ಬುಧವಾರ, ನವೆಂಬರ್ 20, 2019
22 °C

ವಿದ್ಯುತ್‌ ಆಘಾತ: ಒಂದೇ ಕುಟುಂಬದ ಮೂವರ ಸಾವು

Published:
Updated:

ಚನ್ನರಾಯಪಟ್ಟಣ (ಹಾಸನ ಜಿಲ್ಲೆ): ಬಟ್ಟೆ ಒಣಹಾಕುತ್ತಿದ್ದ ವೇಳೆ ಪ್ರವಹಿಸುತ್ತಿದ್ದ ವಿದ್ಯುತ್‌ ತಂತಿ ತಗುಲಿ, ತಾಲ್ಲೂಕಿನ ಅಗಸರಹಳ್ಳಿಯ ಒಂದೇ ಕುಟುಂಬದ ಮೂವರು ಬುಧವಾರ ಮೃತಪಟ್ಟಿದ್ದಾರೆ.

ಭಾಗ್ಯಮ್ಮ (60), ಪುತ್ರ ಪರಮೇಶ್ (28), ಪುತ್ರಿ ದಾಕ್ಷಾಯಿಣಿ (26) ಮೃತಪಟ್ಟವರು. ದಾಕ್ಷಾಯಿಣಿ ಅವರ ಎರಡು ವರ್ಷದ ಮಗಳು ಹಂಸಶ್ರೀ ಅಸ್ವಸ್ಥಗೊಂಡಿದ್ದು, ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಪ್ರತಿಕ್ರಿಯಿಸಿ (+)