ಕಾಡಾನೆ ದಾಳಿ ಅಡಿಕೆ ಗಿಡ ನಾಶ

7

ಕಾಡಾನೆ ದಾಳಿ ಅಡಿಕೆ ಗಿಡ ನಾಶ

Published:
Updated:
ಕಾಡಾನೆ ದಾಳಿಯಿಂದ ನಾಶವಾಗಿರುವ ಅಡಿಕೆ ಗಿಡಗಳು

ಹೆತ್ತೂರು: ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರ್ಕಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಕಾಡಾನೆಗಳು ಅಡಿಕೆ ಹಾಗೂ ಕಾಫಿ ತೋಟದಲ್ಲಿ ದಾಂದಲೆ ನಡೆಸಿ ಅಪಾರ ಪ್ರಮಾಣದ ಬೆಳೆ ಹಾನಿಯುಂಟುಮಾಡಿವೆ.

ಹೊಸಹಳ್ಳಿ ಗ್ರಾಮದ ಧರ್ಮರಾಜ್, ರಾಜೇಗೌಡ ಎಂಬುವವರ ಅಡಿಕೆ ತೋಟಕೆ ನುಗ್ಗಿದ ಸುಮಾರು 6 ಕಾಡಾನೆಗಳ ಹಿಂಡು ಸುಮಾರು 50ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಬುಡಸಹಿತ ಬೀಳಿಸಿವೆ.

ಗೋವಿಂದಗೌಡ ಹಾಗೂ ಜೇಡಿಗದ್ದೆ ಗ್ರಾಮದ ಪ್ರಕಾಶ್ ಎಂಬುವರ ಕಾಫಿ ತೋಟದಲ್ಲಿ ಬಾಳೆ, ಕಾಳು ಮೆಣಸು ಹಾಗೂ ಏಲಕ್ಕಿ ಗಿಡಗಳನ್ನು ತುಳಿದು ಹಾಕಿದೆ.

ಸ್ಥಳಕ್ಕೆ ಉಪವಲಯ ಅರಣ್ಯಧಿಕಾರಿ ಧನಂಜಯ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ಮಲೆನಾಡು ಭಾಗದಲ್ಲಿ ಕಾಡಾನೆಗಳ ಕಾಟ ಹೆಚ್ಚಾಗಿದ್ದು ಅಪಾರ ಪ್ರಮಾಣದ ಬೆಳೆ ನಷ್ಟವಾಗುತ್ತಿದೆ. ಇದರಿಂದ ರೈತರಿಗೆ ಬೆಳೆದ ಬೆಳೆ ಕೈಗೆಟುಕದಂತಾಗಿದೆ. ಆದರಿಂದ ಸರ್ಕಾರ ಇದಕ್ಕೆ ಸೂಕ್ತ ಪರಿಹಾರ ನೀಡಬೇಕು’ ಎಂದು ಹೋಬಳಿಯ ರೈತರು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !