ಬುಧವಾರ, ಡಿಸೆಂಬರ್ 2, 2020
17 °C

ಹಿರೀಸಾವೆ: ಹೆಣ್ಣು ಚಿರತೆ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರೀಸಾವೆ: ಹೋಬಳಿಯ ಕೊತ್ತನ ಹಳ್ಳಿ ಗ್ರಾಮದಲ್ಲಿ 2 ವರ್ಷದ ಹೆಣ್ಣು ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ಸೆರೆ ಹಿಡಿದಿದ್ದಾರೆ.

ಗ್ರಾಮದ ತೋಟದ ಮನೆಗಳ ಬಳಿ ಆಗಾಗ ಚಿರತೆ ಬಂದು ನಾಯಿ, ಕುರಿ, ಕೋಳಿಗಳನ್ನು ತಿನ್ನುತ್ತಿತ್ತು. ಈ ಬಗ್ಗೆ ಅರಣ್ಯ ರೈತರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಹತ್ತು ದಿನಗಳ ಹಿಂದೆ ಪ್ರಭಾಕರ್ ಎಂಬುವವರ ತೋಟದ ಮನೆಯ ಪಕ್ಕದಲ್ಲಿ ಬೋನು ಇಡಲಾಗಿತ್ತು. ಶನಿವಾರ ಬೆಳಿಗ್ಗೆ ಚಿರತೆ ಸೆರೆಯಾಗಿದೆ ಎಂದು ವಲಯ ಅರಣ್ಯಾಧಿಕಾರಿ ಎಚ್.ಆರ್.ಹೇಮಂತ್ ‘ಪ್ರಜಾವಾಣಿ’ಗೆ ತಿಳಿಸಿದರು.

ಚಿರತೆಯನ್ನು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾಡಿಗೆ ಬಿಡಲಾಗುವುದು
ಎಂದು ಇಲಾಖೆಯ ವಿಶ್ವನಾಥ ಹೇಳಿದರು.

ಅರಣ್ಯ ರಕ್ಷಕ ಕರೀಗೌಡ ಮತ್ತಿತರರು ಸೆರೆ ಸಿಕ್ಕ ಚಿರತೆಯನ್ನು ಕೊತ್ತನಹಳ್ಳಿಯಿಂದ ಚನ್ನರಾಯಪಟ್ಟಣಕ್ಕೆ ವಾಹನದಲ್ಲಿ ಸಾಗಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು