ಮೋಡಿ ಮಾಡಿದ ಚೆನ್ನೈ ಸಹೋದರಿಯರ ಯುಗಳಗಾಯನ

ಬುಧವಾರ, ಜೂನ್ 19, 2019
28 °C

ಮೋಡಿ ಮಾಡಿದ ಚೆನ್ನೈ ಸಹೋದರಿಯರ ಯುಗಳಗಾಯನ

Published:
Updated:
Prajavani

ಕೊಣನೂರು: ರಾಮನಾಥಪುರ ಹೋಬಳಿಯ ರುದ್ರಪಟ್ಟಣದಲ್ಲಿ ಹಮ್ಮಿಕೊಂಡಿರುವ 18ನೇ ವಾರ್ಷಿಕ ಸಂಗೀತೋತ್ಸವದ ಮೂರನೇ ದಿನವಾದ ಶನಿವಾರ ಚೆನ್ನೈನ ಅಕ್ಕರೈ ಸಹೋದರಿಯರಾದ ಎಸ್.ಶುಭಲಕ್ಷ್ಮಿ ಮತ್ತು ಎಸ್.ಸ್ವರ್ಣಲತಾ ನಡೆಸಿಕೊಟ್ಟ ಸಂಗೀತ ಯುಗಳಗಾಯನ ಕೇಳುಗರನ್ನು ಹಿಡಿದಿಟ್ಟಿತು.

ಬೆಳಿಗ್ಗೆ 10.30ಕ್ಕೆ ಇಲ್ಲಿನ ಶ್ರೀರಾಮ ಮಂದಿರದಲ್ಲಿ ಆರಂಭವಾದ ಯುಗಳಗಾಯನ, ಸುಮಾರು 2 ಗಂಟೆಗೂ ಹೆಚ್ಚು ಕಾಲ ಸಂಗೀತ ಕ್ಷೇತ್ರದ ಧ್ರುವತಾರೆಗಳಾದ ತ್ಯಾಗರಾಜರು, ಸ್ವರ್ಣಲತಾ ಮುಂತಾದವರು ರಚಿಸಿದ ಅನೇಕ ಕೃತಿಗಳನ್ನು ರಾಗವಾಗಿ ಹಾಡಿ ಸಂಗೀತಪ್ರಿಯರನ್ನು ಮಂತ್ರಮುಗ್ಧಗೊಳಿಸಿದರು.

ಅನೇಕ ಜನಪ್ರಿಯ ಸಂಗೀತ ಕೃತಿಗಳನ್ನು ಹಾಡಿದ ಸೋದರಿಯರು ಮೇರುಸಮಾನ ಕೃತಿಯನ್ನು ಮಾಯಮಾಳವಗೌಳ ರಾಗದಲ್ಲಿ, ನನ್ನೂನ್ರೋವಾ ಕೃತಿಯನ್ನು ಜ್ಯೋತಿಸ್ವರೂಪಿಣೆ ರಾಗದಲ್ಲಿ, ಬ್ರೋವಬಾರಮ್ಮ ಕೃತಿಯನ್ನು ಬಹುದ್ವಾರಿ ರಾಗದಲ್ಲಿ ಮತ್ತು ಕನಕಭೂಷಣ ಕೃತಿಯನ್ನು ಪ್ರಸ್ತುತಿಪಡಿಸಿ ರಾಗಸುಧೆ ಹರಿಸಿ ಪ್ರತಿಹಂತದಲ್ಲೂ ಚಪ್ಪಾಳೆ ಗಿಟ್ಟಿಸಿದರು.

ವಿದ್ವಾನ್ ಚಾರುಲತಾ ವಯಲಿನ್, ವಿದ್ವಾನ್ ಜಯಚಂದ್ರರಾವ್ ಮೃದಂಗ, ಗಿರಿಧರ ಉಡುಪ ಘಟಂ ನುಡಿಸಿ ರಾಗತಾಳ ಮೇಳೈಸಿದರು.

ಸಹೋದರಿಯರ ಸುಶ್ರಾವ್ಯಗಾಯನ, ಅನುಭವಿ ಪಕ್ಕವಾದ್ಯ ಕಲಾವಿದರಿಂದ ಹದವರಿತ ತಾಳಸಂಯೋಜನೆ ಸಂಗೀತ ರಸಿಕರ ಮನತಣಿಸಿತು. ಶುಕ್ರವಾರ ಸಂಜೆ ಸಂಗೀತಪ್ರಧಾನ ಕೃತಿಗಳನ್ನು ವಿದ್ವಾನ ಕಲ್ಯಾಣಪುರಂ ಎಸ್.ಅರವಿಂದ್ ಹಾಡಿ ಮೆಚ್ಚುಗೆ ಗಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !