ಗುರುವಾರ , ಸೆಪ್ಟೆಂಬರ್ 19, 2019
28 °C
'ಅಣ್ಣ, ತಮ್ಮಂದಿರು ಹೊಡೆದಾಡುವ ಪ್ರಶ್ನೆಯೇ ಇಲ್ಲ'

ಸಿ.ಎಂ ಸ್ಥಾನ ಖಾಲಿ ಇಲ್ಲ, ಪೈಪೋಟಿ ನಡೆಸಲ್ಲ: ರೇವಣ್ಣ

Published:
Updated:
Prajavani

ಹಾಸನ: ‘ನನ್ನ ಮೇಲಿನ ಅಭಿಮಾನದಿಂದ ಸಿದ್ದರಾಮಯ್ಯ ಅವರು ರೇವಣ್ಣಗೂ ಸಿ.ಎಂ ಆಗುವ ಅರ್ಹತೆ ಇದೆ ಎಂದು ಹೇಳಿರಬಹುದು, ಹಿಂದಿನಿಂದಲೂ ಅವರು ನನ್ನ ಹಿತೈಶಿ, ನಾನು ಅವರ ಅಭಿಮಾನಿ’ ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದರು.

‘ರೇವಣ್ಣ ಅವರಿಗೂ ಸಿ.ಎಂ ಆಗುವ ಅರ್ಹತೆ ಇದೆ’ ಎಂಬ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಟ್ವಿಟ್‌ ಮಾಡಿರುವ ಕುರಿತು ಹೊಳೆನರಸೀಪುರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ, ‘ಅವರ ಅಭಿಪ್ರಾಯದ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಕುಮಾರಸ್ವಾಮಿ ಸಿ.ಎಂ ಆಗಿರುವಾಗ ನಾನು ಮುಖ್ಯಮಂತ್ರಿ ಆಗುವ ಪ್ರಶ್ನೆ ಎಲ್ಲಿಂದ ಬಂತು. ಅವರು ಅಧಿಕಾರದಲ್ಲಿ ಇರುವಾಗಲೇ ನಾವು ಪೈಪೋಟಿಗೆ ಬರುವುದಿಲ್ಲ, ಯಾವ ಹಿನ್ನೆಲೆಯಲ್ಲಿ ಈ ರೀತಿ ಚರ್ಚೆಯಾಗಿದೆಯೋ ಗೊತ್ತಿಲ್ಲ’ ಎಂದು ಹೇಳಿದರು.

‘ರಾಜ್ಯದಲ್ಲಿ ಸಿ. ಎಂ ಹುದ್ದೆ ಖಾಲಿ ಇಲ್ಲ, ನಾವು ಅಣ್ಣ, ತಮ್ಮಂದಿರು ಹೊಡೆದಾಡುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಪಪಡಿಸಿದರು.

ಪ್ರಜ್ವಲ್ ರೇವಣ್ಣ ಅವರ ಸುಳ್ಳು ಅಫಿಡವಿಟ್ ಸಲ್ಲಿಕೆ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ರೇವಣ್ಣ, ‘ಚುನಾವಣಾ ಆಯೋಗದ ನಿರ್ದೇಶನ ಪ್ರಕಾರ ಒಮ್ಮೆ ಚುನಾವಣಾ ಅಧಿಕಾರಿ ನಾಮಪತ್ರ ಅಂಗೀಕರಿಸಿದ ಮೇಲೆ ಅದನ್ನ ತಿರಸ್ಕರಿಸುವ ಅಧಿಕಾರ ಇಲ್ಲ. ಏನಿದ್ದರೂ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಚುನಾವಣಾ ಆಯೋಗ ಯಾವ ಆಧಾರದ ಮೇಲೆ ಹೀಗೆ ಮಾಡುತ್ತಿದೆ ಎಂಬುದು ಗೊತ್ತಿಲ್ಲ. ಆ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಉದ್ದೇಶ ಪೂರ್ವಕವಾಗಿಯೇ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ’ ಬಿಜೆಪಿ ಅಭ್ಯರ್ಥಿ ಎ.ಮಂಜು ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು.

 

Post Comments (+)