ಮಂಗಳವಾರ, ಡಿಸೆಂಬರ್ 10, 2019
26 °C

ಚಿರತೆ ದಾಳಿಗೆ ಎರಡು ಕುರಿ, ಕರು ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹಾಸನ: ಚಿರತೆ ದಾಳಿಗೆ ಎರಡು ಕುರಿ ಹಾಗೂ ಒಂದು ಕರು ಬಲಿಯಾಗಿರುವ ಘಟನೆ ತಾಲ್ಲೂಕಿನ ಸೋಮನಹಳ್ಳಿ ಗೇಟ್ ಬಳಿ ನಡೆದಿದೆ.

ನಗರದ ಹೊರವಲಯದ ಸೋಮನಹಳ್ಳಿ ಬಳಿಯ ನಾಗರಾಜು ಎಂಬುವರ ಕೋಳಿ ಫಾರಂ ಗೆ ಮಧ್ಯರಾತ್ರಿ 1.30ರ ಸಮಯದಲ್ಲಿ ನುಗ್ಗಿದ ಚಿರತೆ ಎರಡು ಕುರಿ ಹಾಗೂ ಒಂದು ಕರುವಿನ ಕುತ್ತಿಗೆ ಭಾಗಕ್ಕೆ ಬಾಯಿ ಹಾಕಿ ರಕ್ತಹೀರಿ ಸಾಯಿಸಿದೆ. ದನಕರುಗಳ ಚೀರಾಟ ಕೇಳಿ ನಾಗರಾಜು, ಅವರ ಪತ್ನಿ ಶಾಂತಮ್ಮ ಫಾರಂ ಒಳಗೆ ಹೋದಾಗ ಗಾಬರಿಯಿಂದ ಚಿರತೆ ಅಲ್ಲಿಂದ ಓಡಿ ಹೋಗಿದೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದೊಳಗೆ ಆಹಾರ ಅರಸಿ ಬಂದು ಜಾನುವಾರಗಳನ್ನು ಬಲಿ ತೆಗೆದುಕೊಂಡಿರುವುದು ಸ್ಥಳೀಯರ ನಿದ್ದೆಗೆಡಿಸಿದೆ. ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು