ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುತ್ತಿಗಾಗಿ ಅಡುಗೆ ಕಲಿಕೆ

Last Updated 31 ಮೇ 2018, 19:30 IST
ಅಕ್ಷರ ಗಾತ್ರ

ಜೂನ್ ತಿಂಗಳು ಆರಂಭವಾಗುತ್ತಿದ್ದಂತೆ ಮಕ್ಕಳಿಗೆ ಶಾಲೆಯ ಚಿಂತೆಯಾದರೆ, ಪೋಷಕರಿಗೆ ಮಕ್ಕಳನ್ನು ಶಾಲಾ ಸಮಯಕ್ಕೆ ಸರಿಯಾಗಿ ರೆಡಿ ಮಾಡಿಸುವ ಧಾವಂತ ಆರಂಭ. ನಗರದಲ್ಲಿ ಮಕ್ಕಳ ದಾಖಲಾತಿಗಳು ಮುಗಿದಿದ್ದು, ಮಕ್ಕಳೂ ಶಾಲೆಗೆ ಹೋಗಲು ಸಿದ್ಧವಾಗಿದ್ದಾರೆ. ಮಕ್ಕಳ ಸಿದ್ಧತೆ ಹಾಗೂ ಮಕ್ಕಳನ್ನು ಶಾಲೆಗೆ ಕಳುಹಿಸಲು ತಮ್ಮ ತಯಾರಿಯನ್ನು ಕೆಲ ಪೋಷಕರು ಹಂಚಿಕೊಂಡಿದ್ದು ಹೀಗೆ...

‘ಲಂಚ್‌ ಬಾಕ್ಸ್‌ಗೆ ಅಡುಗೆ ಕಲಿಯುತ್ತಿದ್ದೇನೆ’
ಮಗಳು ಸುಹಾನಿ ತುಂಬ ಕಾರ್ಟೂನ್‌ ಚಾನೆಲ್‌ ನೋಡ್ತಾಳೆ. ಈ ವರ್ಷ ಎಲ್‌.ಕೆ.ಜಿ.ಗೆ ಸೇರಿಸುತ್ತಿದ್ದೇನೆ. ‘ಶಾಲೆಗೆ ಹೋಗುವವರು ತುಂಬ ಟಿ.ವಿ ನೋಡಬಾರದು, ಹೋಂ ವರ್ಕ್‌ ಬೇಗ ಮುಗಿಸಿದರೆ ಟೀಚರ್‌ ಎಲ್ಲರೆದುರು ಹೊಗಳುತ್ತಾರೆ. ನೀನು ಜಾಣೆ’ ಎಂದೆಲ್ಲಾ ಹೇಳಿ ಟಿ.ವಿ ನೋಡುವುದನ್ನು ಸ್ವಲ್ಪ ಕಡಿಮೆ ಮಾಡಿಸುತ್ತಿದ್ದೇವೆ. ಜೂನ್‌ನಿಂದ ಅಕ್ಟೋಬರ್‌ ತನಕ ಅವರಿಗೆ ಮಧ್ಯಾಹ್ನ ತನಕ ಶಾಲೆ ಇರುತ್ತದೆ. ದಸರಾ ರಜೆ ನಂತರ ಅವರಿಗೆ ಮೂರು ಗಂಟೆ ತನಕ ಸ್ಕೂಲ್‌ ಇರುತ್ತದೆ. ಸುಹಾನಿ ದಿನಾ ಸ್ಪೆಷಲ್‌ ತಿಂಡಿ ಮಾಡು ಅಂತಿರ್ತಾಳೆ.  ಶಾಲೆಗೆ ಲಂಚ್‌ ಬಾಕ್ಸಿಗೆ ಬೇರೆ ಬೇರೆ ತಿಂಡಿ ಮಾಡಲೇಬೇಕು. ಯೂಟ್ಯೂಬ್‌ ನೋಡಿಕೊಂಡು ವಿಶೇಷ ಅಡುಗೆ ಮಾಡೋದನ್ನ ಕಲಿಯುತ್ತಿದ್ದೇನೆ.
–ಸುಮಲತಾ, ಬಾಣಸವಾಡಿ


ಮಗಳು ಸುಹಾನಿ ಜೊತೆ ಸುಮಲತಾ
*
ತರಬೇತಿ ಶುರು
ಮಗ ನಿಶ್ಚಿತ್‌ಗೆ ಎರಡೂವರೆ ವರ್ಷ. ನರ್ಸರಿಗೆ ಸೇರಿಸುತ್ತಿದ್ದೇವೆ. ಮನೆಯಲ್ಲೇ ಆಟ ಆಡಿಕೊಂಡು, ದೊಡ್ಡ ಮಗನ ಜೊತೆ ಗಲಾಟೆ ಮಾಡಿಕೊಂಡು ಇರುತ್ತಿದ್ದ. ಕೆಲ ಅಕ್ಷರಗಳನ್ನು ಬರೆಯುವುದನ್ನು ಈಗ ಕಲಿತಿದ್ದ. ‘ಸ್ಕೂಲ್‌ನಲ್ಲಿ ಗಲಾಟೆ ಮಾಡಬಾರದು, ತುಂಬ ಜನ ಸ್ನೇಹಿತರು ಸಿಗ್ತಾರೆ ಎಂದೆಲ್ಲಾ ಹೇಳಿ ಮನವೊಲಿಸುತ್ತಿದ್ದೇವೆ. ಬೆಳಿಗ್ಗೆ ಹೋದ ಕೂಡಲೇ ಮಿಸ್‌ಗೆ ಗುಡ್‌ ಮಾರ್ನಿಂಗ್‌ ಹೇಳಬೇಕು, ಅವರು ಹೇಳಿದಾಗೆ ಕೇಳಬೇಕು ಎಂದು ಹೇಳಿಕೊಟ್ಟಿದ್ದೇವೆ. ನರ್ಸರಿ ಶಾಲೆ ಮನೆ ಸಮೀಪದಲ್ಲೇ ಇರುವುದರಿಂದ ಟೈಮಿಂಗ್‌ ತೊಂದರೆಯಿಲ್ಲ. ಮಗನನ್ನು ಶಾಲೆ ಸಮಯಕ್ಕೆ ಸರಿಯಾಗಿ ರೆಡಿ ಮಾಡಿಸಬೇಕಷ್ಟೇ.
 –ನಿರತ ಜಯಪ್ರಕಾಶ್‌, ಹಲಸೂರು


ಮಗ ನಿಶ್ಚಿತ್‌ ಜೊತೆ ಜಯಪ್ರಕಾಶ್‌, ನಿರತ

*
ಶಾಲೆ ಅಂದ್ರೆ ಶಿಕ್ಷೆಯಲ್ಲ! 
ಮಗಳು ಇನಿ ಶೀಲವಂತ್‌ ಈ ವರ್ಷ ಎಲ್‌.ಕೆ.ಜಿ ಸೇರಿಸಿದ್ದೀವಿ. ಶಾಲೆಗೆ ಅಂದ್ರೆ ಅವಳ ದಿನಚರಿ ಬದಲಾಗುತ್ತದೆ. ಶಾಲೆ ಕೆಲಸದ ಜೊತೆ ಅವಳ ಊಟ, ನಿದ್ದೆ, ಆರೋಗ್ಯದ ಬಗ್ಗೆ ನಾವು ಯೋಚನೆ ಮಾಡಬೇಕು. ಅವಳಿಗೆ ಓದು ಅಂತ ಒತ್ತಡ ಹಾಕಬಾರದು ಎಂದು ಕೊಂಡಿದ್ದೇವೆ. ಅವಳಿಷ್ಟದ ಜನರನ್ನೇ ಉದಾಹರಣೆಯನ್ನಾಗಿಸಿ ಅವಳಿಗೆ ಶಾಲೆಯ ವಿಚಾರಗಳನ್ನು ಅರ್ಥ ಮಾಡಿಸೋದು ಮಾಡಿಸುತ್ತಿದ್ದೇವೆ. ಒಟ್ಟಾರೆ ಅವಳಿಗೆ ಶಾಲೆ ಅಂದರೆ ಅದೂ ಕೂಡ ಮನೋರಂಜನೆಯೇ, ಶಿಕ್ಷೆಯಲ್ಲ ಎಂಬಂತಿರಬೇಕು.
–ಅಮಿತ್‌ ಶೀಲವಂತ್‌, ವಿಜಯನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT