ಹಳೇಬೀಡು: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ರಕ್ತದಾನ, ನೇತ್ರ ಹಾಗೂ ದಂತ ತಪಾಸಣೆ ಶಿಬಿರ ನಡೆಯಿತು.

ಯುವ ರೆಡ್ ಕ್ರಾಸ್ ಘಟಕ, ಭಾರತೀಯ ರೆಡ್ ಕ್ರಾಸ್ ಬೇಲೂರು ತಾಲ್ಲೂಕು ಘಟಕ, ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ಹಾಗೂ ಯೋಗ ಚೇತನ ಕೇಂದ್ರ ಆಶ್ರಯದಲ್ಲಿ ನಡೆದ ಶಿಬಿರದಲ್ಲಿ 53 ಮಂದಿ ರಕ್ತದಾನ ಮಾಡಿದರು. 85 ಮಂದಿ ನೇತ್ರ ತಪಾಸಣೆ, 58 ಮಂದಿ ದಂತ ತಪಾಸಣೆ ಮಾಡಿಸಿಕೊಂಡರು. ಎಚ್ಐವಿ ಏಡ್ಸ್ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಶಿಬಿರಕ್ಕೆ ಭೇಟಿ ನೀಡಿದ ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ‘ಗುಣಮಟ್ಟದ ಬೋಧನೆಯ ಜೊತೆಗೆ ವಿದ್ಯಾರ್ಥಿಗಳ ಆರೋಗ್ಯ ಕಾಳಜಿ ಕಾಲೇಜಿನ ಪ್ರಮುಖ ಹೊಣೆ. ಜನರ ಪ್ರಾಣ ಉಳಿಸಲು ರಕ್ತದ ಅಗತ್ಯ ಹೆಚ್ಚಾಗಿದೆ. ವಿದ್ಯಾರ್ಥಿಗಳು ರಕ್ತದಾನ ಮಾಡಿ ದೇಶದ ಹೆಮ್ಮೆಯ ಪುತ್ರರಾಗಿದ್ದಾರೆ’ ಎಂದು ಶ್ಲಾಘಿಸಿದರು.

‘ಗ್ರಾಮೀಣ ಜನರ ಆರೋಗ್ಯ ಬಹಳ ಮುಖ್ಯ. ಕೃಷಿ ಕಾಯಕದ ನಡುವೆ ವೈಯಕ್ತಿಕ ಆರೋಗ್ಯ ತಪಾಸಣೆ ಮೂಲಕ ನೆಮ್ಮದಿಯ ಜೀವನ ಸಾಗಿಸಬೇಕು’ ಎಂದರು.

ಪ್ರಾಂಶುಪಾಲ ಶ್ರೀನಿವಾಸ ಬಿ.ಕೆ. ಮಾತನಾಡಿ, ‘ವೈಯಕ್ತಿಕ ಆರೋಗ್ಯ ಕಾಳಜಿಗೆ ಜನರು ಹೆಚ್ಚಿನ ಗಮನಹರಿಸಬೇಕು. ಬಡವರು, ಮಧ್ಯಮ ವರ್ಗದವರು ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಸದುಪಯೋಗ ಮಾಡಿಕೊಳ್ಳಬೇಕು’ ಎಂದರು.

ರೆಡ್ ಕ್ರಾಸ್ ತಾಲ್ಲೂಕು ಚೇರ್ಮನ್ ವೈ.ಎಸ್.ಸಿದ್ದೇಗೌಡ, ಸಂಚಾಲಕ ಸಿ.ಎಚ್.ಧನಂಜಯ, ಸದಸ್ಯ ಮುತ್ತಗನ್ನೆ ರಾಜಕುಮಾರ್, ದಂತ ಶಸ್ತ್ರಚಿಕಿತ್ಸಕ ಡಾ.ಮಂಜುನಾಥ್, ವಸಡು ರೋಗ ತಜ್ಞ ಡಾ.ಪೂಜಿತ್, ಆರೋಗ್ಯ ನಿರೀಕ್ಷಾಣಾಧಿಕಾರಿ ಹಕ್ಯಣ್ಣ ಕುಮಾರ್, ಮಹಿಳಾ ಆರೋಗ್ಯ ಸುರಕ್ಷಣಾಧಿಕಾರಿ ಸವಿತಾ ನಾಯ್ಕ, ಯುವ ಡೆಡ್ ಕ್ರಾಸ್ ಸಂಚಾಲಕ ಮನೋಜ್ ಕುಮಾರ್ ಕೆ.ಎಸ್, ಸಿಡಿಸಿ ಕಾರ್ಯಾಧ್ಯಕ್ಷ ಎಚ್.ಸಿ.ಚೇತನ್, ಸದಸ್ಯ ರಂಜಿತ್, ಕಾಲೇಜಿನ ಭೂದಾನಿ ಸಿ.ಆರ್.ಲಿಂಗಪ್ಪ ಪ್ರೇಮಣ್ಣ, ಯೋಗ ಶಿಕ್ಷಕ ಚೇತನ್ ಗುರೂಜಿ, ಐಕ್ಯೂಎಸಿ ಸಂಚಾಲಕ ಅಭಿಷೇಕ್ ಎನ್, ಪ್ರಥಮ ದರ್ಜೆ ಸಹಾಯಕ ಉಮೇಶ್ ಎಂ.ಎಲ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-36-1427184249

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.