ದುಡಿವ ಜನರ ರಕ್ಷಣೆಗೆ ಸತ್ಯಾಗ್ರಹ ಜಾಗರಣೆ

7
ಸಂವಾದ, ಚರ್ಚಾಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ

ದುಡಿವ ಜನರ ರಕ್ಷಣೆಗೆ ಸತ್ಯಾಗ್ರಹ ಜಾಗರಣೆ

Published:
Updated:
Deccan Herald

ಹಾಸನ : ದುಡಿಯುವ ಜನರ ರಕ್ಷಣೆ, ಸ್ವಾತಂತ್ರ್ಯ ಹಾಗೂ ಸಂವಿಧಾನ ಉಳಿವಿಗಾಗಿ ಸತ್ಯಾಗ್ರಹ ಜಾಗರಣೆ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್‌ ತಿಳಿಸಿದರು.

ಕರ್ನಾಟಕ ಪ್ರಾದೇಶಿಕ ರೈತ ಸಂಘದ ವತಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಆ. 14ರಂದು ಸಂಜೆ 6ರಿಂದ ಆ. 15ರ ಬೆಳಿಗ್ಗೆ 6 ರವರೆಗೆ ಸಾಮೂಹಿಕ ಜಾಗರಣೆ ನಡೆಯಲಿದೆ. ಜನರ ಹಕ್ಕುಗಳು ಹಾಗೂ ಬೇಡಿಕೆ ಕುರಿತ ಸಂವಾದ, ಚರ್ಚೆ, ಯುವ ಜನರಿಗೆ ನನ್ನ ಪರಿಕಲ್ಪನೆಯಲ್ಲಿ ಸ್ವಾತಂತ್ರ್ಯ ಎಂಬ ಚರ್ಚಾಗೋಷ್ಟಿ, ವೈಜ್ಞಾನಿಕ ಮನೋಭಾವ ಮೂಡಿಸುವ ಕಾರ್ಯಕ್ರಮ, ಜನ ಚಳುವಳಿಗೆ ಸಂಬಂಧಿಸಿದ ಚಲನಚಿತ್ರ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 71 ವರ್ಷ ಕಳೆಯುತ್ತಿದ್ದರೂ ಸ್ವಾತಂತ್ರ್ಯ ಚಳವಳಿಯ ಆಶೋತ್ತರ ಹಾಗೂ ಭರವಸೆ ಈಡೇರಿಲ್ಲ. ದೇಶದ ಸಾಮಾನ್ಯ ಜನರಿಗೆ ಆಹಾರ ಆರೋಗ್ಯ, ಶಿಕ್ಷಣ, ಉದ್ಯೋಗ, ಸಾರಿಗೆ ಸಂಪರ್ಕ ದೊರಕಿಲ್ಲ. ದೇಶ ಆಳಿದ ಸರ್ಕಾರಗಳು ಮೂರು 3 ದಶಕಗಳಲ್ಲಿ ರೂಪಿಸಿದ ನವ ಉದಾರೀಕರಣ ನೀತಿಗಳು ಬಹುಸಂಖ್ಯಾತ ಕಾರ್ಮಿಕರ ಮತ್ತು ಇತರೆ ದುಡಿಯುವ ಜನರ ಬದುಕು ಹಾಳು ಮಾಡಿತು ಎಂದು ದೂರಿದರು.

ಕಾರ್ಮಿಕರು, ರೈತರು, ಕೃಷಿ ಕೂಲಿಕಾರರು, ಕುಶಲಕರ್ಮಿಗಳು ಮತ್ತು ಇತರೆ ದುಡಿಯುವ ಜನರ ಸಮಸ್ಯೆಗಳನ್ನು ಮುಂಚೂಣಿಗೆ ತರಲು ಮತ್ತು ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಒತ್ತಾಯಿಸಿ ಸಿಐಟಿಯು, ಎಐಕೆಎಸ್ ಹಾಗೂ ಎಐಎಡ್ಲೂಯು ಜಂಟಿಯಾಗಿ ಸೆ. 5 ರಂದು ಸಂಸತ್‌ ಮುಂದೆ ಮಜ್ದೂರ್ ಕಿಸಾನ್ ಸಂಘರ್ಷ ರ್‍್ಯಾಲಿ ಆಯೋಜಸಲಾಗಿದೆ ಎಂದರು.

ಅದರ ಭಾಗವಾಗಿ ಆ. 14ರಂದು ಇಡೀ ರಾತ್ರಿ ಸಾಮೂಹಿಕ ಸತ್ಯಾಗ್ರಹ ಜಾಗರಣೆಯನ್ನು ದೇಶವ್ಯಾಪಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಎಲ್ಲಾ ಸಂಘಟಿತ-ಅಸಂಘಟಿತ ಕಾರ್ಮಿಕರು, ರೈತರು, ಕೂಲಿಕಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಸಿಐಟಿಯು ಮುಖಂಡ ಅರವಿಂದ್, ರಾಘವೇಂದ್ರ, ಕರಿಯಪ್ಪ, ಸತ್ಯನಾರಾಯಣ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !