ಚನ್ನರಾಯಪಟ್ಟಣ: ‘ಮಹಾವೀರ ತೀರ್ಥಂಕರರು ಜಗತ್ತಿಗೆ ಸತ್ಯ, ಶಾಂತಿ, ಅಹಿಂಸೆಯ ತತ್ವವನ್ನು ಬೋಧಿಸಿದರು’ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ತಾಲ್ಲೂಕು ಆಡಳಿತದಿಂದ ಪಟ್ಟಣದಲ್ಲಿ ಸೋಮವಾರ ಏರ್ಪಡಿ ಸಿದ್ದ ಮಹಾವೀರ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, 24 ತೀರ್ಥಂಕರರಲ್ಲಿ ವರ್ಧಮಾನ ಮಹಾವೀರರು ಕೊನೆಯವರು. ಸರ್ವಜನರ ಕಲ್ಯಾಣಕ್ಕಾಗಿ ದುಡಿದರು. ಮಹಾವೀರರ ತೀರ್ಥಂಕರರ ಜೀವನವನ್ನು ಅರ್ಥೈಸಿಕೊಂಡು ನಡೆದರೆ ಶಾಂತಿಯುತ ಬಾಳ್ವೆ ಸಾಧ್ಯವಾಗುತ್ತದೆ. ಪ್ರಪಂಚಕ್ಕೆ ಜೈನಧರ್ಮದ ಕೊಡುಗೆ ಅನನ್ಯವಾದುದು’ ಎಂದು ಹೇಳಿದರು.

ಈಚೆಗೆ ಅಶಾಂತಿ, ಆತಂಕದ ವಾತಾವರಣದ ಸೃಷ್ಟಿಯಾಗುತ್ತಿದ್ದು, ದ್ವೇಷ, ಅಸೂಯೆ, ಸ್ವಾರ್ಥ ಹೆಚ್ಚಾಗುತ್ತಿದೆ. ಇವುಗಳನ್ನು ದೂರಮಾಡಿ ಸ್ವಾರ್ಥರಹಿತ ಜೀವನ ನಡೆಸಿದರೆ ಸಾಮರಸ್ಯದ ಬದುಕು ನಮ್ಮದಾಗುತ್ತದೆ. ಪ್ರಪಂಚಕ್ಕೆ ಸತ್ಯಾಸತ್ಯತೆ ಸಾರಿದ ಭಗವಾನ್ ಬಾಹುಬಲಿ ನೆಲೆಸಿರುವ ಕ್ಷೇತ್ರ ಶ್ರವಣಬೆಳಗೊಳ. ಏ.2ರಂದು ಶ್ರವಣಬೆಳಗೊಳದಲ್ಲಿ ರಥೋತ್ಸವ ಜರುಗಲಿದೆ’ ಎಂದು ತಿಳಿಸಿದರು.

ಶ್ವೇತಾಂಬರ ಜೈನ ಸಮಾಜದ ಅಧ್ಯಕ್ಷ ಅಶೋಕ್ ಕುಮಾರ್ ಜೈನ್, ಟಿಎಪಿಸಿಎಂಎಸ್ ನಿರ್ದೇಶಕ ಎಂ.ಆರ್. ಅನಿಲ್ಕುಮಾರ್, ಜ್ವಾಲಾಮಾಲಿನಿ ಜೈನಮಹಿಳಾ ಮಂಡಳಿ ಅಧ್ಯಕ್ಷೆ ಯಶೋಧಜೈನ್, ಕಾರ್ಯದರ್ಶಿ ಮಮತಾ, ಪದಾಧಿಕಾರಿಗಳಾದ ಸುಜಾತಾ, ನಾಗರಾಜಯ್ಯ, ಭಾನುಕುಮಾರ್, ಶಿರಸ್ತೆದಾರ್ ಪವನ್ ಮಾರ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-36-916631718

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.