ಮಂಗಳವಾರ, ನವೆಂಬರ್ 19, 2019
26 °C

ಹಾವು ಕಚ್ಚಿ ರೈತ ಮಹಿಳೆ ಸಾವು

Published:
Updated:
Prajavani

 ಕೊಣನೂರು: ರಾಮನಾಥಪುರ ಹೋಬಳಿಯ ಜಿಟ್ಟೇನಹಳ್ಳಿಯಲ್ಲಿ ತಮ್ಮ ಜಮೀನಿನಲ್ಲಿ ಶುಕ್ರವಾರ ಕೆಲಸ ಮಾಡುತ್ತಿದ್ದಾಗ ಹಾವು ಕಚ್ಚಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.

ಜಯಮ್ಮ (54) ಮೃತಪಟ್ಟವರು. ಶುಂಠಿ ತಾಕಿನಲ್ಲಿ ಕಳೆ ತೆಗೆಯುತ್ತಿದ್ದಾಗ ಹಾವು ಕಚ್ಚಿದ್ದು,
ಏನೋ ಕಚ್ಚಿದ ಅನುಭವವಾದ್ದರಿಂದ ಅಲ್ಲೇ ಹುಡುಕಾಡಿದ ಜಯಮ್ಮ ತಾವು ಸ್ವತಃ ಹಾವನ್ನು ನೋಡಿ ಗಾಬರಿಗೊಂಡು ಭಯದಿಂದ ಕೂಗಿದ್ದಾರೆ. ಅಕ್ಕಪಕ್ಕದ ಜಮೀನಿನ ರೈತರು ಬಂದು ಕೊಣನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ.

ಪ್ರತಿಕ್ರಿಯಿಸಿ (+)