ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲೆಕೋಸು ನಾಶಪಡಿಸಿದ ಬೇಲೂರಿನ ರೈತ

Last Updated 13 ಮೇ 2020, 20:00 IST
ಅಕ್ಷರ ಗಾತ್ರ

ಬೇಲೂರು (ಹಾಸನ): ಸಮೀಪದ ಕೊಟ್ನಗೆರೆಬೀದಿಯ ರೈತ ಸತ್ಯನಾರಾಯಣ ಎಂಬುವವರು, ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಎಲೆಕೋಸನ್ನು ಬುಧವಾರ ನಾಶಪಡಿಸಿದ್ದಾರೆ.

₹ 75 ಸಾವಿರ ವೆಚ್ಚದಲ್ಲಿ ಬೆಳೆದ ಎಲೆಕೋಸನ್ನು ಕೊಳ್ಳಲು ಯಾರೂ ಮುಂದೆ ಬಂದಿರಲಿಲ್ಲ. ಅಪರೂಪಕ್ಕೆ ಬಂದವರು ಕೂಡ ಪ್ರತಿ ಕೆ.ಜಿ ಕೋಸಿಗೆ 50ಪೈಸೆಯಿಂದ ₹ 1 ದರದಲ್ಲಿ ಕೇಳುತ್ತಿದ್ದರು. ತಾವೇ ಖುದ್ದಾಗಿ ಎಪಿಎಂಸಿಗೆ ಕೊಂಡೊಯ್ದಾಗಲೂ ದಲ್ಲಾಳಿಗಳು 50 ಚೀಲ ಎಲೆಕೋಸನ್ನು ₹ 500 ದರದಲ್ಲಿ ಕೇಳಿದ್ದರು. ಹೀಗಾಗಿ ಅದನ್ನು ಅಲ್ಲಿಯೇ ಬಿಟ್ಟುಬಂದಿದ್ದರು. ಇದರಿಂದ ಬೇಸತ್ತ ಅವರು, ಬುಧವಾರ ತಮ್ಮ ಮಗನೊಂದಿಗೆ ಟ್ರಾಕ್ಟರ್‌ನಿಂದ ಬೆಳೆ ನಾಶಪಡಿಸಿದರು.

‘ಎರಡು ವರ್ಷಗಳಿಂದ ನಷ್ಟ ಅನುಭವಿಸುತ್ತಿದ್ದೇನೆ. ಶುಂಠಿ ಬಿತ್ತನೆ ಮಾಡಿದಾಗಲೂ ನಷ್ಟವಾಗಿತ್ತು. ಈಗ ಕೋಸು ಬೆಳೆದರೂ ಪ್ರಯೋಜನವಾಗಲಿಲ್ಲ‘ ಎಂದು ಸತ್ಯನಾರಾಯಣ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT