ಹಳೇಬೀಡು: ಕೃಷಿ ಪಂಪ್ಸೆಟ್ಗಳಿಗೆ ಕರಿಕಟ್ಟೆಹಳ್ಳಿ ಫೀಡರ್ನಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗಿರುವುದರಿಂದ ಬೆಳೆಗಳು ಒಣಗುತ್ತಿವೆ. ಬಿಸಿಲಿನ ಬೇಗೆಯಲ್ಲಿ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಇತ್ತೀಚೆಗೆ ಮಾಯಗೊಂಡನಹಳ್ಳಿ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸಿದರು.

ಕರೀಕಟ್ಟೆಹಳ್ಳಿ, ಮಾಯಗೊಂಡನಹಳ್ಳಿ, ನಾಗರಾಜಪುರ, ಚಿಟಚಟ್ಟಿಹಳ್ಳಿ ಹಾಗೂ ಕೆಂಪಗೌಡನಹಳ್ಳಿ ಭಾಗದಲ್ಲಿ ವಿದ್ಯುತ್ ಪೂರೈಕೆ ಇಲ್ಲದೆ, ಬೆಳೆಗಳಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಅಧಿಕ ಉಷ್ಣಾಂಶದಿಂದ ಬೆಳೆಗಳಿಗೆ ಹಾನಿಯಾಗುತ್ತಿದೆ. ಜಾನುವಾರುಗಳಿಗೆ ನೀರು ಕುಡಿಸುವುದಕ್ಕೂ ಸಧ್ಯವಾಗುತ್ತಿಲ್ಲ. ನಿರ್ದಿಷ್ಟವಾಗಿ ದಿನಕ್ಕೆ ಒಂದು ಗಂಟೆಯೂ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಹೀಗಾದರೆ ಬೆಳೆ ಉಳಿಸಿಕೊಂಡು ಬದುಕುವುದಾದರೂ ಹೇಗೆ ಎಂದು ರೈತರು ಪ್ರಶ್ನಿಸಿದರು. ಪ್ರತಿಭಟನಕಾರರು ಶಾಸಕ ಎಚ್.ಕೆ.ಸುರೇಶ್ ಅವರಿಗೆ ದೂರವಾಣಿ ಕರೆ ಮಾಡಿ ವಿದ್ಯುತ್ ಸಮಸ್ಯೆಯನ್ನು ವಿವರಿಸಿದರು.

‘ಬೆಂಗಳೂರಿನಲ್ಲಿದ್ದೇನೆ, ಕ್ಷೇತ್ರಕ್ಕೆ ಬಂದ ತಕ್ಷಣ ಸೆಸ್ಕ್ ಎಂಜಿನಿಯರ್ಗಳೊಂದಿಗೆ ಮಾತನಾಡಿ, ಸಮಸ್ಯೆ ಬಗೆಹರಿಸುತ್ತೇನೆ’ ಎಂದು ಶಾಸಕರು ತಿಳಿಸಿದರು.

ಹಳೇಬೀಡಿನ ಸೆಸ್ಕ್ ಶಾಖಾಧಿಕಾರಿ ನಾಗರಾಜು ಸ್ಥಳಕ್ಕೆ ಆಗಮಿಸಿ ಪ್ರತಿಭಟನಕಾರರೊಂದಿಗೆ ಮಾತುಕತೆ ನಡೆಸಿದರು.

ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸ್ಥಳಕ್ಕೆ ಆಗಮಿಸಿ, ವಿದ್ಯುತ್ ಸಮಸ್ಯೆ ಬಗೆಹರಿಸುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ನಂತರ ಬೇಲೂರು ಉಪ ವಿಭಾಗ ಎಇಇ ಬಸವರಾಜು ಅವರು ದೂರವಾಣಿ ಮೂಲಕ, ‘ಕರಿಕಟ್ಟೆಹಳ್ಳಿ ಹಾಗೂ ಮತಿಘಟ್ಟ ಫೀಡರ್ಗಳಿಗೆ ದಿನಕ್ಕೆ 7 ಗಂಟೆ ವಿದ್ಯುತ್ ಪೂರೈಕೆ ಮಾಡುತ್ತೇವೆ. ವಾರಕ್ಕೆ ಒಂದು ಸಾರಿ ರಾತ್ರಿ ಹಾಗೂ ಹಗಲು ಪಾಳಿಯ ವಿದ್ಯುತ್ ಪೂರೈಕೆಯನ್ನು ಬದಲಾಯಿಸಲಾಗುವುದು. ಅಡಗೂರು ಭಾಗಕ್ಕೆ ಮಂಜೂರಾಗಿರುವ ವಿದ್ಯುತ್ ವಿತರಣಾ ಕೇಂದ್ರಕ್ಕೆ ಸೂಕ್ತ ಜಾಗ ದೊರಕುತ್ತಿಲ್ಲ. ಅಡಗೂರು ವಿದ್ಯುತ್ ವಿತರಣಾ ಕೇಂದ್ರ ಆರಂಭವಾದರೆ ವಿದ್ಯುತ್ ಸಮಸ್ಯೆ ಸುಧಾರಿಸುತ್ತದೆ’ ಎಂದರು.

ಸಮಸ್ಯೆ ಬಗೆಹರಿಯದಿದ್ದರೆ ಪ್ರತಿಭಟನೆ ತೀವ್ರ ಸ್ವರೂಪ ತಾಳುತ್ತದೆ ಎಂದು ಎಚ್ಚರಿಸಿದ ರೈತರು ಪ್ರತಿಭಟನೆ ಕೈಬಿಟ್ಟರು.

ಮುಖಂಡರಾದ ಶಶಿಧರ ಕೆ.ಎಸ್, ನಾಗರಾಜಪುರದ ರಘು, ರಂಗಸ್ವಾಮಿ, ಚಂದ್ರೇಗೌಡ, ಸೋಮಶೇಖರ್, ಚಂದ್ರೇಗೌಡ, ವಿರೂಪಾಕ್ಷ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-36-1310951383

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.