ಸರಪಳಿರಹಿತ ಸೈಕಲ್‌ ಆವಿಷ್ಕಾರ

ಬುಧವಾರ, ಜೂನ್ 19, 2019
26 °C
ಬಾಹುಬಲಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮಾದರಿಗಳ ಪ್ರದರ್ಶನ

ಸರಪಳಿರಹಿತ ಸೈಕಲ್‌ ಆವಿಷ್ಕಾರ

Published:
Updated:
Prajavani

ಶ್ರವಣಬೆಳಗೊಳ: ಇಲ್ಲಿಯ ಬಾಹುಬಲಿ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ಎಂಜಿನಿಯರಿಂಗ್‌ ವಿದ್ಯಾರ್ಥಿ ಗಳ ಆವಿಷ್ಕರಿಸಿದ ಉಪಕರಣಗಳು ಗಮನ ಸೆಳೆದವು.

ಸಿವಿಲ್‌, ಮೆಕ್ಯಾನಿಕಲ್‌, ಕಂಪ್ಯೂಟರ್‌ ಸೈನ್ಸ್‌, ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯುನಿ ಕೇಷನ್‌ ಎಂಜಿನಿಯರಿಂಗ್‌ ಮತ್ತು ಇನ್ಫರ್ಮೇಷನ್‌ ಸೈನ್ಸ್‌ ಅಂಡ್‌ ಟೆಕ್ನಾಲಜಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು 47 ಮಾದರಿಗಳನ್ನು ಆವಿಷ್ಕರಿಸಿದ್ದಾರೆ. ಕಾಲೇಜಿನಲ್ಲಿ ಆಯೋಜಿಸಿದ್ದ ‘ಆವಿಷ್ಕಾರ– 19’ ಕಾರ್ಯಕ್ರಮದಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು.

ಚಾಕ್‌ ಡಸ್ಟರ್‌ ಕ್ಲೀನರ್‌: ಶಿಕ್ಷಕರು ಬೋರ್ಡ್‌ ಮೇಲೆ ಚಾಕ್‌ಪೀಸ್‌ನಿಂದ ಬರೆದು, ಅದನ್ನು ಅಳಿಸುವಾಗ ಬರುವ ದೂಳು ವಿದ್ಯಾರ್ಥಿಗಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಈ ಸಮಸ್ಯೆಯನ್ನು ಬಗೆಹರಿಸುವ ಉದ್ದೇಶದಿಂದ ಚಾಕ್‌ ಡಸ್ಟರ್‌ ಕ್ಲೀನರ್‌ ಅನ್ನು ಮೆಕ್ಯಾನಿಕಲ್‌ ವಿಭಾಗದ ವಿದ್ಯಾರ್ಥಿಗಳಾದ ಅನಿಲ್‌ಕುಮಾರ್‌, ಮಂಜುನಾಥ್‌, ರಾಹುಲ್‌, ಸಚಿನ್‌ ಕಂಡುಹಿಡಿದಿದ್ದಾರೆ. ಈ ವಸ್ತುವು ಚಾಕ್‌ಪೀಸ್‌ನ ದೂಳನ್ನು ಸಂಗ್ರಹಿಸುತ್ತದೆ. ಉಪನ್ಯಾಸಕ ಎಂ.ಜೆ.ರಘು ಅವರು ಮಾರ್ಗದರ್ಶನ ನೀಡಿದ್ದಾರೆ.

ಟ್ರೀ ಬ್ರಾಂಚ್‌ ಟ್ರಿಮಿಂಗ್‌ ಮಿಷಿನ್‌: ಮರದ ರೆಂಬೆ, ಕೊಂಬೆಗಳನ್ನು ಕತ್ತರಿಸುವಂತಹ ಉಪಕರಣವನ್ನು ಮೆಕ್ಯಾನಿಕಲ್‌ ವಿಭಾಗದ ಸಚಿನ್‌, ಅಭಿಲಾಷ್‌, ಪವನ್‌, ಪ್ರಜ್ವಲ್‌ ಆವಿಷ್ಕರಿಸಿದ್ದಾರೆ. ಉಪನ್ಯಾಸಕ ಎನ್‌.ಮಂಜುನಾಥ್‌ ಮಾರ್ಗದರ್ಶನ ನೀಡಿದ್ದಾರೆ.

ವಾಹನ ಸ್ವಚ್ಛಗೊಳಿಸಲು ಬಳಸುವ ಸಾಬೂನುಮಿಶ್ರಿತ ನೀರನ್ನು ಹೊರಗೆ ಬಿಡಲಾಗುತ್ತಿದೆ. ಅದನ್ನು ಪುನರ್‌ ಬಳಕೆ ಮಾಡುವಂತಹ ಸಾಧನವನ್ನು ಜಿ.ಎನ್‌.ನಿಹಾರ್‌, ಆರ್‌.ಮೋಹಿತ್‌ ಕುಮಾರ್‌, ಎಸ್‌.ಎನ್‌.ನಮಿತಾ ಜೈನ್‌, ಎಸ್‌.ಎನ್‌.ರೇಣು ಪ್ರಶಾಂತ್‌ ಅವರು ಸಹಾಯಕ ಪ್ರಾಧ್ಯಾಪಕ ಪಿ.ಕಿರಣ್‌ ಮಾರ್ಗದರ್ಶನದಲ್ಲಿ ಕಂಡುಹಿಡಿದಿದ್ದಾರೆ. ಡ್ರಮ್‌ಗಳಲ್ಲಿ ಶೇಖರಿಸಿ ಮರಳು ಮತ್ತು ಸಣ್ಣ ಜಲ್ಲಿಯ ಮುಖಾಂತರ ಹಾಯಿಸಲಾಗುತ್ತದೆ. ಕಲುಷಿತ ನೀರು ಬೇರ್ಪಟ್ಟು, ಸ್ವಚ್ಛ ನೀರು ದೊರೆಯುತ್ತದೆ.

ಪಡಿತರ ವಿತರಿಸುವ ಸಾಧನ

ಪಡಿತರ ವಿತರಣೆ ಸಂದರ್ಭದಲ್ಲಿ ತೂಕದಲ್ಲಿ ಆಗುವ ಮೋಸವನ್ನು ತಪ್ಪಿಸುವ ಉದ್ದೇಶದಿಂದ ಎಚ್‌.ಆರ್‌.ಅಪೂರ್ವ, ಡಿ.ಎಸ್‌.ಚಂದನ, ಎಚ್‌.ಆರ್‌.ಸುಪ್ರೀತ್‌ ‘ಸ್ವಯಂಚಾಲಿತ ಪಡಿತರ ವಿತರಣೆ ವ್ಯವಸ್ಥೆಯ ಸಾಧನ’ವನ್ನು ಕಂಡು ಹಿಡಿದಿದ್ದಾರೆ. ಆಧಾರ್‌ ಸಂಖ್ಯೆಯನ್ನು ನಮೂದಿಸುತ್ತಿದ್ದಂತೆ ಆ ಫಲಾನುಭವಿಗೆ ನೀಡಬೇಕಿರುವ ಪಡಿತರವನ್ನು ಸ್ವಯಂ ಚಾಲಿತವಾಗಿ ನೀಡುತ್ತದೆ. ಸಹಾಯಕ ಪ್ರಾಧ್ಯಾಪಕ ಶ್ರೇಯಸ್‌ ಸುಗ್ಗ ಮಾರ್ಗದರ್ಶನ ನೀಡಿದ್ದಾರೆ.

ಸುಲಭವಾಗಿ ತುಳಿಯ ಬಹುದಾದ ಸೈಕಲ್‌

ಬಿ.ಆರ್‌.ಕೌಶಿಕ್‌, ಜೆ.ಪ್ರದೀಪ್‌ಕುಮಾರ್‌, ಎಂ.ಎಸ್‌.ಸ್ವಾಮಿ, ಜಿ.ಎಸ್‌.ತೀರ್ಥಪ್ರಸಾದ್‌ ಅವರು ಸಹಾಯಕ ಪ್ರಾಧ್ಯಾಪಕ ಎಸ್‌.ಕೆ.ರಾಜೇಶ್‌ ಕುಂಬಾರ ಅವರ ಮಾರ್ಗದರ್ಶನದಲ್ಲಿ ಸರಪಳಿಸಹಿತ ಸೈಕಲ್‌ ಕಂಡುಹಿಡಿದಿದ್ದಾರೆ.

ಸರಪಳಿ ಬದಲಿಗೆ ಶಾಪ್ಟ್‌ ಬಳಕೆ ಮಾಡಲಾಗಿದೆ. ಇದರಿಂದ ಸುಲಭವಾಗಿ ಸೈಕಲ್‌ ತುಳಿಯಬಹುದು. ಶಾಪ್ಟ್‌ ಹಲ್ಲುಗಳು ಮುರಿದರೂ ಸುಲಭವಾಗಿ ಚಲಿಸಬಹುದು ಎಂದು ವಿದ್ಯಾರ್ಥಿಗಳು ವಿವರಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !