ಹಳೇಬೀಡು: ಜೈನಧರ್ಮದ 16ನೇ ತೀರ್ಥಂಕರರಾದ ಭಗವಾನ್ ಶಾಂತಿನಾಥ ಸ್ವಾಮಿಯ ಆರಾಧನ ವಿಧಾನ ಹಾಗೂ 33ನೇ ವರ್ಷದ ಜಿನ ಮಂದಿರದ ವಾರ್ಷಿಕ ಪೂಜೆ ಅಡಗೂರು ಜಿನ ಮಂದಿರದಲ್ಲಿ ಭಾನುವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.

ಮುಂಜಾನೆ 6.30ಕ್ಕೆ ಧಾರ್ಮಿಕ ಧ್ವಜಾರೋಹಣ ನೆರವೇರಿಸಿದ ನಂತರ ನಿತ್ಯ ಪೂಜೆ ನೆರವೇರಿಸಿ ವಿವಿಧ ಪೂಜಾ ವಿಧಾನಕ್ಕೆ ಚಾಲನೆ ನೀಡಲಾಯಿತು.

ಶ್ವೇತ ವಸ್ತ್ರ ಧರಿಸಿದ್ದ ಶ್ರಾವಕ, ಶ್ರಾವಕಿಯರು ಕಟ್ಟು ನಿಟ್ಟಿನ ವ್ರತ ನಿಯಮದೊಂದಿಗೆ ಆರಾಧನ ವಿಧಾನದಲ್ಲಿ ಪಾಲ್ಗೊಂಡಿದ್ದರು. ಪುರೋಹಿತರ ಮಂತ್ರಘೋಷದೊಂದಿಗೆ ಮಂಡಲದಲ್ಲಿ ನವ ಕಳಸ ಪ್ರತಿಷ್ಠಾಪಿಸಿದ ನಂತರ ಆರಾಧನೆ ಆರಂಭವಾಯಿತು.

ಜಗತ್ತಿನಲ್ಲಿ ಸಮೃದ್ಧಿ ನೆಲೆಸಲಿ, ಪ್ರತಿಯೊಬ್ಬರಿಗೂ ಸುಖ ಶಾಂತಿ ದೊರಕಲಿ ಎಂದು ವಿವಿಧ ಪೂಜಾ ವಿಧಾನ ನೆರವೇರಿಸಲಾಯಿತು. ಮಂತ್ರ ಪಠಣದೊಂದಿಗೆ ಸುಶ್ರಾವ್ಯವಾಗಿ ಜಿನ ಭಕ್ತಿ ಗೀತೆಗಳು ಕೇಳಿ ಬಂದವು.

‘ಶಾಂತಿನಾಥ ಎಂದಾಕ್ಷಣ ನೆನಪಾಗುವುದು ಶಾಂತಿಯ ಸಂದೇಶ. ಜೀವನದಲ್ಲಿ ಉಂಟಾದ ಆಶಾಂತಿಯಿಂದ ಮುಕ್ತಿ ಪಡೆದು, ಶಾಂತಿ ಸ್ಥಾಪಿಸಲು ಶಾಂತಿನಾಥ ವಿಧಾನ ನಡೆಸಲಾಗುತ್ತಿದೆ. ತೀರ್ಥಂಕರರಾಗುವ ಮೊದಲು ಚಕ್ರವರ್ತಿಯಾಗಿದ್ದ ಶಾಂತಿನಾಥರು ತಮ್ಮ ಸಾಮ್ರಾಜ್ಯದಲ್ಲಿ ಪ್ರಜೆಗಳು ಮಾತ್ರವಲ್ಲದೆ, ಸಕಲ ಜೀವಿಗಳಿಗೂ ನೆಮ್ಮದಿಯ ವಾತಾವರಣ ಕಲ್ಪಿಸಿದ್ದರು. ಸಾಮ್ರಾಜ್ಯದಲ್ಲಿ ದ್ವೇಷ ಅಸೂಯೆ ಇಲ್ಲದಂತೆ ನೋಡಿಕೊಂಡಿದ್ದರು. ಯುದ್ಧಕ್ಕೆ ಅವಕಾಶ ಇಲ್ಲದಂತೆ ಆಡಳಿತ ನಡೆಸಿದ್ದರು’ ಎಂದು ಅರ್ಚಕ ಎಂ.ಬಿ.ನಾಗರಾಜು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-36-483672311

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.