ಗಂಡಸಿ: ಲಾಳನಕೆರೆ ಗ್ರಾಮದ ದೇವಾಲಯದ ಜೀರ್ಣೋದ್ಧಾರಕ್ಕೆ ಹಣ ನೀಡಿರುವ ವಿಚಾರದಲ್ಲಿ ಭಾನುವಾರ ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ಹಾಗೂ ಗ್ರಾಮಸ್ಥರ ಮಧ್ಯೆ ವಾಗ್ವಾದ ನಡೆದಿದ್ದು, ಪೊಲೀಸರು ಪರಿಸ್ಥಿತಿ ತಿಳಿಸಿಗೊಳಿಸಿದರು.

ಲಾಳನಕೆರೆ ಗ್ರಾಮದ ಮಾರಿಕಾಂಬದೇವಿ ದೇವಾಲಯದ ಜೀರ್ಣೋದ್ಧಾರಕ್ಕೆ ಗ್ರಾಮಸ್ಥರ ಕೋರಿಕೆಯ ಮೇರೆಗೆ ಜೆಡಿಎಸ್ ಮುಖಂಡ ಎನ್. ಆರ್. ಸಂತೋಷ್ ₹10 ಲಕ್ಷ ದೇಣಿಗೆ ನೀಡುವುದಾಗಿ ವಾಗ್ದಾನ ಮಾಡಿದ್ದರು. ಆ ಪೈಕಿ ₹4 ಲಕ್ಷ ಮಾತ್ರ ದೇವಾಲಯದ ಆಡಳಿತ ಮಂಡಳಿ ಕೈ ಸೇರಿದ್ದು, ಉಳಿದ ₹6 ಲಕ್ಷ ನೀಡುವಂತೆ ಗ್ರಾಮಸ್ಥರು ದೂರವಾಣಿ ಮೂಲಕ ಸಂತೋಷ್ ಅವರನ್ನು ಕೋರಿದ್ದರು. ಆದರೆ, ₹10 ಲಕ್ಷ ಒಂದೇ ಕಂತಿನಲ್ಲಿ ಲಾಳನಕೆರೆ ಗ್ರಾಮದ ಜೆಡಿಎಸ್ ಮುಖಂಡ ಯೋಗೇಶ್ ಕೈಯಲ್ಲಿ ನೀಡಿರುವುದಾಗಿ ಸಂತೋಷ್ ತಿಳಿಸಿದ್ದರು.

ಸತ್ಯಾಸತ್ಯತೆ ತಿಳಿಯಲು ಲಾಳನಕೆರೆ ಮಾರಿಕಾಂಬದೇವಿ ಸನ್ನಿಧಿಯಲ್ಲಿ ಭಾನುವಾರ ಮಧ್ಯಾಹ್ನ ಎನ್. ಆರ್. ಸಂತೋಷ್ ಮತ್ತು ಯೋಗೇಶ್ ಇಬ್ಬರಿಗೂ ಆಹ್ವಾನ ನೀಡಿ, ಪೊಲೀಸ್ ಬಿಗಿ ಕಾವಲಿನೊಂದಿಗೆ ಗಂಡಸಿ ನಾಗರಾಜಣ್ಣ ಅಧ್ಯಕ್ಷತೆಯಲ್ಲಿ ಬಹಿರಂಗ ಸಭೆ ಏರ್ಪಡಿಸಲಾಗಿತ್ತು. ಇಬ್ಬರ ವಾದ ಪ್ರತಿವಾದವನ್ನು ಸಭೆ ಆಲಿಸಿದಾಗ, ಎನ್. ಆರ್. ಸಂತೋಷ್ ₹4 ಲಕ್ಷ ನೀಡಿರುವ ಬಗ್ಗೆ ಸಾಕ್ಷಿ ಆಧಾರಗಳು ಕಂಡುಬಂದಿದ್ದು, ₹10 ಲಕ್ಷ ಒಂದೇ ಕಂತಿನಲ್ಲಿ ನೀಡಿರುವುದಕ್ಕೆ ಯಾವುದೇ ಆಧಾರಗಳು ಸಿಗಲಿಲ್ಲ.

ಗ್ರಾಮದ ಯುವಕ ಯೋಗೇಶ್ ಮೇಲೆ ಆಪಾದನೆಗೆ ಮಾಡಿರುವ ಎನ್. ಆರ್. ಸಂತೋಷ್, ಸಭೆಯಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ ಗ್ರಾಮಸ್ಥರು, ಧಿಕ್ಕಾರ ಕೂಗಿದರು. ಗದ್ದಲ, ನೂಕಾಟ ತಳ್ಳಾಟ ನಡೆಯಿತು. ಕೂಡಲೇ ಎಚ್ಚೆತ್ತ ಪೊಲೀಸರು, ಸಭೆಯನ್ನು ಮುಟುಕುಗೊಳಿಸಿ ಎನ್. ಆರ್. ಸಂತೋಷ್ ಅವರನ್ನು ಬಿಗಿ ಬಂದೋಬಸ್ತ್ನಲ್ಲಿ ಸುರಕ್ಷಿತವಾಗಿ ಹೊರಗೆ ಕಳುಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-36-1787987704

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.