ಚನ್ನರಾಯಪಟ್ಟಣ: ಪ್ರಯಾಣದ ಮಧ್ಯೆ ಬಸ್ನಲ್ಲಿ ಮರೆತು ಹೋಗಿದ್ದ ₹67.5 ಸಾವಿರ ನಗದು ಹಾಗೂ ಚನ್ನರಾಯಪಟ್ಟಣದ ವರ್ತಕರು ಸಹಿ ಮಾಡಿ ನೀಡಿದ ₹1.10 ಲಕ್ಷ ಮೊತ್ತದ ಚೆಕ್ ಇದ್ದ ಬ್ಯಾಗ್ನ್ನು ಮಾಲೀಕರಿಗೆ ಹಿಂತಿರುಗಿಸುವ ಮೂಲಕ ಚಾಲಕ ಮತ್ತು ನಿರ್ವಾಹಕರು ಪ್ರಾಮಾಣಿಕತೆ ಮೆರೆದಿದ್ದಾರೆ.

ಚನ್ನರಾಯಪಟ್ಟಣದಿಂದ ಹಾಸನಕ್ಕೆ ಪ್ರಯಾಣಿಸುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ತಾಂತ್ರಿಕ ಸಮಸ್ಯೆಯಿಂದ ದುರಸ್ತಿಗಾಗಿ ಘಟಕಕ್ಕೆ ವಾಪಸ್ ತರಲಾಗುತ್ತಿತ್ತು. ಪ್ರಯಾಣಿಕರನ್ನು ಬೇರೆ ಬಸ್ನಲ್ಲಿ ಕಳಿಸಲಾಯಿತು. ಈ ವೇಳೆ ಬಸ್ನಲ್ಲಿದ್ದ ಕಪಿಲ್ ಶರ್ಮಾ ಮತ್ತು ಬಾಲಕಿಶನ್ ಶರ್ಮ ₹67.5 ಸಾವಿರ ನಗದು ಸಹಿ ಮಾಡಿದ ಚೆಕ್ ಇರುವ ಬ್ಯಾಗ್ ಬಿಟ್ಟು ಇಳಿದಿದ್ದರು.

ಬಸ್ ದುರಸ್ತಿಗಾಗಿ ಚನ್ನರಾಯಪಟ್ಟಣ ಘಟಕಕ್ಕೆ ಬಂದಾಗ, ಬ್ಯಾಗ್ ಇರುವುದು ನಿರ್ವಾಹಕ ಜಗದೀಶ ಮತ್ತು ಚಾಲಕ ಎನ್.ಸಿ.ಕೃಷ್ಣೇಗೌಡರ ಗಮನಿಸಿದ್ದು, ಬ್ಯಾಗ್ ಪರಿಶೀಲಿಸಿದ್ದಾರೆ. ಸಹಿ ಮಾಡಿದ ಚೆಕ್ಕು ಹಾಗೂ ನಗದು ಇರುವುದನ್ನು ಗಮನಿಸಿದ ಇಬ್ಬರೂ ಕೂಡಲೇ ಘಟಕ ವ್ಯವಸ್ಥಾಪಕರಿಗೆ ವಿಷಯ ತಿಳಿಸಿದರು.

ಘಟಕ ವ್ಯವಸ್ಥಾಪಕ ಜ್ಞಾನೇಶ್, ಬ್ಯಾಗ್ ಪರಿಶೀಲಿಸಿ ಆಧಾರ್ ಕಾರ್ಡ್ ನಿಂದ ದೂರವಾಣಿ ಸಂಖ್ಯೆಯನ್ನು ಪತ್ತೆ ಹಚ್ಚಿ ಮಾಲೀಕರನ್ನು ಸಂಪರ್ಕಿಸಿದ್ದಾರೆ. ಬ್ಯಾಗ್ ಕಳೆದುಕೊಂಡು ಗಾಬರಿಯಲ್ಲಿದ್ದ ಕಪಿಲ್ ಶರ್ಮಾ ಮತ್ತು ಬಾಲಕಿಶನ್ ಶರ್ಮ, ಚನ್ನರಾಯಪಟ್ಟಣ ಘಟಕವನ್ನು ಸಂಪರ್ಕಿಸಿದ್ದಾರೆ.

ಘಟಕ ವ್ಯವಸ್ಥಾಪಕರು ಹಾಗೂ ಭದ್ರತಾ ಸಿಬ್ಬಂದಿ, ಕಪಿಲ್ ಶರ್ಮಾ ಮತ್ತು ಬಾಲಕಿಶನ್ ಶರ್ಮ ಅವರ ವಿಳಾಸ ದಾಖಲೆಗಳನ್ನು ಖಚಿತ ಪಡಿಸಿಕೊಂಡು ಬ್ಯಾಗ್ ಹಿಂತಿರುಗಿಸಿದ್ದಾರೆ. ಪ್ರಾಮಾಣಿಕತೆ ಮೆರೆದ ನಿರ್ವಾಹಕ ಮತ್ತು ಚಾಲಕರ ಕಾರ್ಯಕ್ಕೆ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿ, ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-36-59662154

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.