ಹಳೇಬೀಡು: ರಾಜವೈಭೋಗ ತೊರೆದು ದೀರ್ಘ ಕಾಲ ತಪಸ್ಸು ಮಾಡಿದ ಮಹಾಸಾಧಕ ಭಗವಾನ್ ಮಹಾವೀರರ 2625ನೇ ಜಯಂತಿ ಅಡಗೂರು ಜಿನಮಂದಿರದಲ್ಲಿ ಮಾರ್ಚ್ 30ರಂದು ನಡೆಯಲಿದೆ. ಜಿನ ಮಂದಿರದಲ್ಲಿ ಸಿದ್ಧತೆ ನಡೆಯುತ್ತಿದ್ದು, ಸಂಭ್ರಮ ಮನೆ ಮಾಡಿದೆ.

ದಿಗಂಬರ ಜೈನ ಮುನಿ ತೀರ್ಥೋದ್ಧಾರಕ ಯುವಸಂತ ವೀರಸಾಗರ ಮುನಿ ಮಹಾರಾಜರ ಸಾನ್ನಿಧ್ಯದಲ್ಲಿ ಪೂಜಾ ವಿಧಾನ ನಡೆಯುತ್ತದೆ. ಜಯಂತಿ ಆಚರಿಸುವುದರಿಂದ ಜಗತ್ತಿಗೆ ಸಂದೇಶ ಸಾರಿದ ಭಗವಾನ್ ಮಹಾವೀರರ ಸಂದೇಶಗಳು ಎಲ್ಲೆಡೆ ಪಸರಿಸಲಿವೆ. ಜನರಲ್ಲಿ ಧರ್ಮ ಜಾಗೃತಿ ಮೂಡಲಿದೆ ಎಂದು ಅಡಗೂರು ಜೈನ ಸಮಾಜ ತಿಳಿಸಿದೆ.

ಹೊಯ್ಸಳ ಅರಸರು ಶೈವ, ವೈಷ್ಣವ ಮತಗಳೊಂದಿಗೆ ಜೈನ ಧರ್ಮಕ್ಕೆ ಪ್ರಾಮುಖ್ಯತೆ ನೀಡಿದ್ದರು. ರಾಜಧಾನಿ ದೋರಸಮುದ್ರ (ದ್ವಾರಸಮುದ್ರ) ಇಂದಿನ ಹಳೇಬೀಡು ಸೇರಿದಂತೆ ವಿವಿಧ ಊರುಗಳಲ್ಲಿ ಜಿನ ಮಂದಿರಗಳನ್ನು ನಿರ್ಮಿಸಿದ್ದರು. 6ನೇ ಶತಮಾನದಲ್ಲಿ ಜೈನ ಧರ್ಮ ಪುನರುಜ್ಜೀವನಗೊಳಿಸಿದ 24ನೇ ತೀರ್ಥಂಕರ ಭಗವಾನ್ ಮಹಾವೀರರ ಜಿನ ಮಂದಿರವನ್ನು ಹೊಯ್ಸಳರು ಅಡಗೂರು ಗ್ರಾಮದಲ್ಲಿ ನಿರ್ಮಿಸಿದ್ದಾರೆ.

ಪಂಚವ್ರತಗಳ ಮೂಲಕ ಅಹಿಂಸೆಯ ಸಂದೇಶ ಸಾರುವುದರೊಂದಿಗೆ, ಸಕಲ ಜೀವಿಗಳಿಗೂ ಲೇಸನ್ನು ಭಯಸಿದ ಭಗವಾನ್ ಮಹಾವೀರರನ್ನು ವಿವಿಧ ಆಚರಣೆಗಳ ಮೂಲಕ ಜೈನ ಶ್ರಾವಕ, ಶ್ರಾವಕಿಯರು ಸ್ಮರಿಸುತ್ತಾರೆ.

ಅಡಗೂರು ದೊಡ್ಡ ಕೆರೆ ತೀರಕ್ಕೆ ಸನಿಹದಲ್ಲಿ ಆಕರ್ಷಕವಾಗಿರುವ ಅಡಗೂರು ಜಿನ ಮಂದಿರದ ಗರ್ಭಗುಡಿಯಲ್ಲಿರುವ ಅಮೃತಶಿಲೆಯ ಶ್ವೇತ ವರ್ಣದ ಮೂರ್ತಿ ದರ್ಶನ ಮಾಡಿದಾಗ ಮನಸ್ಸು ಪ್ರಫುಲ್ಲವಾಗುತ್ತದೆ.

ಹೊಯ್ಸಳರ ಕಾಲದಲ್ಲಿ ನಿರ್ಮಿಸಿರುವ ವಿಶಿಷ್ಟ ವಿನ್ಯಾಸದ ಮಂದಿರ ಯಾವ ರಾಜರ ಕಾಲದಲ್ಲಿ ನಿರ್ಮಾಣವಾಗಿದೆ ಎಂಬ ಖಚಿತ ಮಾಹಿತಿ ಲಭ್ಯವಾಗಿಲ್ಲ. ವಾಸ್ತು ಕಲೆಯ ಆಧಾರದ ಮೇಲೆ ಹೊಯ್ಸಳರ ಕಾಲದ ಮಂದಿರ ಎಂದು ಗುರುತಿಸಲಾಗಿದೆ. ವರ್ಧಮಾನ ಸ್ವಾಮಿ ಎಂದು ಕರೆಯುತ್ತಿದ್ದ ಖಡ್ಗಾಸನದ ಮಹಾವೀರರ ಬಳಪದ ಕಲ್ಲಿನ ಮೂಲ ಮೂರ್ತಿ ಭಿನ್ನವಾಗಿತ್ತು. ಹಾಗಾಗಿ ರಾಜಮತಿ ಮಾತಾಜಿ ಅವರು ದೆಹಲಿಯಿಂದ ತಂದಿದ್ದ, ಅಮೃತ ಶಿಲೆಯ ಮೂರ್ತಿಯನ್ನು ಶಾಸ್ತ್ರೋಕ್ತವಾಗಿ ನೀಡಿದರು. ಜೀರ್ಣೋದ್ಧಾರ ಮಾಡಿದ ಜಿನ ಮಂದಿರದ ಗರ್ಭಗುಡಿಯಲ್ಲಿ ಜೈನರು ವಿಧಿ ವಿಧಾನಗಳೊಂದಿಗೆ ಪ್ರತಿಷ್ಠಾಪಿಸಿದ್ದಾರೆ.

ಜೀರ್ಣಾವಸ್ಥೆಗೆ ತಲುಪಿದ್ದ ಮಂದಿರವನ್ನು 1993ರಲ್ಲಿ ಪೂರ್ಣ ಪ್ರಮಾಣದಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ. ಶಂಭವನಂದಿ ಮುನಿ ಮಹಾರಾಜರ ಸಾನಿಧ್ಯದಲ್ಲಿ ಸಂಪ್ರೋಕ್ಷಣ ಕಾರ್ಯ ನೆರವೇರಿಸಲಾಗಿದೆ. ಅಂದಿನಿಂದ ಮಂದಿರದಲ್ಲಿ ಮಹಾವೀರ ಜಯಂತಿ, ವಾರ್ಷಿಕ ಪೂಜೆ, ದಶಲಕ್ಷಣ ಮಹಾಪರ್ವ ಹಾಗೂ ವಿವಿಧ ಧಾರ್ಮಿಕ ಕಾರ್ಯ ನಡೆಸಲಾಗುತ್ತಿದೆ ಎಂದು ಮಹಾವೀರ ಜೈನ ಸಂಘದ ಅಧ್ಯಕ್ಷ ನಾಗೇಂದ್ರ ಕುಮಾರ್ ಹೇಳಿದರು.

ಹಳೆಯ ವಿನ್ಯಾಸದಲ್ಲೇ ಜೀರ್ಣೋದ್ಧಾರ

ಗರ್ಭಗುಡಿಯ ಮಹಾವೀರ ಮೂರ್ತಿ ಮಾತ್ರವಲ್ಲದೇ ಪ್ರಾಚೀನ ಕಾಲದ ವಿವಿಧ ಜಿನ ಮೂರ್ತಿಗಳನ್ನು ಬಸದಿಯಲ್ಲಿ ಸಂರಕ್ಷಣೆ ಮಾಡಲಾಗಿದೆ.

ಒಂದೇ ಶಿಲೆಯಲ್ಲಿ 24 ತೀರ್ಥಂಕರರ ಬಿಂಬಗಳಿರುವ ಚತುರ್ವಿಂಶತಿ ತೀರ್ಥಂಕರರ ವಿಗ್ರಹ ಭಕ್ತರನ್ನು ಧ್ಯಾನಲೋಕಕ್ಕೆ ಕೊಂಡೊಯ್ಯುತ್ತದೆ. 3 ಅಡಿ ಎತ್ತರದ ಸಹಸ್ತಕೂಟ ಜಿನಬಿಂಬದಲ್ಲಿ 504 ಜಿನ ಮೂರ್ತಿಗಳಿವೆ. ಅಷ್ಟಮ ನಂದಿಶ್ವರ ಬಿಂಬ, ಆದಿನಾಥ, ನೇಮಿನಾಥ, ಅನಂತನಾಥ, ಮಹಾವೀರರ ತೀರ್ಥಂಕರ ಮೂರ್ತಿಗಳು ಮಂದಿರದಲ್ಲಿವೆ. ಕಲ್ಲಿನ ಮೂರ್ತಿಗಳಲ್ಲದೇ ಪಂಚಲೋಹದ ಮೂರ್ತಿಗಳು ಮಂದಿರದಲ್ಲಿವೆ.

ರಾಜರ ಕಾಲದ ಮಂದಿರವನ್ನು ಪ್ರಾಚೀನ ಕಾಲದ ಚಾವಣಿ ಹಾಗೂ ಕಂಬಗಳನ್ನು ಉಳಿಸಿಕೊಂಡು ಹಳೆಯ ವಿನ್ಯಾಸದಲ್ಲಿಯೇ ಜೀರ್ಣೋದ್ದಾರ ಮಾಡಲಾಗಿದೆ. ರಾಜವೈಭೋಗ ತೊರೆದು ದೀರ್ಘ ತಪಸ್ಸು ಮಾಡಿದ ಮಹಾವೀರ ತೀರ್ಥಂಕರರ ಮಂದಿರ ಶಾಂತಿ, ನೆಮ್ಮದಿ ನೀಡುವ ತಾಣವಾಗಿದೆ ಎನ್ನುತ್ತಾರೆ ಮಹಾವೀರ ಜೈನಸಂಘ ಕಾರ್ಯದರ್ಶಿ ಶಶಿಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.