ಹಳೇಬೀಡು: ಬಿದುರು ಕೆರೆಗೆ ಮಣ್ಣು ಸುರಿದಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಸಾರ್ವಜನಿಕರಿಂದ ಆಕ್ಷೇಪಣೆ ವ್ಯಕ್ತವಾಗಿದ್ದರಿಂದ ಸೋಮವಾರ ಪಿಡಿಒ ಎಸ್.ಸಿ.ವಿರೂಪಾಕ್ಷ ಹಾಗೂ ರಾಜಸ್ವ ನಿರೀಕ್ಷಕ ವಿಠಲ ರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಕೆರೆ ಮುಂದಿನ ಜಮೀನುಗಳಿಗೆ ರಸ್ತೆ ಮಾಡಿಕೊಳ್ಳಲು ಮಣ್ಣು ಸುರಿದಿರಬಹುದು. ಕೆರೆ ಭರ್ತಿಯಾಗುವವರೆಗೆ ತಾತ್ಕಾಲಿಕ ರಸ್ತೆ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಕೆರೆಯಲ್ಲಿ ಮಣ್ಣು ತುಂಬಿಸಿದರೆ, ನೀರು ಸಂಗ್ರಹಣೆ ಸಾಮರ್ಥ್ಯ ಕಡಿಮೆಯಾಗುತ್ತದೆ. ಗ್ರಾಮ ಪಂಚಾಯಿತಿಯವರು ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆಯವರು ಒತ್ತಾಯಿಸಿದ್ದರು.

ಪಿಡಿಒ ಎಸ್.ಸಿ.ವಿರೂಪಾಕ್ಷ ಮಾತನಾಡಿ, ‘ಕೆರೆ, ಕಟ್ಟೆಗಳ ಸಂರಕ್ಷಣೆ ಎಲ್ಲರ ಹೊಣೆ. ಕೆರೆ ಒಡಲಿಗೆ ಅನುಪಯುಕ್ತ ತ್ಯಾಜ್ಯ ಹಾಗೂ ಮಣ್ಣು ಸುರಿಯುವುದು ತಪ್ಪಾಗುತ್ತದೆ. ಕೆರೆಗೆ ಮಣ್ಣು ಸುರಿಯುವುದಕ್ಕೆ ತಕ್ಷಣ ಕಡಿವಾಣ ಹಾಕುತ್ತೇವೆ’ ಎಂದರು.

‘ಬಿದುರು ಕೆರೆ ಕಂದಾಯ ಇಲಾಖೆ ವ್ಯಾಪ್ತಿಗೆ ಒಳ ಪಡುವುದಿಲ್ಲ. ಗ್ರಾಮ ಪಂಚಾಯಿತಿಗೆ ವಹಿಸಲಾಗಿದೆ. ಸಾರ್ವಜನಿಕ ಹಿತ ದೃಷ್ಟಿಯಿಂದ ಪರಿಶೀಲನೆ ನಡೆಸಿದ್ದೇವೆ. ಸೂಕ್ತ ಕ್ರಮ ಕೈಗೊಳ್ಳಲು ಗ್ರಾಮ ಪಂಚಾಯಿತಿಗೆ ಸೂಚಿಸುತ್ತೇವೆ’ ಎಂದು ರಾಜಸ್ವ ನಿರೀಕ್ಷಕ ವಿಠಲ ರಾಜ್ ಹೇಳಿದರು.

ಬಿದುರು ಕೆರೆ ಒಡಲಿಗೆ ತ್ಯಾಜ್ಯ ಹಾಗೂ ಮಣ್ಣು ಸುರಿಯುವುದಕ್ಕೆ ಕಡಿವಾಣ ಹಾಕದಿದ್ದರೆ ಮುಂದಿನ ದಿನದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ಜಿಲ್ಲಾ ಪ್ರತಿನಿಧಿ ಸೀತಾರಾಮು ಎಚ್ಚರಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-36-1333420406

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.