ಹಳೇಬೀಡು: ರೈತರು ಉಳುಮೆ ಮಾಡುತ್ತಿರುವ ಸರ್ಕಾರಿ ಭೂಮಿಯನ್ನು ಅಕ್ರಮಿಸಿಕೊಳ್ಳಲು ಮುಂದಾದ ಅರಣ್ಯ ಇಲಾಖೆ ವಿರುದ್ಧ ರೈತ ಸಂಘದ ಮುಖಂಡರು ಸೋಮವಾರ ಐದಳ್ಳಕಾವಲಿನಲ್ಲಿ ಪ್ರತಿಭಟನೆ ನಡೆಸಿದರು.

‘ರಕ್ತ ಕೊಟ್ಟೇವು ಭೂಮಿ ಬಿಡುವುದಿಲ್ಲ. ಸರ್ಕಾರಿ ಭೂಮಿ ರೈತರ ಭೂಮಿ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಐದಳ್ಳ ಕಾವಲು ಸರ್ವೆ ನಂಬರ್ 1ರಲ್ಲಿರುವ 2,555 ಎಕರೆ ಸರ್ಕಾರಿ ಭೂಮಿಯನ್ನು 870 ರೈತರು ಹಂಚಿಕೆ ಮಾಡಿಕೊಂಡಿದ್ದಾರೆ. ಕೆಲವರು ಉಳಿಮೆ ಮಾಡುತ್ತಿದ್ದಾರೆ. ರೈತರು ಸರ್ಕಾರಿ ಭೂಮಿಯಲ್ಲಿ ದೇಶಕ್ಕೆ ಅಗತ್ಯವಿರುವ ಕೃಷಿ ಕೈಗೊಂಡಿದ್ದಾರೆ. ಅರಣ್ಯ ಇಲಾಖೆಯವರು ಜೆಸಿಬಿ ತಂದು ಜಮೀನು ವಶಕ್ಕೆ ಪಡೆಯಲು ಮುಂದಾಗುತ್ತಿದ್ದಾರೆ. ಇದರಿಂದ ರೈತರಿಗೆ ಅನ್ಯಾಯವಾಗಿದೆ ಎಂದು ಪ್ರತಿಭಟನಕಾರರು ದೂರಿದರು.

ಬಡ ರೈತರು ತಮ್ಮ ಹೊಟ್ಟೆ ಪಾಡಿನ ಜೊತೆಗೆ ದೇಶಕ್ಕೆ ಅನ್ನ ಕೊಡುವುದಕ್ಕಾಗಿ ಐದಳ್ಳ ಕಾವಲಿನ ಜಮೀನಿನಲ್ಲಿ ಕೃಷಿ ಕೈಗೊಂಡಿದ್ದಾರೆ. ಇಲ್ಲಿ ಯಾರು ಫ್ಯಾಕ್ಟರಿ ಕಟ್ಟಲು ಮುಂದಾಗಿಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಐದಳ್ಳ ಕಾವಲಿನ ಭೂಮಿಯನ್ನು ರೈತರಿಗೆ ಮೀಸಲಿಡಬೇಕು. ಕೃಷಿ ಬಳಕೆಗೆ ಸಿಮೀತವಾಗಿರಬೇಕು ಎಂದು ಜಿಲ್ಲೆಯಾದ್ಯಂತ ಪಾದಯಾತ್ರೆ ನಡೆಸಿದ್ದೇವೆ. ಜಮೀನನ್ನು ರೈತರಿಗಾಗಿ ಉಳಿಸಿಕೊಳ್ಳಲು ಬೆಂಗಳೂರು, ದೆಹಲಿಯ ಕಚೇರಿಗೆ ಅಲೆದಾಡಿದ್ದೇವೆ. ಅರಣ್ಯ ಇಲಾಖೆ ಸರ್ಕಾರಿ ಭೂಮಿಗೆ ಅತಿಕ್ರಮ ಪ್ರವೇಶ ಮಾಡುತ್ತಿರುವುದು ಅನ್ಯಾಯ ಎಂದು ರೈತಸಂಘದ ರಾಷ್ಟ್ರೀಯ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನ ಕುಮಾರ್ ಹೇಳಿದರು.

ಅರಣ್ಯ ಇಲಾಖೆ ದಾಖಲಾತಿ ಇದೆ ಎಂದರೂ ನಾವು ಜಗ್ಗುವುದಿಲ್ಲ. ಭೂಮಿಯ ಮೇಲೆ ಹೆಚ್ಚಿನ ಹಕ್ಕು ರೈತರಿಗಿದೆ. ಅರಣ್ಯ ಇಲಾಖಯವರು ತೊಂದರೆ ಕೊಡುತ್ತಿರುವುದು ಇದೆ ಮೊದಲಲ್ಲ. ಐದಾರು ಬಾರಿ ಸರ್ಕಾರಿ ಭೂಮಿ ಅತಿಕ್ರಮ ಮಾಡಲು ಮುಂದಾಗಿದ್ದಾರೆ. ತೊಂದರೆ ಕೊಡುವುದನ್ನು ಮುಂದುವರೆಸಿದರೆ ಐದಳ್ಳ ಕಾವಲಿನಲ್ಲಿ ರೈತ ನಾಯಕ ಪ್ರೊ.ನಂಜುಂಡ ಸ್ವಾಮಿ ಅವರ ಪ್ರತಿಮೆ ನಿಲ್ಲಿಸಿಕೊಂಡು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತೇವೆ ಎಂದು ಪ್ರಸನ್ನ ಕುಮಾರ್ ಎಚ್ಚರಿಸಿದರು.

ಮುಖಂಡರಾದ ನಿಂಗಪ್ಪ, ಅಯೂಬ್ ಸಾಬ್, ವಿಜಾಜ್ ಪಾಷ, ಮಹಮ್ಮದ್ ದಸ್ತಗಿರಿ, ಭೋಜರಾಜ್, ಹನುಮಂತು ಭಾಗವಹಿಸಿದ್ದರು. ಸಬ್ ಇನ್ಸ್ಪೆಕ್ಟರ್ ಮಂಜುನಾಥ ಬಂದೋಬಸ್ತ್ ಕ್ರಮ ಕೈಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.