ಬೇಲೂರು: ತಾಲ್ಲೂಕಿನ ಹಾಡ್ಲಗೆರೆ ಗ್ರಾಮದ ಕೊಟ್ಟಿಗೆಯಲ್ಲಿ ಕಟ್ಟಿಹಾಕಲಾಗಿದ್ದ ಹಸುವಿನ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ.
ಬೇಲೂರಿನ ಮಲ್ಲಿಕಾರ್ಜುನ ಮೆಡಿಕಲ್ಸ್ ಮಾಲೀಕ ರಾಜು ಎಂಬುವವರು ಮಂಗಳವಾರ ಹಾಡ್ಲಗೆರೆಯ ತಮ್ಮ ಮನೆಯ ಕೊಟ್ಟಿಗೆಯಲ್ಲಿ 2 ಹಸುಗಳನ್ನು ಕಟ್ಟಿ ಹಾಕಿದ್ದರು. ತಡ ರಾತ್ರಿ ಚಿರತೆಯೊಂದು ಒಂದು ಹಸುವಿನ ಮೇಲೆ ದಾಳಿ ಮಾಡಿದೆ. ಚಿರತೆಯ ದಾಳಿಯಿಂದ ಹೆದರಿದ ಇನ್ನಿತರೆ ಹಸುಗಳು ಜೋರಾಗಿ ಕೂಗಿ ಕೊಂಡಿದ್ದರಿಂದ ಚಿರತೆ ಹಸುವನ್ನು ಬಿಟ್ಟು ಹೋಗಿದೆ. ಆದರೆ ಚಿರತೆ ದಾಳಿಯಿಂದ ಗಾಯ ಗೊಂಡಿದ್ದ ಹಸು ಸ್ಥಳದಲ್ಲೆ ಮೃತಪಟ್ಟಿದೆ.
ಹಾಡ್ಲಗೆರೆ ಗ್ರಾಮದಲ್ಲಿ ಚಿರತೆ ದಾಳಿಗೆ ಹಸು ಬಲಿಯಾಗಿರುವ ವಿಷಯ ತಿಳಿದ ಹಾಡ್ಲಗೆರೆ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದು, ಆದಷ್ಟು ಬೇಗ ಚಿರತೆಯನ್ನು ಹಿಡಿಯಬೇಕು ಎಂದು ಅರಣ್ಯ ಇಲಾಖೆಯವರನ್ನು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಪಶು ಸಂಪಗೋಪನ ಇಲಾಖೆ ವೈದ್ಯ ಡಾ.ಹರ್ಷ, ಉಪ ವಲಯ ಅರಣ್ಯಾಧಿಕಾರಿ ಗುರುರಾಜ್, ಅರಣ್ಯ ರಕ್ಷಕ ರಘುಕುಮಾರ್ ಆಗಮಿಸಿ ಪರಿಶೀಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.