ಹಳೇಬೀಡು: ಅಡಗೂರು ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮಂಗಳವಾರ ಮಳೆ ಮುಂದುವರಿದ್ದು, ಬಿರುಗಾಳಿ ಹಾಗೂ ಆಲಿಕಲ್ಲು ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದೆ.

ರಭಸವಾಗಿ ಸುರಿದ ಮಳೆಯಿಂದ ಹೊಲ, ಗದ್ದೆ, ತೋಟಗಳಿಗೆ ನೀರು ನುಗ್ಗಿದೆ. ನೀರಿನ ರಭಸಕ್ಕೆ ಅಳಿದುಳಿದ ಸಿಹಿಕುಂಬಳ (ಸೋರೆ), ಟೊಮೆಟೊ, ಬೀನ್ಸ್ ಮೊದಲಾದ ಬೆಳೆಗಗಳು ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿವೆ. ಸಾಲ ಮಾಡಿ ಹಾಕಿದ ಬಂಡವಾಳವನ್ನು ನೀರಿಗೆ ಸುರಿದಂತಾಗಿದೆ ಎಂದು ರೈತ ಹೋರಾಟಗಾರ ವಿಜಯ್ ಕುಮಾರ್ ಮುತ್ತಯ್ಯ ಹೇಳಿದರು.

ಶರವೇಗದಲ್ಲಿ ಮಳೆ ನೀರು ಜಮೀನುಗಳಿಗೆ ನುಗ್ಗಿದ್ದರಿಂದ ಮಣ್ಣು ಕೊಚ್ಚಿ ಹೋಗಿದೆ. ಕೆಲವು ತೋಟಗಳಲ್ಲಿ ತೆಂಗು ಅಡಿಕೆ ಮರದ ಬೇರುಗಳು ಭೂಮಿಯಿಂದ ಮೇಲೆ ಕಾಣುವಂತೆ ಮಣ್ಣು ಸವೆದು ಹೋಗಿದೆ. ಸೋಮವಾರ ಬಿದ್ದ ಗಾಳಿ ಮಳೆಗೆ ಕಲವೆಡೆ ಮರಗಳು ಉರುಳಿವೆ. ತೋಟಗಳಲ್ಲಿ ಮಣ್ಣು ಕೊಚ್ಚಿ ಹೋಗುವಂತೆ ಮಳೆ ನೀರು ನುಗ್ಗಿರುವುದರಿಂದ ಮರದ ಬುಡಗಳು ಸಡಿಲವಾಗುವ ಸಾಧ್ಯತೆ ಇದೆ. ಹೊಲಗಳ ಮಧ್ಯೆ ನೀರು ನುಗ್ಗಿದ್ದರಿಂದ ಕೊರಕಲು ಬಿದ್ದಿದೆ. ನೀರು ನುಗ್ಗಿದ ತೋಟ ಹಾಗೂ ಹೊಲಗಳನ್ನು ಮುಂದಿನ ಕೃಷಿಗೆ ಸಿದ್ಧ ಮಾಡಿಕೊಳ್ಳುವುದು ಸುಲಭ ಸಾಧ್ಯವಾಗಿಲ್ಲ ಎಂಬ ಮಾತು ರೈತರಿಂದ ಕೇಳಿ ಬಂತು.

ಮುಂಗಾರು ಕೃಷಿ ಆರಂಬಿಸುವ ಉದ್ದೇಶದಿಂದ ಎರಡು ತಿಂಗಳಿನಿಂದ ಮಳೆಗಾಗಿ ಕಾಯುತ್ತಿದ್ದೆವು. ಸಕಾಲಕ್ಕೆ ಮಳೆ ಬೀಳಲಿಲ್ಲ. ತಡವಾಗಿ ಬಿದ್ದ ಮಳೆ ರೈತರಿಗೆ ನಷ್ಟ ಮಾಡುತ್ತಿದೆ ಎಂದು ಅಡಗೂರು ಗ್ರಾಮಸ್ಥ ಮ್ಯಾಕನಿಕ್ ಕುಮಾರ್ ಹೇಳಿದರು.

ಜಿ.ಸಾಣೇನಹಳ್ಳಿ ಗ್ರಾಮದಲ್ಲಿಯೂ ಮಳೆ ನೀರು ಜಮೀನುಗಳಿಗೆ ನುಗ್ಗಿ ಹಾನಿಯಾಗಿದೆ. ಕರೀಕಟ್ಟೆಹಳ್ಳಿ ಭಾಗದ ತೋಟದ ಬಯಲಿನಲ್ಲಿ ಮಳೆ ಅರ್ಭಟಕ್ಕೆ ತೆಂಗು, ಅಡಿಕೆ ಮರಗಳು ನೆಲಕ್ಕೆ ಬಿದ್ದಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-36-1763729605

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.