ಹಳೇಬೀಡು: ಹೊಯ್ಸಳೇಶ್ವರ ದೇವಾಲಯ ರಸ್ತೆಯಲ್ಲಿರುವ ಸೆಸ್ಕ್ ಶಾಖಾ ಕಚೇರಿ ಆವರಣದ ವಸತಿಗೃಹ ಹಾಗೂ ಸುತ್ತಲಿನ ಪ್ರದೇಶದಲ್ಲಿ ಕಸ–ಕಡ್ಡಿ, ಮದ್ಯದ ಬಾಟಲಿಗಳು ತುಂಬಿದ್ದು, ಗಲೀಜು ವಾತಾವರಣ ನಿರ್ಮಾಣವಾಗಿದೆ. ವಸತಿಗೃಹಗಳು ಹಾಳು ಕೊಂಪೆಯಂತಾಗಿವೆ.

ಸೆಸ್ಕ್ ಕಚೇರಿ ಆವರಣದಲ್ಲಿ ಒಂದು ಕಿರಿಯ ಎಂಜಿನಿಯರ್ ವಸತಿ ಗೃಹ, 4 ಪವರ್ ಮ್ಯಾನ್ ವಸತಿಗೃಹಗಳಿವೆ. ಕಿರಿಯ ಎಂಜಿನಿಯರ್ (ಶಾಖಾಧಿಕಾರಿ) ವಸತಿಗೃಹ ಸ್ವಲ್ಪ ಗಟ್ಟಿಮುಟ್ಟಾಗಿದೆ. ಶಾಖಾಧಿಕಾರಿ ಕಚೇರಿಯು ಉಪ ವಿಭಾಗವಾಗಿ ಪರಿವರ್ತನೆ ಆಗುತ್ತಿರುವುದರಿಂದ ಹೆಚ್ಚುವರಿ ಕಟ್ಟಡ ಅಗತ್ಯವಿದ್ದು, ಕಿರಿಯ ಎಂಜಿನಿಯರ್ ವಸತಿಗೃಹಕ್ಕೆ ಕಚೇರಿ ವಿಸ್ತರಿಸಲಾಗಿದೆ.

ಆದರೆ ಕಟ್ಟಡದ ಹಿಂಭಾಗದ ತೊಟ್ಟಿಯಲ್ಲಿ ಮದ್ಯದ ಖಾಲಿ ಬಾಟಲಿಗಳು ತುಂಬಿವೆ. ವಸತಿ ಗೃಹಗಳು ಶಿಥಿಲವಾಗಿರುವುದರಿಂದ ವಾಸಕ್ಕೆ ಯೋಗ್ಯವಾಗಿಲ್ಲ ಎಂದು ಸಿಬ್ಬಂದಿ ಬೇರೆ ಊರಿನಿಂದ ಬರುತ್ತಾರೆ. ಆದರೆ ಇಲ್ಲಿ ಮೋಜು–ಮಸ್ತಿ ಮಾಡುವವರಿಗೆ ಯಾವುದೇ ಅಡೆತಡೆ ಇಲ್ಲದಂತಾಗಿದೆ.

‘ಈಗ ಎಲ್ಲ ಕೆಲಸಗಳಿಗೂ ವಿದ್ಯುತ್ ಅಗತ್ಯವಾಗಿದೆ. ವಿದ್ಯುತ್ ನಿರ್ವಹಣೆ ಸಮರ್ಪಕವಾಗಿ ನಡೆದರೆ ಮಾತ್ರ ಬೆಳಕು, ಕುಡಿಯಲು ನೀರು ದೊರಕುತ್ತದೆ. ವಿದ್ಯುತ್ ಸೇವೆ ಶ್ರೇಷ್ಠ ಕೆಲಸವಾಗಿದೆ. ವಿದ್ಯುತ್ ಕಚೇರಿ ದೇವಾಲಯಕ್ಕೆ ಸರಿಸಮಾನ. ಕಚೇರಿ ಹಾಗೂ ವಸತಿಗೃಹದಲ್ಲಿ ಮದ್ಯದ ಬಾಟಲಿ ಬೀಳದಂತೆ ಸಿಬ್ಬಂದಿ ಎಚ್ಚರ ವಹಿಸಬೇಕು’ ಎನ್ನುತ್ತಾರೆ ರೈತ ಸಂಘ ಸಾಮೂಹಿಕ ನಾಯಕ ಟಿ.ಬಿ.ಹಾಲಪ್ಪ.

ಶಾಖಾಧಿಕಾರಿ ವಸತಿ ಗೃಹ ಕಟ್ಟಡಕ್ಕೆ ಗಿಡ, ಬಳ್ಳಿಗಳು ಆವರಿಸುತ್ತಿವೆ. ಕಟ್ಟಡದ ಸುತ್ತ ಸ್ವಚ್ಛತೆ ಇಲ್ಲದೇ ಕಚೇರಿ ಕೆಲಸಕ್ಕೆ ಬರುವ ವಿದ್ಯುತ್ ಬಳಕೆದಾರರು ಅಸಹ್ಯ ಪಡುವಂತಾಗಿದೆ.

ಪವರ್ ಮ್ಯಾನ್ ವಸತಿಗೃಹಗಳಲ್ಲಿ ಹಳೆಯ ಬಟ್ಟೆ, ಮುರಿದ ಪೀಠೋಪಕರಣ, ಕಸಕಡ್ಡಿ ತುಂಬಿಕೊಂಡಿವೆ. ಶೌಚಾಲಯ ಹಾಗೂ ಸ್ನಾನದ ಕೋಣೆಗಳು ಗಲೀಜು ತುಂಬಿಕೊಂಡಿದ್ದು, ಉಪಯೋಗಕ್ಕೆ ಬಾರದಂತಾಗಿವೆ.

ಕರ್ನಾಟಕ ಪಬ್ಲಿಕ್ ಶಾಲೆ ಪಕ್ಕದ ರಸ್ತೆಯಿಂದ ಉಡಸಲಮ್ಮ ದೇವಾಲಯದವರೆಗೆ ವಿಸ್ತರಿಸಿರುವ ಸೆಸ್ಕ್ ಕಚೇರಿ ಆವರಣದಲ್ಲಿ ಗಿಡಗಂಟಿ ತುಂಬಿಕೊಂಡಿದೆ. ಪಟ್ಟಣಕ್ಕೆ ವಿದ್ಯುತ್ ಪೂರೈಕೆ ಮಾಡುವ ಪರಿವರ್ತಕ ಇಲ್ಲಿದ್ದು, ಅದಕ್ಕೆ ಗಿಡಗಳು ಆವರಿಸಿವೆ. ಕಚೇರಿ ಆವರಣದ ಪರಿವರ್ತಕದ ಪರಿಸ್ಥಿತಿ ಹೀಗಾದರೆ, ದೂರದ ಸಂದಿ ಮೂಲೆಯ ಪರಿವರ್ತಕಗಳ ಪರಿಸ್ಥಿತಿ ಯಾವ ರೀತಿ ಇರಬಹುದು ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-36-297798131

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.