ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ ಜಿಲ್ಲೆಯಲ್ಲಿ ಉತ್ತಮ ಮಳೆ

Last Updated 21 ಅಕ್ಟೋಬರ್ 2020, 5:15 IST
ಅಕ್ಷರ ಗಾತ್ರ

ಹಾಸನ: ನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಮಂಗಳವಾರ ಉತ್ತಮ ಮಳೆಯಾಗಿದೆ.

ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಇದ್ದು, ಸಂಜೆ 4 ರಿಂದ 6 ಗಂಟೆವರೆಗೂ ರಭಸದ ಮಳೆಯಾಯಿತು.

ಮಳೆಯಿಂದಾಗಿ ಚರಂಡಿ ನೀರು ರಸ್ತೆಗಳಲ್ಲಿ ಹರಿದು ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ತೊಂದರೆ ಉಂಟಾಯಿತು. ಕಂದಲಿ, ಸಾಲಗಾಮೆ, ಶಾಂತಿಗ್ರಾಮ ಸುತ್ತಮುತ್ತ ಮಳೆಯಾಗಿದೆ.

ಮಂಗಳವಾರ ಬೆಳಿಗಿವರೆಗಿನ 24 ಗಂಟೆಯಲ್ಲಿ ದಾಖಲಾದ ಹೋಬಳಿವಾರು ಮಳೆ ವಿವರ. ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ 3.2 ಮಿ.ಮೀ., ಸಕಲೇಶಪುರ 2.8 ಮಿ.ಮೀ, ಬೆಳಗೋಡು 19.2 ಮಿ.ಮೀ. ಮಳೆಯಾಗಿದೆ.
ಆಲೂರು ತಾಲ್ಲೂಕಿನ ಕುಂದೂರು 2.4 ಮಿ.ಮೀ. ಪಾಳ್ಯ 6.8 ಮಿ.ಮೀ. ಮಳೆಯಾಗಿದೆ. ಬೇಲೂರು ತಾಲ್ಲೂಕಿನ ಹಗರೆ 7.4 ಮಿ.ಮೀ., ಅರೆಹಳ್ಳಿ 2.6 ಮಿ.ಮೀ., ಗೆಂಡೇಹಳ್ಳಿ 8 ಮಿ.ಮೀ., ಬಿಕ್ಕೋಡು 3 ಮಿ.ಮೀ., ಮಳೆಯಾಗಿದೆ.

ಹೊಳೆನರಸೀಪುರ ತಾಲ್ಲೂಕಿನ ಹಳೆಕೋಟೆ 11 ಮಿ.ಮೀ. ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT