ಶಾಸಕರು, ತಹಶೀಲ್ದಾರ್ ಮಳೆ ಹಾನಿ ಪ್ರದೇಶಗಳ ಪರಿಶೀಲನೆ ನಡೆಸಿ, ಪರಿಹಾರ ಕಾರ್ಯ ಕೈಗೊಳ್ಳಬೇಕು. ಶೀಘ್ರದಲ್ಲಿಯೇ ಸರ್ಕಾರಕ್ಕೆ ವರದಿ ಸಲ್ಲಿಸಬೇಕು.
ಎಲ್.ಎಸ್. ಜಯಪ್ರಕಾಶ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ
ಮಳೆಗಿಂತ ಗಾಳಿ ಹೆಚ್ಚು
ಮಳೆ ಆರಂಭವಾದ ತಕ್ಷಣ ಬಿರುಗಾಳಿ ಆರಂಭವಾಯಿತು. ಸೂರು ನೀರು ಬರುವ ಮೊದಲೇ ಗಾಳಿ ಬೀಸಿದ್ದರಿಂದ ಮಳೆ ಜೋರಾಗಿ ಬೀಳಲಿಲ್ಲ. ವಿದ್ಯುತ್ ನಿಲುಗಡೆಯಾಗಿತ್ತು. ಕತ್ತಲೆ ಕವಿದ ವಾತಾವರಣದಲ್ಲಿ ಸಿಡಿಲು, ಗುಡಗಿನೊಂದಿಗೆ ಗಾಳಿ ಬೀಸಿದ್ದರಿಂದ ಮಧ್ಯರಾತ್ರಿ ಸನ್ನಿವೇಶ ಭಯಾನಕವಾಗಿತ್ತು ಎಂದು ಮತಿಘಟ್ಟ ಗ್ರಾಮಸ್ಥರು ಪರಿಸ್ಥಿತಿಯನ್ನು ಹೇಳಿಕೊಂಡರು.