ಹಾಸನ: ‘ಮೋದಿ ಅವರ ಮಾತು ಸರಿಯಾಗಿ ತಿಳಿಯಬೇಕು ಸಿದ್ದರಾಮಯ್ಯನವರೆ. ಇಂದಿರಾ ಗಾಂಧಿ ‘ಒಂದು ಸಲ ಟೀ ಕುಡಿಯಿರಿ, ಊಟ ಕಡಿಮೆ ಮಾಡಿ’ ಎಂದು ನಾಗಪುರದಲ್ಲಿ ಭಾಷಣ ಮಾಡಿದಾಗ ಜನ ದಂಗೆ ಎದ್ದರು. ಪೊಲೀಸರು ಇಂದಿರಾ ಅವರನ್ನು ತಬ್ಬಿ ಕರೆದುಕೊಂಡು ಹೋದರು. ಅಂದು ಎಸ್ಪಿಜಿ ಇರಲಿಲ್ಲ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದರು.

ಪ್ರಧಾನಿ ಮೋದಿ ಭಾಷಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಪ್ರತಿಕ್ರಿಯೆ ಬಗ್ಗೆ ಇಲ್ಲಿ ಮಾತನಾಡಿದ ಅವರು, ‘ಇಂದು ನೀವು ಜವಾಬ್ದಾರಿ ಸ್ಥಾನದಲ್ಲಿದ್ದೀರಿ. 16 ಬಜೆಟ್ ಮಂಡಿಸಿದ್ದೀರಿ. ಹಿಂದೆ ನಡೆದ ಘಟನೆ ಮೆಲುಕು ಹಾಕಿ ಮಾತನಾಡಿದರೆ ಒಳ್ಳೆಯದು. ಪ್ರಧಾನಿ ಬಗ್ಗೆ ಲಘುವಾಗಿ ಮಾತನಾಡಿದರೆ ಏನೂ ಆಗುವುದಿಲ್ಲ’ ಎಂದು ಎಚ್ಚರಿಸಿದರು.

‘ಪಾಕಿಸ್ತಾನದಿಂದ ಬಾಂಗ್ಲಾದೇಶ ಬೇರ್ಪಟ್ಟಾಗ ಶೇಖ್ ಮುಜಿಬುರ್ ರೆಹಮಾನ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು. ಅಂದು ಇಂದಿರಾ ಗಾಂಧಿಗೆ ರಾಮಲೀಲಾ ಮೈದಾನದಲ್ಲಿ ಚಿನ್ನದ ಖಡ್ಗ ನೀಡಿದ್ದರು. ಅಂದು ಸಕ್ಕರೆ ಕೆ.ಜಿ.ಗೆ ₹18, ಸೀಮೆಎಣ್ಣೆ ಲೀಟರ್ಗೆ ₹12 ಆಗಿತ್ತು’ ಎಂದು ದೇವೇಗೌಡರು ನೆನಪಿಸಿದರು.

‘ಈಗ ಮೂರು ರಾಷ್ಟ್ರಗಳ ನಡುವೆ 40 ದಿನದ ಘೋರ ಯುದ್ಧ ನಡೆಯುತ್ತಿದೆ. ಅದಕ್ಕೆ ಮೋದಿ ಕಾರಣ ಅಲ್ಲ. ‘ಸ್ವಲ್ಪ ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ ಕಡಿಮೆ ಬಳಸಿ, ವಿದೇಶ ಪ್ರವಾಸ ಬೇಡ’ ಎಂದು ಮೋದಿ ಹೇಳಿದ್ದಾರೆ. ಇದರ ಬಗ್ಗೆ ಸಿದ್ದರಾಮಯ್ಯ ದೊಡ್ಡ ಪಾಂಡಿತ್ಯದ ರೀತಿ ಮಾತನಾಡಿದ್ದಾರೆ’ ಎಂದು ಟೀಕಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-36-1000849465

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.