ಹಳೇಬೀಡು: ಜಿ.ಸಾಣೇನಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಹಸುಗಳು ಶುಕ್ರವಾರ ಸಂಜೆ ಮೃತಪಟ್ಟಿವೆ.

ರೈತ ಚನ್ನವೀರೇಗೌಡ ತೋಟದ ಮನೆಯಲ್ಲಿ ಬೆಲೆ ಬಾಳುವ ಸಿಂಧಿ ತಳಿಯ ಹಸುಗಳನ್ನು ಸಾಕಿದ್ದರು. ಮಳೆ ಪ್ರಾರಂಭವಾಗಿದ್ದರಿಂದ ಮನೆಯ ಹೊರಗೆ ಕಟ್ಟಿದ್ದ ಮೂರು ಹಸುಗಳ ಪೈಕಿ ಒಂದು ಹಸುವನ್ನು ಕೊಟ್ಟಿಗೆಗೆ ಕಟ್ಟಿ, ಕೊಟ್ಟಿಗೆಯಿಂದ ಆಚೆ ಬರುವ ಹೊತ್ತಿಗೆ ಹೊರಗಡೆ ಇದ್ದ ಎರಡು ಹಸುಗಳಿಗೆ ಸಿಡಿಲು ಬಡಿದಿದೆ.

ರೈತ ಚನ್ನವೀರೇಗೌಡ ಕೂದಲೆಳೆ ಅಂತರದಲ್ಲಿ ಸಿಡಿಲಿನಿಂದ ಪಾರಾಗಿದ್ದಾರೆ. ಒಂದೊಂದು ಹಸು ದಿನಕ್ಕೆ 30 ಲೀಟರ್ ಹಾಲು ಕೊಡುತ್ತಿದ್ದವು. ಒಂದೊಂದು ಹಸು ₹1ಲಕ್ಷ ಬೆಲೆ ಬಾಳುತ್ತಿದ್ದವು. ಜಮೀನಲ್ಲಿ ಆದಾಯ ದೊರೆಯದಿದ್ದರೂ ಹಸುಗಳ ಸಾಕಾಣಿಕೆಯಿಂದ ಜೀವನ ನಡೆಸುತ್ತಿದ್ದೆವು. ಮುಂದಿನ ಜೀವನದ ಬಗ್ಗೆ ಚಿಂತೆ ಕಾಡುತ್ತಿದೆ ಎಂದು ರೈತ ಚನ್ನವೀರೇಗೌಡ ಅಳಲು ತೋಡಿಕೊಂಡರು. ಹಿರಿಯ ಪಶು ವೈದ್ಯಾಧಿಕಾರಿ ಹಸುಗಳ ಮರಣೋತ್ತರ ಪರೀಕ್ಷೆ ನಡೆಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-36-1719634569

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.