ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲೆಕ್ಸ್‌ ವಿರೂಪ: ಕ್ರಮಕ್ಕೆ ಆಗ್ರಹ

ದಸಂಸ ನೇತೃತ್ವದಲ್ಲಿ ರಾಯಪುರ ಗ್ರಾಮಸ್ಥರ ಧರಣಿ
Last Updated 30 ಸೆಪ್ಟೆಂಬರ್ 2020, 4:16 IST
ಅಕ್ಷರ ಗಾತ್ರ

ಹಾಸನ: ‘ತಾಲ್ಲೂಕಿನ ರಾಯಪುರ ಗ್ರಾಮದಲ್ಲಿ ಅಳವಡಿಸಲಾಗಿದ್ದ ‘ಮಹಾ ನಾಯಕ’ ಧಾರಾವಾಹಿ ಪ್ರಚಾರದ ಫ್ಲೆಕ್ಸ್‌ ಹರಿದು ವಿರೂಪಗೊಳಿಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಹಾಗೂ ಜೈ ಭೀಮ್‌ ಯುವಕರ ಸಂಘದ ನೇತೃತ್ವದಲ್ಲಿ ರಾಯಪುರ ಗ್ರಾಮಸ್ಥರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

‘ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಜೀವನ ಚರಿತ್ರೆ ಆಧಾರಿತ ‘ಮಹಾನಾಯಕ’ ಧಾರಾವಾಹಿ ಫ್ಲೆಕ್ಸ್‌ನ್ನು ಬಾಬಾ ಸಾಹೇಬರ ಅಭಿಮಾನಿಗಳು, ಜೈ ಭೀಮ್‌ ಯುವಕರ ಸಂಘ ಹಾಗೂ ಗ್ರಾಮಸ್ಥರು ಸೇರಿರಾಯಪುರದಲ್ಲಿ ಅಳವಡಿಸಲಾಗಿತ್ತು. ಆದರೆ ಸೆ. 24ರ ರಾತ್ರಿ ಅದೇ ಗ್ರಾಮದ ಕೆಲವರು ಟ್ರಾಕ್ಟರ್‌ನಿಂದ ಫ್ಲೆಕ್ಸ್‌ಗೆ ಗುದ್ದಿ ವಿರೂಪಗೊಳಿಸಿ ಅದರ ಮೇಲೆ ಮದ್ಯ ಸುರಿದು ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿದ್ದಾರೆ’ ಎಂದು ಪ್ರತಿಭಟನಕಾರರು ಆರೋಪಿಸಿದರು.

ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿದ ಗ್ರಾಮದ ಕಿಡಿಗೇಡಿಗಳನ್ನು ಬಂಧಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡರಾದ ಎಚ್‌.ಕೆ. ಸಂದೇಶ್‌, ಕೆ.ಈರಪ್ಪ, ಸೋಮಶೇಖರ್‌, ಆರ್‌ಪಿಐ ಮುಖಂಡ ಸತೀಶ್‌, ದಲಿತ ಹಕ್ಕುಗಳ ಸಮಿತಿ ಸಂಚಾಲಕ ಎಂ.ಜಿ. ಪೃಥ್ವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT