ಹಳೇಬೀಡು:ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಮಹಿಳಾ ಸ್ವಸಹಾಯ ಸಂಘದ ಮಹಿಳೆಯರಿಗೆ ಹಗರೆ ಗ್ರಾಮದ ಕೊಮಾರನಹಳ್ಳಿ ರವಿ ಅವರ ಮನೆಯಯಲ್ಲಿ ಬುಧವಾರ ಅಣಬೆ ಕೃಷಿ ಪ್ರಾತ್ಯಕ್ಷಿಕೆ ನಡೆಸಲಾಯಿತು. ಮನೆಯಲ್ಲಿಯೇ ಅಣಬೆ ಕೃಷಿ ನಡೆಸಿ ದುಡಿಮೆ ಮಾಡುವ ಕುರಿತು ತಜ್ಞರು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸದಸ್ಯರು ಹಣದ ವ್ಯವಹಾರಕ್ಕೆ ಮಾತ್ರ ಸಿಮೀತರಾಗದೆ, ಉಪ ಕಸುಬು ಹಾಗೂ ಗುಡಿ ಕೈಗಾರಿಕೆಗಳನ್ನು ಕರಗತ ಮಾಡಿಕೊಂಡು ಸ್ವಾವಲಂಬಿಗಳಾಗಿ ಬದುಕಬೇಕು. ಸರ್ಕಾರ ಸಮಾಧಾನ ಕೊಡುವ ಮುಖಾಂತರ ಅಣಬೆ ಕೃಷಿಗೆ ಉತ್ತೇಜನ ನೀಡಿದೆ’ ಎಂದು ಹೇಳಿದರು.

‘ಭಂಡಾರಿಕಟ್ಟೆಯಲ್ಲಿ ಸಾಕಷ್ಟು ರೈತರು ಅಣಬೆ ಕೃಷಿ ನಡೆಸುತ್ತಿದ್ದಾರೆ. ಕೊಮಾರನಳ್ಳಿ ರವಿ ಅವರು ಸಹ ಮನೆಯಲ್ಲಿಯೆ ಅಣಬೆ ಕೃಷಿ ನಡೆಸಿ ಯಶಸ್ವಿಯಾಗಿರುವುದು ಸಂತಸದ ವಿಚಾರ’ ಎಂದು ಸ್ವಾಮೀಜಿ ಹೇಳಿದರು.

ಹಿರಿಯ ತೋಟಗಾರಿಕೆ ವಿಜ್ಞಾನಿ ಡಾ.ಧನಂಜಯ ಮಾತನಾಡಿ, ‘ಅಣಬೆ ಕೃಷಿ ಸುಸ್ಥಿರ ಕೃಷಿಯಾಗಿದೆ. ಸರಳ ಹಾಗೂ ಸುಲಭವಾಗಿ ನಿರ್ವಹಿಸುವ ಕೃಷಿಯಾಗಿದೆ. ಸರ್ಕಾರ ರೈತರಿ ಅಣಬೆ ಕೃಷಿಯ ತರಬೇತಿ ನೀಡುತ್ತಿದೆ. ಅಣಬೆ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಉತ್ಪನ್ನವಾಗಿದೆ. ಮಾಲ್ಗಳಲ್ಲಿ ಹೆಚ್ಚಿನ ಪ್ರಮಾಣ ಅಣಬೆ ಮಾರಾಟವಾಗುತ್ತಿದೆ. ಅನ್ ಲೈನ್ ಮಾರುಕಟ್ಟೆಯಲ್ಲಿಯೂ ಅಣಬೆ ವಹಿವಾಟು ಜೋರಾಗಿದೆ’ ಎಂದರು. ಅಣಬೆ ಕೃಷಿ ತಜ್ಞ ಪ್ರಸಾದ್ ಬಾಬು ಅಣಬೆ ಕೃಷಿಯ ಮಾಹಿತಿ ನೀಡಿದರು. ಅಣಬೆ ಕೃಷಿಕ ರವಿ ಅನುಭವ ಹಂಚಿಕೊಂಡರು.

ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ಪುಷ್ಪಗಿರಿ ಗ್ರಾಮೀಣಾಭಿವೃದ್ದಿ ಸಂಸ್ಥೆ ಕಾರ್ಯನಿರ್ವಾಹಕ ಅಧಿಕಾರಿ ನಾಗಯ್ಯ, ಹಾಸನ ಜಿಲ್ಲಾ ಯೋಜನಾಧಿಕಾರಿ ವಿನುತ ಧನಂಜಯ, ಸ್ವಸಹಾಯ ಸಂಘದ ಪ್ರತಿನಿಧಿ ಗೀತಾ ಶಿವರಾಜ್, ನಿವೃತ್ತ ಶಿಕ್ಷಕ ಹೆಬ್ಬಾಳು ರಮೇಶಪ್ಪ ರೈತರಾದ ಮಂಜಪ್ಪ, ಚನ್ನಾಪುರ ಶಂಕರಪ್ಪ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-36-2112409419

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.