ಹಳೇಬೀಡು: ಅಡಗೂರು ವೃತ್ತದ ಗ್ರಾಮ ಆಡಳಿತಾಧಿಕಾರಿ ಸಿರಾಜ್ ಸಾರ್ವಜನಿಕರ ಸಂಪರ್ಕಕ್ಕೆ ಸಮರ್ಪಕವಾಗಿ ಸಿಗದೆ ತೊಂದರೆಯಾಗಿದೆ. ಅಡಗೂರು ವೃತ್ತದ ಗ್ರಾಮ ಆಡಳಿತಾಧಿಕಾರಿ ಸಂಪರ್ಕಿಸಲು ಹೋಬಳಿ ಕೇಂದ್ರ ಹಗರೆಗೆ ತೆರಳಬೇಕಾಗಿದೆ ಎಂದು ತಿರುಮಲನಹಳ್ಳಿ ಮುಖಂಡ ಟಿ.ಆರ್.ಶಿವೇಗೌಡ ಹೇಳಿದ್ದಾರೆ.

ವೃತ್ತದ ಕೇಂದ್ರ ಸ್ಥಳ ಅಡಗೂರು ಗ್ರಾಮಕ್ಕೆ ವಾರದಲ್ಲಿ ಎರಡು ದಿನ ಆಗಮಿಸಿ ಸಾರ್ವಜನಿಕರರ ಸಂಪರ್ಕಕ್ಕೆ ಸಿಗಬೇಕು ಎಂಬ ನಿಯಮವನ್ನು ಅವರು ಅನುಸರಿಸುತ್ತಿಲ್ಲ. ಗ್ರಾಮ ಆಡಳಿತಾಧಿಕಾರಿ ಕುಳಿತು ಕೆಲಸ ಮಾಡಲು ಕೊಠಡಿ ಇದ್ದರೂ ಅವರು ಉಪಯೋಗ ಮಾಡಿಕೊಳ್ಳುತ್ತಿಲ್ಲ. ಹಿಂದೆ ಗ್ರಾಮ ಆಡಳಿತಾಧಿಕಾರಿಗಳು ಸಾರ್ವಜನಿಕರ ಸಂಪರ್ಕದಲ್ಲಿರುತ್ತಿದ್ದರು. ಈಗ ಅವರನ್ನು ಭೇಟಿ ಮಾಡುವುದು ಕಷ್ಟವಾಗಿದೆ. ಉನ್ನತ ಅಧಿಕಾರಿಗಳು ಗಮನಹರಿಸಿ ವಾರದಲ್ಲಿ ಎರಡು ದಿನ ಅಡಗೂರು ವೃತ್ತ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-36-164719221

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.