ಬುಧವಾರ, ನವೆಂಬರ್ 13, 2019
22 °C

ಮಗಳ ಮದುವೆ ಮುಗಿಸಿದ ತಂದೆಗೆ ಹೃದಯಾಘಾತ

Published:
Updated:
Prajavani

ಶ್ರವಣಬೆಳಗೊಳ: ಮಗಳ ಮದುವೆ ಮಾಡಿದ ಸಂಭ್ರಮದಲ್ಲಿದ್ದ ತಂದೆ ಅಂದು ರಾತ್ರಿಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದದರಿಂದ ಕುಟುಂಬದವರು ಹಾಗೂ ಸಂಬಂಧಿಕರಿಗೆ ಬರ ಸಿಡಿಲು ಬಡಿದಂತಾದ ಘಟನೆ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಮಟನ್‌ ವ್ಯಾಪಾರಿ ಇಲಿಯಾಸ್‌ ಪಾಷಾ ಉರ್ಫ್ ಬಾಬು (50) ಹೃದಯಾಘಾತದಿಂದ ಮೃತಪಟ್ಟವರು.

ಗುರುವಾರ ಮಗಳ ಮದುವೆ ಮಾಡಿದ ನಂತರ ಸಂಭ್ರಮದಲ್ಲಿದ್ದ ಇಲಿಯಾಸ್‌ ಪಾಷಾ, ಬಂಧುಗಳನ್ನು ಬೀಳ್ಕೊಟ್ಟು ಮನೆಗೆ ಬಂದಿದ್ದರು. ರಾತ್ರಿ ಹೃದಯಾಘಾತ ಸುದ್ದಿ ಹರಡುತ್ತಿದ್ದಂತೆ ಬಂಧು ಬಾಂಧವರು, ಸ್ನೇಹಿತರು ಮನೆಗೆ ಬಂದು ನೋಡಿ ಶೋಕದಲ್ಲಿ ಮುಳುಗಿದರು.

ಅವರಿಗೆ ಪತ್ನಿ, ಪುತ್ರ, ನವವಧು ಪುತ್ರಿ, ತಾಯಿ, ತಂದೆ, ಸಹೋದರು ಇದ್ದಾರೆ. ಮೃತರ ಅಂತ್ಯಕ್ರಿಯೆ ಶುಕ್ರವಾರ ನಡೆಯಿತು.

 

ಪ್ರತಿಕ್ರಿಯಿಸಿ (+)