ಚನ್ನರಾಯಪಟ್ಟಣ: ಪಟ್ಟಣದಲ್ಲಿ ಸೋಮವಾರ ಸಂಜೆ 40 ನಿಮಿಷಗಳ ಕಾಲ ಉತ್ತಮ ಮಳೆಯಾಯಿತು.

ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣವಿತ್ತು, ಸಂಜೆ ಗುಡುಗು ಸಹಿತ ಮಳೆಯಾಯಿತು. ಮುಖ್ಯರಸ್ತೆಯ ಮೇಲೆ ಮಳೆ ನೀರು ಹರಿಯಿತು.

ನವೋದಯ ವೃತ್ತದ ತಗ್ಗು ಪ್ರದೇಶದಲ್ಲಿ ರಸ್ತೆಯ ಒಂದು ಬದಿಯಲ್ಲಿ ನೀರು ಹರಿದರೆ, ಮಾಧ್ಯಮಿಕ ಶಾಲಾ ಆವರಣದಲ್ಲಿ ಅಲ್ಲಲ್ಲಿ ನೀರು ನಿಂತಿತ್ತು. ಮಳೆಯಿಂದ ವಾತಾವರಣ ತಂಪಾಯಿತು.

ಹಳೇಬೀಡು ವರದಿ: ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸೋಮವಾರ ಸಂಜೆ ಅರ್ಧ ಗಂಟೆಗೂ ಹೆಚ್ಚು ಸಮಯ ಮಳೆ ಸುರಿದು ಭೂಮಿ ತಂಪಾಯಿತು.

ಮಳೆಗಾಗಿ ಕಾಯುತ್ತಿದ್ದ ರೈತರ ಮುಖದಲ್ಲಿ ಹರ್ಷ ಕಂಡು ಬಂತು.

‘ಮುಂಗಾರು ಕೃಷಿ ಕೈಗೊಳ್ಳಲು ಮಾರ್ಚ್ ತಿಂಗಳಿನಿಂದಲೇ ಆಗಾಗ್ಗೆ ಮಳೆ ಬೀಳಬೇಕಾಗಿತ್ತು. ಯುಗಾದಿ ನಂತರ ಎರಡು ದಿನ ಸಾಧಾರಣ ಮಳೆ ಬಂದಿತ್ತು. ಮುಂಗಾರು ಮಳೆಯಾದರೂ ಸಕಾಲಕ್ಕೆ ಬಿದ್ದರೆ ಮುಂದಿನ ಕೃಷಿ ಕೈಗೊಳ್ಳಬಹುದು. ಬತ್ತಿ ಹೋಗುತ್ತಿದ್ದ ಅಂತರ್ಜಲ ವೃದ್ಧಿಗೆ ಅನುಕೂಲವಾಗುತ್ತದೆ’ ಎಂದು ರೈತ ಮಲ್ಲಿಕಾರ್ಜುನ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-36-432097778

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.