ಹಳೇಬೀಡು: ಹಳ್ಳಿಗಳ ಮನೆಗಳಿಗೆ ತೆರಳಿ ಅಂಚೆ ವಿತರಿಸುವ ಸಿಬ್ಬಂದಿಗಳ ಆರೋಗ್ಯ ಸುರಕ್ಷತೆಗಾಗಿ ಭಾರತೀಯ ರೆಡ್ಕ್ರಾಸ್ ಬೇಲೂರು ಘಟಕದಿಂದ ಹಳೇಬೀಡು ಅಂಚೆ ಕಚೇರಿಯ ಸಿಬ್ಬಂದಿಗೆ ಶನಿವಾರ ಮಾಸ್ಕ್ ವಿತರಿಸಲಾಯಿತು.

ಹಳೇಬೀಡು ಸಬ್ ಪೋಸ್ಟ್ ಆಫೀಸ್ನಲ್ಲಿ ಅಂಚೆ ವಿತರಣೆ, ವಿಂಗಡಣೆ ಸೇರಿದಂತೆ 25 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿವಿಧೆಡೆ ಸಂಚರಿಸುವ ಸಿಬ್ಬಂದಿಗೆ ಮಾಸ್ಕ್ ವಿತರಿಸಿದ ಭಾರತೀಯ ರೆಡ್ ಕ್ರಾಸ್ ಬೇಲೂರು ಘಟಕದ ಪದಾಧಿಕಾರಿಗಳಿಗೆ ಸಿಬ್ಬಂದಿ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಸಬ್ ಪೋಸ್ಟ್ ಮಾಸ್ಟರ್ ಕಾಂಚನಾ ತಿಳಿಸಿದರು.

ಭಾರತೀಯ ಸೇವಾ ದಳ ತಾಲ್ಲೂಕು ಅಧ್ಯಕ್ಷ ದ್ಯಾವಪ್ಪನಹಳ್ಳಿ ಸೋಮಣ್ಣ ಮಾತನಾಡಿದರು. ಭಾರತೀಯ ರೆಡ್ಕ್ರಾಸ್ ತಾಲ್ಲೂಕು ಕಾರ್ಯದರ್ಶಿ ಸಿ.ಎಚ್.ಧನಂಜಯ ಮಾತನಾಡಿ, ಭಾರತೀಯ ರೆಡ್ಕ್ರಾಸ್ ತಾಲ್ಲೂಕು ಘಟಕ ಸಭಾಪತಿ ಸಿದ್ಧೇಗೌಡ ಹಾಗೂ ಪದಾಧಿಕಾರಿಗಳ ಸಲಹೆಯಂತೆ ಅಂಚೆ ಸಿಬ್ಬಂದಿಗೆ ಮಾಸ್ಕ್ ವಿತರಣೆ ಮಾಡಲಾಗಿದೆ ಎಂದರು. ಅಂಚೆ ಸಿಬ್ಬಂದಿ ಪ್ರೇಮ, ರತ್ನಮ್ಮ. ಶಿವಣ್ಣ . ಘಟ್ಟದಹಳ್ಳಿ ಸೋಮಣ್ಣ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-36-478663385

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.