ಚನ್ನರಾಯಪಟ್ಟಣ: 80ರ ದಶಕದಲ್ಲಿ ಗೋಕಾಕ್ ವರದಿ ಅನುಷ್ಠಾನಕ್ಕೆ ಕನ್ನಡ ಮೇರುನಟ ರಾಜಕುಮಾರ್ ಪ್ರಾಮಾಣಿಕವಾಗಿ ಹೋರಾಟ ಮಾಡಿದ್ದರು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಪಟ್ಟಣದ ಪುನೀತ್ ರಾಜಕುಮಾರ್ ಉದ್ಯಾನದಲ್ಲಿ ಶುಕ್ರವಾರ ರಾಜಕುಮಾರ್ ಜನ್ಮದಿನ ಹಾಗೂ ಓಪನ್ಜಿಮ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ‘ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಪುತ್ಥಳಿಯನ್ನು ಪಟ್ಟಣದಲ್ಲಿ ಸ್ಥಾಪಿಸಬೇಕು ಎಂದು ಸಂಘದ ಅಧ್ಯಕ್ಷ ಪುಟ್ಟಣ್ಣ ಮನವಿ ಮಾಡಿದ್ದು. ಅದಕ್ಕೆ ಪೂರಕವಾಗಿ ಸ್ಪಂದಿಸಲಾಗುವುದು’ ಎಂದರು.

ರಾಜ್ಕುಮಾರ್ ಅಭಿಮಾನಿಗಳ ಸಂಘದ ತಾಲ್ಲೂಕು ಅಧ್ಯಕ್ಷ ಪುಟ್ಟಣ್ಣ ಮಾತನಾಡಿ, ‘ರಾಜಕುಮಾರ್ ಹಾಗೂ ಚನ್ನರಾಯಪಟ್ಟಣಕ್ಕೂ ಅವಿನಾಭಾವ ಸಂಬಂಧವಿದ್ದು, ಗೋಕಾಕ್ ಚಳವಳಿಯ ಸಂದರ್ಭದಲ್ಲಿ ಪಟ್ಟಣದ ಹಳೆ ಬಸ್ ನಿಲ್ದಾಣಕ್ಕೆ ರಾಜಕುಮಾರ್ ಆಗಮಿಸಿ ಭಾಷಣ ಮಾಡಿದ್ದರು. ಅವರ ಸರಳತೆ ಎಲ್ಲರಿಗೆ ಮಾದರಿ’ ಎಂದರು.

ರಾಜ್ಕುಮಾರ್ ಸಂಘದ ಜಿಲ್ಲಾ ಗೌರವಾಧ್ಯಕ್ಷ ಬಾಳ್ಳುಗೋಪಾಲ್ ಮಾತನಾಡಿದರು. ಡಿವೈಎಸ್ಪಿ ಕುಮಾರ್, ಸಾಹಿತಿ ಹೊನ್ನ ಶೆಟ್ಟಿ ಹಳ್ಳಿ ಗಿರಿರಾಜ್, ಪುರಸಭೆ ಮುಖ್ಯಾಧಿಕಾರಿ ಆರ್.ಯತೀಶ್ ಕುಮಾರ್, ಪುರಸಭಾ ಮಾಜಿ ಅಧ್ಯಕ್ಷರಾದ ಸಿ.ಎನ್. ಮೋಹನ್, ಕೆ.ಎನ್. ಬನಶಂಕರಿ, ಮಾಜಿ ಸದಸ್ಯರಾದ ಕವಿತಾ, ಗಣೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಎಚ್.ಆರ್. ವೆಂಕಟೇಶ್, ನಿರ್ದೇಶಕ ಎಂ.ಆರ್. ಅನಿಲ್ ಕುಮಾರ್, ಕಲಾವಿದ ನಂಜುಂಡ ಮೈಮ್, ರಾಜಕುಮಾರ್ ಅಭಿಮಾನಿಗಳ ಸಂಘದ ಸದಸ್ಯರಾದ ರಾಮಚಂದ್ರು, ದಿನೇಶ್, ಮಹೇಶ್, ರೇವಣ್ಣ, ರುದ್ರೇಶ್, ತೀರ್ಥ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-36-1368772019

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.