ವರ್ಗಾವಣೆ ದಂದೆ: ಈಶ್ವರಪ್ಪ ಆರೋಪಕ್ಕೆ ರೇವಣ್ಣ ಗರಂ

7
ದಾಖಲೆ ಬಿಡುಗಡೆ ಮಾಡಲು ಸವಾಲು

ವರ್ಗಾವಣೆ ದಂದೆ: ಈಶ್ವರಪ್ಪ ಆರೋಪಕ್ಕೆ ರೇವಣ್ಣ ಗರಂ

Published:
Updated:
Deccan Herald

ಹಾಸನ: ‘ವರ್ಗಾವಣೆ ದಂದೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ’ ಎಂದು ಸಚಿವ ಎಚ್.ಡಿ.ರೇವಣ್ಣ ಅವರು ಬಿಜೆಪಿ ನಾಯಕ ಈಶ್ವರಪ್ಪ ಗೆ ಸವಾಲು ಹಾಕಿದ್ದಾರೆ.

‘ಈಶ್ವರಪ್ಪ ಅವರೂ ಹೇಳಿದ್ದ ಅಧಿಕಾರಿಗಳನ್ನೂ ವರ್ಗ ಮಾಡಿಕೊಟ್ಟಿದ್ದೇನೆ. ಆ ಅಧಿಕಾರಿಗಳೇನಾದರೂ ಹಣ ಕೊಟ್ಟಿದ್ದಾರಾಯೇ ಎಂಬುದನ್ನು ಬಹಿರಂಗ ಪಡಿಸಲಿ. ಅವರೊಬ್ಬ ಪ್ರತಿಪಕ್ಷ ನಾಯಕರು, ಏನೇ ಮಾತನಾಡಿದರೂ ದಾಖಲೆ ಇಟ್ಟುಕೊಂಡು ಮಾತನಾಡಬೇಕು. ಇಲ್ಲವಾದರೆ ಪೊಳ್ಳೆದ್ದು ಹೋಗುತ್ತಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಲೇವಡಿ ಮಾಡಿದರು.

ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ನಿಯೋಗ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ದೂರು ನೀಡಿರುವ ಕುರಿತು ಪ್ರತಿಕ್ರಯಿಸಿದ ರೇವಣ್ಣ, ‘ಪರಮೇಶ್ವರ್ ಅವರೇ ಈ ಬಗ್ಗೆ ಪರಿಶೀಲಿಸಲಿ. ನಾನು ದುರುದ್ದೇಶದಿಂದ ಯಾರ ವಿರುದ್ಧವೂ ಕೇಸು ನೀಡಿಲ್ಲ. ಜೈಲಿಗೂ ಕಳಿಸಿಲ್ಲ. ಕಾಂಗ್ರೆಸ್‌, ಬಿಜೆಪಿ, ದಳ ಮುಖ್ಯವಲ್ಲ. ಜಿಲ್ಲೆಯ ಜನರು ಮುಖ್ಯ. ನಾನು ತಪ್ಪು ಮಾಡಿದ್ದರೆ ಪರಮೇಶ್ವರ ಹೇಳಲಿ ತಿದ್ದುಕೊಳ್ಳುವೆ’ ಎಂದು ಸ್ಪಷ್ಟಪಡಿಸಿದರು.

‘ಕಾಂಗ್ರೆಸ್‌ನವರು ‘ಎ’ ಟೀಂ, ಬಿ ಟೀಂ ಎನ್ನದಿದ್ದರೆ ಬಿಜೆಪಿಯವರು 70 ಸ್ಥಾನಕ್ಕೆ ತೃಪ್ತಿಪಡಬೇಕಾಗಿತ್ತು. ಹತಾಶೆ ಮನೋಭಾವ ಹಾಗೂ ಪುಕ್ಸಟೆ ಪ್ರಚಾರಕ್ಕಾಗಿ ಈಶ್ವರಪ್ಪ ಈ ರೀತಿ ಆರೋಪ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು

ಅತಿಥಿ ಉಪನ್ಯಾಸಕರಿಗೆ ಸಂಬಳ ಆಗದಿರುವುದನ್ನು ಸಂಬಂಧಪಟ್ಟ ಸಚಿವರ ಗಮನಕ್ಕೆ ತರಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹಾಸನದ ಹೊಸ ಬಸ್ ನಿಲ್ದಾಣದ ಪಕ್ಕದಲ್ಲೇ ಹೊಸದಾಗಿ ರೈಲ್ವೆ ನಿಲ್ದಾಣ ನಿರ್ಮಾಣ ಮಾಡಲಾಗುವುದು. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಮಳೆ ಹಾನಿ ಪ್ರದೇಶಗಳಿಗೆ ನಾಲ್ಕೈದು ದಿನಗಳಲ್ಲಿ ಭೇಟಿ ನೀಡಲಾಗುವುದು ಎಂದರು.

‘ಮಹದಾಯಿ ನದಿಯಿಂದ ರಾಜ್ಯಕ್ಕೆ 13.42 ಟಿಎಂಸಿ ಅಡಿ ನೀರು ದೊರಕಿದೆ. ಸಮುದ್ರಕ್ಕೆ ನೀರು ವ್ಯರ್ಥವಾಗಿ ಹರಿದು ಹೋಗುತ್ತದೆ. ಕನಿಷ್ಟ 25 ಟಿಎಂಸಿ ನೀರು ಸಿಕ್ಕಿದ್ದರೆ ಉತ್ತರ ಕರ್ನಾಟಕ ಜನರಿಗೆ ಅನುಕೂಲವಾಗುತ್ತಿತ್ತು. ಬಿಜೆಪಿ ನಾಯಕರು ಮಿಠಾಯಿ ಹಂಚುವ ಬದಲು ಕಾನೂನು ಹೋರಾಟ ಮಾಡಬೇಕು. ಗೋವಾ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಸಲು ಸಜ್ಜಾಗಿದೆ. ಪ್ರಧಾನಿಗೆ ಬಳಿ ಹೋಗಿ ರಾಜ್ಯಕ್ಕೆ ಅನುದಾನ ತರಲಿ’ ಎಂದು ಸಲಹೆ ನೀಡಿದರು.

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !