ಹಾಸನ: ರೈತರು ಕೃಷಿ ಚಟುವಟಿಕೆಯಲ್ಲಿ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸದೇ ಪ್ರಕೃತಿಯ ನಿಯಮಗಳನ್ನು ಆಧರಿಸಿ, ಸ್ಥಳೀಯ ಜಾನುವಾರುಗಳನ್ನು ವಿಶೇಷವಾಗಿ ದೇಸಿ ಹಸುಗಳನ್ನು ಬಳಸಿಕೊಂಡು ಬೆಳೆಗಳನ್ನು ಬೆಳೆಯುವ ಸುಸ್ಥಿರ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಸಾವಯವ, ನೈಸರ್ಗಿಕ ಕೃಷಿಕ ಚಿಕ್ಕಮಗಳೂರು ಜಿಲ್ಲೆಯ ಮುಕ್ತಿಹಳ್ಳಿ ಚಂದ್ರಶೇಖರ್ ಹೇಳಿದರು.

ನಗರದ ಜಂಟಿ ಕೃಷಿಕ ನಿರ್ದೇಶಕರ ಕಚೇರಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ನೈಸರ್ಗಿಕ ಕೃಷಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಪರಿಸರಕ್ಕೆ ಹಾನಿ ಆಗದಂತೆ ರೈತರ ಆದಾಯ ಹೆಚ್ಚಿಸುತ್ತದೆ ಎಂದರು.

ಇತ್ತೀಚಿನ ದಿನಗಳಲ್ಲಿ ರಸಗೊಬ್ಬರ ಹಾಗೂ ಇತರೆ ಪರಿಕರಗಳ ಕೊರತೆ ಹೆಚ್ಚಾಗಿದ್ದು, ರೈತರು ಸ್ವಾವಲಂಬಿಗಳಾಗಿ ತಮ್ಮಲ್ಲೇ ದೊರೆಯುವ ಕೃಷಿ ತ್ಯಾಜ್ಯಗಳನ್ನು ಬಳಸಿ, ಸಾವಯವ ಗೊಬ್ಬರಗಳಾದ ಹಸಿರೆಲೆ ಗೊಬ್ಬರ, ಎರೆಹುಳು ಗೊಬ್ಬರ, ಹಸುವಿನ ಗೊಬ್ಬರ, ಜೀವಾಮೃತ, ಸಸ್ಯ ಜನ್ಯ, ಪ್ರಾಣಿ ಜನ್ಯ ಕೀಟನಾಶಕಗಳನ್ನು ತಯಾರಿಸಿಕೊಳ್ಳವಂತೆ ತಿಳಿಸಿದರು.

ಬೀಜ ಸಂಸ್ಕರಣೆ ಮಾಡುವ ಮೂಲಕ ಬೀಜೋತ್ಪಾದನೆ ಮಾಡಿಕೊಂಡು ವಿಷಮುಕ್ತ ಮತ್ತು ಆರೋಗ್ಯಕರವಾದ ಉತ್ಪನ್ನಗಳನ್ನು ಸಮಾಜಕ್ಕೆ ನೀಡುವಂತೆ ನೈಸರ್ಗಿಕ, ಸಾವಯವ ಕೃಷಿಯ ಮಹತ್ವವನ್ನು ತಿಳಿಸಿದರು.

ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ. ರಂಗಸ್ವಾಮಿ ಮಾತನಾಡಿ, ದೇಶದಾದ್ಯಂತ ಗೊಬ್ಬರದ ಸಮಸ್ಯೆ ಹೆಚ್ಚಾಗಿದ್ದು, ರೈತರು ನೈಸರ್ಗಿಕ ಕೃಷಿ ಮತ್ತು ಸಾವಯವ ಕೃಷಿ ಅಳವಡಿಸಿಕೊಂಡು ಸ್ವಾವಲಂಬಿ ಆಗಬೇಕು. ಜೀವಾಮೃತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜೀವಾಣುಗಳಿದ್ದು, ಅದನ್ನು ಮಣ್ಣಿಗೆ ಸೇರಿಸಿ ಫಲವತ್ತತೆ ವೃದ್ಧಿಸಿಕೊಳ್ಳಬೇಕು. ಹೊರರಾಜ್ಯದ ಕೃಷಿ ಕಾರ್ಮಿಕರ ಮೇಲೆ ಅವಲಂಬಿತರಾಗದೇ ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ರೋಬೋಟಿಕ್ ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.

ಕಂದಲಿ ಕೃಷಿ ವಿಜ್ಞಾನ ವಿಭಾಗದ ಕೃಷಿ ಎಂಜಿನಿಯರಿಂಗ್ ಶ್ರೀನಿವಾಸ್ ದೇಶಪಾಂಡೆ, ಕೃಷಿಯಲ್ಲಿ ಸಂಪನ್ಮೂಲ ಬಳಕೆ ಉತ್ತಮಗೊಳಿಸಲು ಮತ್ತು ಬೆಳೆ ನಿರ್ವಹಣೆಯನ್ನು ಸುಧಾರಿಸಲು ಕೃಷಿಗೆ ಪೂರಕವಾಗಿ ಕೃಷಿಯಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸುವ ಕುರಿತು ವಿವರಿಸಿದರು.

ಕೃಷಿಯಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ನಿಖರ ಕೃಷಿ ಮತ್ತು ಮಣ್ಣಿನ ನಿರ್ವಹಣೆಗೆ, ಡ್ರೋನ್ ಮತ್ತು ಕ್ಯಾಮೆರಾಗಳ ಮೂಲಕ ಬೆಳೆಗಳನ್ನು ವೀಕ್ಷಿಸಬೇಕು. ರೋಗ ಮತ್ತು ಕೀಟಗಳ ಮುನ್ಸೂಚನೆ ಪಡೆಯಲು, ಹವಾಮಾನ ಮುನ್ಸೂಚನೆ. ಯಂತ್ರಗಳ ಮೂಲಕ ಕಳೆ ನಿರ್ವಹಣೆ ಮತ್ತು ಬೆಳೆ ಕಟಾವು ಕೈಗೊಳ್ಳಲು ಹಾಗೂ ನೀರು, ಕೀಟನಾಶಕ ಮತ್ತು ರಸಗೊಬ್ಬರಗಳ ಸದ್ಬಳಕೆ ಮಾಡಿಕೊಂಡು ಉತ್ಪಾದನ ವೆಚ್ಚವನ್ನು ಕಡಿಮೆ ಮಾಡಲು ಸಹಕಾರಿ ಆಗಿದ್ದು, ರೈತರು ಇದರ ಉಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಸಭೆಯಲ್ಲಿ ರಾಜ್ಯ ಪ್ರತಿನಿಧಿ ಎ.ಪಿ.ಶಿವೇಗೌಡ, ತೋಟಗಾರಿಕೆ ಜಂಟಿ ನಿರ್ದೇಶಕರು ಯೋಗೀಶ ಎಚ್.ಆರ್., ಉಪ ಕೃಷಿ ನಿರ್ದೇಶಕರಾದ ಎ.ಎಸ್.ಕೋಕಿಲಾ ಮತ್ತು ಬಿ.ಎನ್. ಪ್ರಭಾಕರ್, ಡಾ.ಆರ್.ಕೆ. ರಮೇಶ್ ಹಾಗೂ ಮತ್ತಿತರರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-36-777683014

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.