ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಟೇಟ್‌ನಲ್ಲಿ ಬೀಡುಬಿಟ್ಟ ಆನೆ ಹಿಂಡು: ಬೆಳೆ ಹಾನಿ

Last Updated 13 ಅಕ್ಟೋಬರ್ 2020, 2:54 IST
ಅಕ್ಷರ ಗಾತ್ರ

ಬೇಲೂರು: ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ಶಿರಗುರ ಗ್ರಾಮದ ಜಮೀನುಗಳಲ್ಲಿಆನೆಗಳ ಹಿಂಡು ಭಾನುವಾರ ರಾತ್ರಿ ದಾಳಿ ನಡೆಸಿ ಬೆಳೆ ನಾಶಪಡಿಸಿವೆ.

ಸುಮಾರು ಇಪ್ಪತ್ತು ಆನೆಗಳು ಗ್ರಾಮದ ಜಕ್ಕನಹಳ್ಳಿ ಎಸ್ಟೆಟ್‌ನಲ್ಲಿ ಬಿಡುಬಿಟ್ಟಿದ್ದು, ಭತ್ತ, ಕಾಫಿ, ಮೆಣಸು ಹಾಗೂ ಬಾಳೆ ಬೆಳೆಗಳನ್ನು ತುಳಿದು ನಾಶಪಡಿಸಿವೆ. ಆನೆಗಳ ಉಪಟಳದಿಂದ ರೈತರು ಆತಂಕದಲ್ಲಿ
ಇದ್ದಾರೆ.

ವಲಯ ಅರಣ್ಯಾಧಿಕಾರಿ ಯಾಶ್ಮಾ ಮಾಚಮ್ಮ ಸಿಬ್ಬಂದಿಯೊಂದಿಗೆ ಸೋಮವಾರ ಬೆಳಿಗ್ಗೆಯೇ ಶಿರಗುರ ಗ್ರಾಮಕ್ಕೆ ಬಂದು ಆನೆ ಹಿಂಡು ಓಡಿಸಲು ಸಂಜೆವರೆಗೂ ಕಾರ್ಯಾಚರಣೆ ಕೈಗೊಂಡರು.

‘ಅರೇಹಳ್ಳಿ ಹೋಬಳಿಯ ಶಿರಗುರ, ನೆರಲಮಕ್ಕಿ, ಮಲಸವಾರ, ಬಕ್ರವಳ್ಳಿ, ದಾಸನಗುಡ್ಡ ಗ್ರಾಮಗಳಲ್ಲಿ ಪದೇ ಪದೇ ಆನೆಗಳು ಕಂಡುಬರುತ್ತಿವೆ. ಮನೆಯ ಮುಂದೆಯೇ ಸಂಚರಿಸುತ್ತವೆ, ಇದರಿಂದ ಜನ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಸರ್ಕಾರ ಬೆಳೆ ನಷ್ಟದ ಪರಿಹಾರ ನೀಡಬೇಕು ಹಾಗೂ ಆನೆಗಳು ಬಾರದಂತೆ ಶಾಶ್ವತ ಯೋಜನೆ ರೂಪಿಸಬೇಕು’ ಎಂದು ಶಿರಗುರ ಗ್ರಾಮದ ಅಕ್ಷತ್, ಮೋಹನ್ ‘ಪ್ರಜಾವಾಣಿ’ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT