ಬುಧವಾರ, ಅಕ್ಟೋಬರ್ 23, 2019
25 °C
ದಸರಾ ಕಬಡ್ಡಿ ಪಂದ್ಯಾವಳಿ

ಮಡಿಕೇರಿಯ ತಫೀಮ ತಾಜ್‌ ಫ್ರೆಂಡ್ಸ್ ಚಾಂಪಿಯನ್

Published:
Updated:
Prajavani

ಮಡಿಕೇರಿ: ದಸರಾ ಪ್ರಯುಕ್ತ ನಗರದಲ್ಲಿ ನಡೆದ ಜಿಲ್ಲಾಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಮಡಿಕೇರಿಯ ತಫೀಮಾ ತಾಜ್‌ ಫ್ರೆಂಡ್ಸ್ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.

ಮಡಿಕೇರಿ ದಸರಾ ಕ್ರೀಡಾ ಸಮಿತಿ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ಮಂಗಳವಾರ ಸಂಜೆ ನಡೆದಿತ್ತು.
ಕ್ರೀಡಾಕೂಟದಲ್ಲಿ ಮೈಸೂರು, ಮಂಗಳೂರು, ಪುತ್ತೂರು, ಸುಳ್ಯ ಹಾಗೂ ಸ್ಥಳೀಯ ಆಟಗಾರನ್ನೊಳಗೊಂಡಂತೆ 12 ತಂಡಗಳು ಪ್ರಶಸ್ತಿ ಸುತ್ತಿಗಾಗಿ ಸೆಣಸಾಟ ನಡೆಸಿದವು.

ಫೈನಲ್ ಪಂದ್ಯಾದಲ್ಲಿ ತಫೀಮ ತಾಜ ಫ್ರೆಂಡ್ಸ್ ಮಡಿಕೇರಿ ಮತ್ತು ಜೆಬಿಎಸ್‌ಸಿ ಕುಶಾಲನಗರ ತಂಡಗಳು ಪ್ರವೇಶ ಪಡೆಯಿತು.

ಮೊದಲಾರ್ಧದಲ್ಲಿ ಕುಶಾಲನಗರ ತಂಡ 10–1 ಮುನ್ನಡೆ ಸಾಧಿಸಿತು. ನಂತರ, ದ್ವಿತೀಯಾರ್ಧದಲ್ಲಿ ಸೂಪರ್ ರೈಡ್ ಹಾಗೂ ಅತ್ಯತ್ತಮ ಟ್ಯಾಕಲ್‌ಗಳ ಮೂಲಕ ಮಡಿಕೇರಿ ತಂಡ 21–13 ಅಂತರದಿಂದ ಗೆಲುವು ಸಾಧಿಸಿ ಚಾಂಪಿಯನ್ ಆಯಿತು. ಜೆಬಿಎಸ್‌ಸಿ ಕುಶಾಲನಗರ ತಂಡವು, ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಶಾಂತಿನಿಕೇತನ(ಎ) ತಂಡ ತೃತೀಯ ಸ್ಥಾನ, ದೇವರಕೊಲ್ಲಿ ತಂಡವು ನಾಲ್ಕನೇ ಸ್ಥಾನ ಪಡೆದುಕೊಂಡವು. ತೀರ್ಪುಗಾರರಾಗಿ ಆನಂದ್, ಹಂಡ್ಲಿ ಕೃಷ್ಣ, ಪ್ರವೀಣ್, ನಾಗರಾಜು, ತೇಜಸ್, ಪ್ರಸನ್ನ ಕುಮಾರ್, ರಾಘವೇಂದ್ರ ಶೆಟ್ಟಿ ನಿರ್ವಹಿಸಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)