ಹಳೇಬೀಡು: ಜಿ.ಸಾಣೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಜಾವಗಲ್ ಅಮ್ಮ(ಕರಿಯಮ್ಮ)ನವರ ಉತ್ಸವ ಸಹಸ್ರಾರು ಭಕ್ತರು ಸಮ್ಮುಖದಲ್ಲಿ ವೈಭವದಿಂದ ನೆರವೇರಿತು.

ದೇವಿಯನ್ನು ಹೂವಿನಿಂದ ಅಲಂಕರಿಸಿ ಪೂಜಾ ವಿಧಾನ ನಡೆಸಲಾಯಿತು. ಗ್ರಾಮಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸಿ, ವಿವಿಧ ಬಗೆಯ ಹೂವಿನಿಂದ ಅರ್ಚನೆ ನೆರವೇರಿಸಲಾಯಿತು. ಮಹಾಮಂಗಳಾರತಿ ನೆರವೇರಿದ ನಂತರ ಭಕ್ತರು ಜಯಘೋಷದೊಂದಿಗೆ ಕರಿಯಮ್ಮ ದೇವಿಯನ್ನು ಅಡ್ಡೆಯಲ್ಲಿ ಆರೋಹಣ ಮಾಡಲಾಯಿತು.

ಮಹಿಳೆಯರು ದೇವಿಗೆ ಗುಗ್ಗಳಾರತಿ ನೆರವೇರಿಸಿದರು. ನಂತರ ಮಡಿವಾಳ ಸಮಾಜದವರು ಪಂಜಿನ ಪೂಜೆ ನೆರವೇರಿಸಿದರು. ವಿವಿಧ ವಾದ್ಯ ತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು. ವಾದ್ಯದ ತಾಳ, ಲಯಕ್ಕೆ ತಕ್ಕಂತೆ ಯುವಕರು ಕುಣಿದು ಸಂಭ್ರಮಿಸಿದರು. ಹಿರಿಯರು ಭಕ್ತಿಭಾವದ ಹೆಜ್ಜೆ ಹಾಕಿದರು.

ಜಾವಗಲ್ ಗ್ರಾಮ ದೇವತೆ ಕರಿಯಮ್ಮ ದೇವಿಗೆ ಜಿ.ಸಾಣೇಸಾಣೇನಹಳ್ಳಿ ಗ್ರಾಮಸ್ಥರು ಅನಾದಿ ಕಾಲದಿಂದಲೂ ನಡೆದುಕೊಳ್ಳುತ್ತಿದ್ದಾರೆ. ಎರಡು ವರ್ಷಕ್ಕೊಮ್ಮೆ ಜಿ.ಸಾಣೇನಹಳ್ಳಿಯಲ್ಲಿ ಜಾವಗಲ್ ಕರಿಯಮ್ಮ ನವರ ಉತ್ಸವ ನಡೆಸಲಾಗುತ್ತದೆ. ಜಾವಗಲ್ನಲ್ಲಿ ಕರಿಯಮ್ಮ ಜಾತ್ರೆ ನಡೆದ ನಂತರ ಜಿ.ಸಾಣೇನಹಳ್ಳಿಯಲ್ಲಿ ಉತ್ಸವ ನಡೆಸಲಾಗುತ್ತದೆ. ಪ್ರಸಕ್ತ ವರ್ಷ ಒಂದು ತಿಂಗಳು ತಡವಾಗಿ ಉತ್ಸವ ನಡೆಸಲಾಯಿತು ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಲಚಂದ್ರ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-36-759470072

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.