ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನನ್ನು ಅವಮಾನಿಸಿದ್ದಕ್ಕೆ ಬಿಜೆಪಿ ಅಭ್ಯರ್ಥಿಗೆ ಸೋಲು: ಮಂಜು

Last Updated 16 ಡಿಸೆಂಬರ್ 2021, 16:18 IST
ಅಕ್ಷರ ಗಾತ್ರ

ಹಾಸನ: ‘ನನ್ನನ್ನು ಅವಮಾನಿಸಿದ್ದರಿಂದಲೇ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಅಭ್ಯರ್ಥಿಗೆ ಹೀನಾಯ ಸೋಲಾಗಿದೆ. ಚುನಾವಣೆಯಲ್ಲಿ ತಟಸ್ಥನಾಗಿದ್ದೆ, ಯಾರನ್ನೂ ಬೆಂಬಲಿಸಿಲ್ಲ’ ಎಂದು ಬಿಜೆಪಿ ಮುಖಂಡ ಎ.ಮಂಜು ಪ್ರತಿಪಾದಿಸಿದರು.

ಕೊಣನೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈಗಲೂ ನಾನು ಅಧಿಕೃತವಾಗಿ ಬಿಜೆಪಿಯಲ್ಲಿದ್ದೇನೆ ಅಂತಾ ಅನ್ನಿಸುತ್ತೆ. ಆದರೆ, ಪಕ್ಷ ಏನು ಹೇಳುತ್ತೋ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ನನ್ನ ಕ್ಷೇತ್ರದ ಮತದಾರರು ಯಾವ ಪಕ್ಷಕ್ಕೆ ಹೋಗಿ ಅಂತಾರೋ ಅಲ್ಲಿಗೆ ಹೋಗುತ್ತೇನೆ’ ಎನ್ನುವ ಮೂಲಕ ಬಿಜೆಪಿ ತೊರೆಯುವ ಸುಳಿವು ನೀಡಿದರು.

‘ಹಾಸನದಿಂದ ನನ್ನ ಮಗನಿಗೆ ಟಿಕೆಟ್ ಕೊಡುವುದಾಗಿ ಬಿಜೆಪಿಯವರೇ ಹೇಳಿದ್ದರು. ಅದಕ್ಕೆ ₹ 5 ಕೋಟಿ ಬಂಡವಾಳ ಹಾಕುವುದಾಗಿ ಪಕ್ಷದ ಸಭೆಯಲ್ಲಿ ಶಾಸಕ ಪ್ರೀತಂ ಗೌಡ ಸಹ ಭರವಸೆ ನೀಡಿದ್ದರು. ನಂತರ ಮಂತ್ರಿ ಸ್ಥಾನ ಕೊಡದಿದ್ದಕ್ಕೆ ಬೆಂಬಲ ನೀಡಲ್ಲ ಎಂದರು. ಅಲ್ಲದೇ, ಅವರ ಬೆಂಬಲಿಗರನ್ನುಮಗ ಮಂಥರ್ ಗೌಡ ಬಳಿ ಕಳುಹಿಸಿ, ಹಾಸನದಲ್ಲಿ ಸ್ಪರ್ಧಿಸಬೇಡ ಎಂದು ಹೇಳಿಸಿದ್ದರು. ಅವರೇ ನಮ್ಮ ಕುಟುಂಬವನ್ನು ಒಡೆದರು’ ಎಂದು ಬೇಸರ ವ್ಯಕ್ತಪಡಿಸಿದರು. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT