ದೊಡ್ಡಗೌಡರಿಗೆ ನೋವು ಕೊಟ್ಟವರು ಯಾರು ಉಳಿದಿಲ್ಲ: ರೇವಣ್ಣ

ಬುಧವಾರ, ಏಪ್ರಿಲ್ 24, 2019
23 °C
'ಚುನಾವಣಾ ಆಯುಕ್ತರೇ ದೇವರು ಮೆಚ್ಚುವ ಕೆಲಸ ಮಾಡಿ, ಇಲ್ಲವಾದರೆ ಜನರು ಮೆಚ್ಚುವುದಿಲ್ಲ'

ದೊಡ್ಡಗೌಡರಿಗೆ ನೋವು ಕೊಟ್ಟವರು ಯಾರು ಉಳಿದಿಲ್ಲ: ರೇವಣ್ಣ

Published:
Updated:
Prajavani

ಹಾಸನ: ದೇವೇಗೌಡರಿಗೆ ನೋವು ಕೊಟ್ಟವರು ಯಾರು ಉಳಿದಿಲ್ಲ, ಯಾರೂ ಉಳಿಯುವುದೂ ಇಲ್ಲ ಎಂದು ಸಚಿವ ಎಚ್‌.ಡಿ.ರೇವಣ್ಣ ಹೇಳಿದರು.

‘ ಐಟಿ ಹಾಗೂ ಮುಖ್ಯ ಚುನಾವಣಾ ಆಯುಕ್ತರು ಬಿಜೆಪಿ ಕೈಗೊಂಬೆಯಾಗಿದ್ದಾರೆ, ನಿಷ್ಪಕ್ಷಪಾತ ಚುನಾವಣೆ ನಡೆಸುವಂತೆ ಕೋರಲಾಗಿದೆ. ಚುನಾವಣಾ ಆಯುಕ್ತರು ಡಿಸಿಗೆ ಕರೆ ಮಾಡಿ ಏನೆಲ್ಲ ಸೂಚನೆ ಕೊಟ್ಟಿದ್ದಾರೆ ಅದೆಲ್ಲವನ್ನು ಬಹಿರಂಗಪಡಿಸುತ್ತೇನೆ. ಬಿಜೆಪಿಗೆ ಅಂತ್ಯಕಾಲ ಬಂದಿದೆ. ದೇಶದ ಹಣ ಲೂಟಿ ಮಾಡುತ್ತಿರುವವರನ್ನು ಹಿಡಿಯಲಿ. ಬಿ.ಎಸ್. ಯಡಿಯೂರಪ್ಪ ಕ್ಷೇತ್ರದಲ್ಲಿ ಏನು ಇಲ್ಲವೇ? ಅವರೆಲ್ಲ ಜೈಲಿಗೆ ಹೋಗಿ ಬಂದಿಲ್ವಾ? ಐಟಿಯವರಿಗೆ ಕಾಣುತ್ತಿರುವುದು ಕೇವಲ ಹಾಸನ,ಮಂಡ್ಯ ಜಿಲ್ಲೆ. ಆದ ಕಾರಣ ಚುನಾವಣಾ ಆಯುಕ್ತರೇ ದೇವರು ಮೆಚ್ಚುವ ಕೆಲಸ ಮಾಡಿ, ಇಲ್ಲವಾದರೆ ಜನರು ಮೆಚ್ಚುವುದಿಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ದೇವೇಗೌಡರ ಕುಟುಂಬ ಇಂತಹ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ. ಅವರ ಅಧಿಕಾರ ಅವಧಿಯಲ್ಲಿ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಹಾಗೂ ಸಿಒಡಿ ತನಿಖೆ ನೋಡಿ ಬಂದಿದೆ. ಮೊನ್ನೆ ಹಾಸನದ ರಿಂಗ್ ರಸ್ತೆಯಲ್ಲಿ ಬಿಜೆಪಿ ಮುಖಂಡರ ಮನೆಗೆ ₹ 7 ಕೋಟಿ ಹಣ ಹೋಗಿದೆ ಹಾಗೂ ಲಿಕ್ಕರ್ ಗಾಡಿಯಲ್ಲಿ ಬಂದ ಹಣ ವನ್ನು ಬೈಕ್‌ನಲ್ಲಿ ತೆಗೆದು ಕೊಂಡು ಹೋಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದರೆ ಚುನಾವಣಾಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಬಿಜೆಪಿ ಅಭ್ಯರ್ಥಿ ಎ.ಮಂಜು ತನ್ನನ್ನು ಡೇರಿ ಅಧ್ಯಕ್ಷ ಮಾಡಿದ್ದಲ್ಲ, ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗಲೇ ನಾನು ಡೇರಿ ಅಧ್ಯಕ್ಷನಾಗಿದ್ದೆ, 1985ರಿಂದಲೇ ರಾಜಕಾರಣ ಮಾಡಿಕೊಂಡು ಬಂದವನು, ಸೋಲಿನ ಭೀತಿಯಿಂದ ಮನಸ್ಸಿಗೆ ಬಂದಿದ್ದನ್ನು ಹೇಳುವುದಲ್ಲ ಎಂದು ಟಾಂಗ್ ನೀಡಿದರು.

ದೇವೇಗೌಡರು ಕುಟುಂಬದ ಬಗ್ಗೆ ವಿಡಿಯೊ ಬಿಡುಗಡೆ ಮಾಡುತ್ತೇನೆ ಎಂದು ಮಂಜು ಹೇಳಿಕೆಗೆ ತಿರುಗೇಟು ನೀಡಿದ ಅವರು, ‘ಯಾವ ವಿಡಿಯೊ ಬಿಡ್ತಾರಂತೆ ಬಿಡ್ಲಿ, ಅಂತಹಾ ಸಾಕಷ್ಟು ವಿಡಿಯೋ ಗಳನ್ನ ನೋಡಿದ್ದೇನೆ, ದೇಶದಲ್ಲಿ ಇಂತಹ ರಾಜಕಾರಣಿಗಳು ಏನೇನಾಗಿಲ್ಲ ’ ಎಂದು ಲೇವಡಿ ಮಾಡಿದರು.

‘ಬಿಜೆಪಿ ಅಭ್ಯರ್ಥಿ ಎ.ಮಂಜು ಹಿಂದೆ ಬೆಂಗಳೂರಿನಲ್ಲಿ ಡಾನ್ ಆಗಿದ್ದರು ಎಂದು ನಾನು ಹೇಳಿದ್ದಲ್ಲ. ನಮ್ಮ ಪಕ್ಷದ ಮುಖಂಡ ಕೆ.ಎಂ.ರಾಜೇಗೌಡರು ಹೇಳಿದ್ದು, ಅವರನ್ನೇ ಕೇಳಬೇಕು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಅವರಿಗೆ ಸಿ. ಎಂ. ಕುಮಾರ ಸ್ವಾಮಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ . ಕೇಂದ್ರ ಸರ್ಕಾರ ಮಾಡದ ಕೆಲಸಗಳನ್ನ ಮೈತ್ರಿ ಸರ್ಕಾರ ಮಾಡಿದೆ ಎಂದರು.

‘ಬಸವಾಪಟ್ಟಣ ನೀರಾವರಿ ಇಲಾಖೆ ಎಂಜಿನಿಯರ್ ಸಾವಿಗೆ ಕಾರಣ ಯಾರೆಂದು ರೇವಣ್ಣನ ಕೇಳಿ’ ಎಂಬ ಮಂಜು ಆರೋಪಕ್ಕೆ ಪ್ರತಿಕ್ರಿಯಿಸಿ, ‘ಬಸವಾಪಟ್ಟಣ ತನ್ನ ವ್ಯಾಪ್ತಿಗೆ ಬರುವುದಿಲ್ಲ, ಅರಕಲಗೂಡು ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ನೀವು ಅವರನ್ನೇ ಕೇಳಿ ಎಂದರು.

₹1346 ಕೋಟಿ ಹಣವನ್ನು ಮುಂಗಡವಾಗಿ ಗುತ್ತಿಗೆದಾರರಿಗೆ ನೀಡಿರುವ ಆರೋಪಕ್ಕೆ ಸಿಬಿಐ ತನಿಖೆ ನಡೆಸಲಿ ಎಂದು ಸವಾಲು ಹಾಕಿದರು.

 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !