ್ರೂಷೆ ಮಾಡಿತು. ಇಡೀ ಪ್ರಪಂಚದಲ್ಲಿ ಸಂಸ್ಥೆ ಸ್ತುತ್ಯಾರ್ಹ ಕೆಲಸವನ್ನು ರೆಡ್ ಕ್ರಾಸ್ ಸಂಸ್ಥೆ ಮಾಡುತ್ತಿದೆ ಎಂದು ಶ್ಲಾಘಿಸಿದರು.

ನಿಯಮಿತವಾಗಿ ರಕ್ತದಾನ ಮಾಡಿದರೆ ಆರೋಗ್ಯ ಚೆನ್ನಾಗಿರುತ್ತದೆ. ಕಷ್ಟದಲ್ಲಿರುವರಿಗೆ ನೆರವಾಗುತ್ತದೆ. ರಕ್ತದಾನಕ್ಕೆ ಪರ್ಯಾಯ ವಸ್ತು ಇಲ್ಲ ಎಂದು ತಿಳಿಸಿದರು.

ತಹಶೀಲ್ದಾರ್ ಜಿ.ಎಸ್.ಶಂಕರಪ್ಪ ಮಾತನಾಡಿ, ನೊಂದವರಿಗೆ ಸಹಾಯ ಹಸ್ತಚಾಚುವ ಮೂಲಕ ಸೇವೆ ಮಾಡುವುದು ಮತ್ತು ಯುದ್ಧದಲ್ಲಿ ಗಾಯಾಳುಗಳಿಗೆ ಶುಶ್ರೂಷೆ ಮಾಡುವುದು ರೆಡ್ ಕ್ರಾಸ್ ಸಂಸ್ಥೆಯ ಮುಖ್ಯ ಉದ್ದೇಶ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಚ್.ಸತೀಶ್, ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಎಚ್.ಪಿ.ಮೋಹನ್, ಉಪಸಭಾಪತಿ ವೈ.ಎಸ್.ವೀರಭದ್ರಪ್ಪ, ವಿವೇಕಾನಂದ ಯುವ ಸಂಘಟನೆಯ ಜಿಲ್ಲಾ ಸಂಯೋಜಕ ಎಂ.ಎಚ್.ಯೋಗಾನಾಥ್, ಬಿಜೆಪಿ ಮುಖಂಡ ಸಿ.ಆರ್.ಚಿದಾನಂದ್, ತಾಲ್ಲೂಕು ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಎಚ್.ಜಿ.ಭರತ್ಕುಮಾರ್, ಕಾರ್ಯದರ್ಶಿ ಸಿ.ಎನ್.ಜಬಿವುಲ್ಲಾಬೇಗ್, ಖಜಾಂಚಿ ಕಿಶೋರ್ ಕುಮಾರ್, ಪತ್ರಕರ್ತ ಉದಯಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ಎಂ.ಆರ್.ಅನಿಲ್ಕುಮಾರ್, ತಾಲ್ಲೂಕು ಅಂಗವಿಕಲರ ಸಂಘದ ಅಧ್ಯಕ್ಷ ಸಿ.ಜಿ.ಸೋಮಶೇಖರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.