ಹಳೇಬೀಡು: ಇಲ್ಲಿನ ಹೊಯ್ಸಳೇಶ್ವರ ದೇವಾಲಯದ ಪ್ರವೇಶ ದ್ವಾರವನ್ನು ಉತ್ತರ ದಿಕ್ಕಿನ ಹೊಯ್ಸಳ ವೃತ್ತದ ಕಡೆಗೆ ಬದಲಾಯಿಸಲು ಕೇಂದ್ರ ಪುರಾತತ್ವ ಸರ್ವೆಕ್ಷಣಾ ಇಲಾಖೆ ಮುಂದಾಗಿದ್ದು, ಸಾರ್ವಜನಿಕ ವಲಯದಿಂದ ವಿರೋಧ ವ್ಯಕ್ತವಾಗಿದೆ.

ಹೊಯ್ಸಳರ ಕಾಲದಲ್ಲಿ ದಕ್ಷಿಣ ದಿಕ್ಕಿನ ಪ್ರವೇಶ ದ್ವಾರದಲ್ಲಿ ರಾಜರು ಹಾಗೂ ಪರಿವಾರದವರು ಹೊಯ್ಸಳೇಶ್ವರ ದೇವಾಲಯಕ್ಕೆ ಬಂದು ಹೋಗುತ್ತಿದ್ದರು. ಪುರಾತನ ಕಾಲದ ರಾಜಮಾರ್ಗದಲ್ಲಿಯೇ ಪ್ರವಾಸಿಗರು ದೇವಾಲಯದ ಒಳ ಪ್ರವೇಶಿಸಬೇಕು ಎಂದು 4 ವರ್ಷದ ಹಿಂದೆ ಉತ್ತರದಿಂದ ದಕ್ಷಿಣ ದಿಕ್ಕಿಗೆ ಪ್ರವೇಶವನ್ನು ಬದಲಿಸಲಾಗಿತ್ತು.

ವ್ಯವಸ್ಥೆಗಳಿಗೆ ಸ್ಥಳೀಯರು ಹಾಗೂ ಪ್ರವಾಸಿಗರು ಹೊಂದಿಕೊಂಡಿದ್ದರು. ದಿಢೀರನೆ ಪ್ರವೇಶ ದ್ವಾರ ಬದಲಿಸಲು ಕೇಂದ್ರ ಪುರಾತತ್ವ ಸರ್ವೆಕ್ಷಣಾ ಇಲಾಖೆ ಮುಂದಾಗಿರುವುದಕ್ಕೆ ಜನರಿಂದ ಅಸಮಾಧಾನದ ಮಾತುಗಳು ಕೇಳಿ ಬರುತ್ತಿವೆ.

ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿರುವ ಹೊಯ್ಸಳೇಶ್ವರ ದೇವಾಲಯವನ್ನು ಯುನೆಸ್ಕೊ ತಂಡ ಪರಿಶೀಲಿಸುವ ಸಂದರ್ಭದಲ್ಲಿ ದಕ್ಷಿಣ ದಿಕ್ಕಿನ ಪ್ರವೇಶ ತೆರೆಯಲಾಯಿತು.

ಉತ್ತರ ದ್ವಾರದ ಬಳಿಯ ಹೊಯ್ಸಳ ವೃತ್ತದಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ದೇವಾಲಯದ ಒಳ ಹೋಗಿ ಬರುವ ಪ್ರವಾಸಿಗರಿಗೆ ಸುರಕ್ಷತೆ ಇರುವುದಿಲ್ಲ. ಈಗಿನ ಪ್ರವೇಶ ದ್ವಾರ ಇರುವ ಸ್ಥಳ ವಿಶಾಲವಾಗಿದೆ. ವಾಹನ ನಿಲುಗಡೆಗೂ ಸಾಕಷ್ಟು ಸ್ಥಳಾವಕಾಶ ಇದೆ ಎಂದು ಪುಷ್ಪಗಿರಿ ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸುರೇಶ್ ಎಂ.ಎಸ್. ಹೇಳಿದರು.

ಬೇಲೂರು, ಜಾವಗಲ್, ಅರಸೀಕೆರೆ, ಗಂಗೂರು, ಹಗರೆ, ಅಡಗೂರು, ಹಾಸನ ಕಡೆಯಿಂದ ಬರುವ ವಾಹನಗಳು ಹೊಯ್ಸಳ ವೃತ್ತದ ಮೂಲಕ ಚಲಿಸುತ್ತವೆ. ಸಾರಿಗೆ ಸಂಸ್ಥೆಯ ನಿಲ್ದಾಣದ ಒಳ ಹೋಗುವ ಹಾಗೂ ಹೊರ ಬರುವ ಬಸ್ಗಳು ಹೊಯ್ಸಳ ವೃತ್ತದಲ್ಲಿಯೇ ಸಾಗಬೇಕು. ವಾಹನ ದಟ್ಟಣೆ ನಡುವೆ ಓಡಾಡುವ ಪ್ರವಾಸಿಗರಿಗೆ ಸುರಕ್ಷತೆ ಇರುವುದಿಲ್ಲ.

ಉತ್ತರ ದಿಕ್ಕಿನ ಪ್ರವೇಶ ದ್ವಾರದ ಗೇಟ್, ಹೊಯ್ಸಳ ವೃತ್ತಕ್ಕೆ ಕೇವಲ 10 ಹೆಜ್ಜೆ ದೂರದಲ್ಲಿದೆ. ಗೇಟ್ವರೆಗೂ ವಾಹನ ಸಂಚರಿಸುತ್ತವೆ. ಸರ್ಕಾರಿ ಆಸ್ಪತ್ರೆಗೆ ಹೋಗುವ ಜನರು ಹಾಗೂ ತುರ್ತು ವಾಹನಗಳು ಹೊಯ್ಸಳ ವೃತ್ತದ ಮೂಲಕ ಹೋಗಬೇಕಾಗಿದೆ. ಪೊಲೀಸ್ ಠಾಣೆಗೂ ಹೊಯ್ಸಳ ವೃತ್ತ ಸಂಪರ್ಕ ಕಲ್ಪಿಸುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ಉತ್ತರ ದಿಕ್ಕಿಗೆ ಪ್ರವೇಶ ಬದಲಿಸಲು ಪುರಾತತ್ವ ಇಲಾಖೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಲ್ಲ. ದಕ್ಷಿಣ ದಿಕ್ಕಿನ ದೇವಾಲಯ ಪ್ರವೇಶ ಬದಲಿಸುವುದಿಲ್ಲ ಎಂದು ಪುರಾತತ್ವ ಇಲಾಖೆಯವರು ಹೇಳಿದ್ದರಿಂದ ವರ್ತಕರು ತಮ್ಮ ಹೊಟ್ಟೆಪಾಡಿನ ವ್ಯವಹಾರವನ್ನು ದಕ್ಷಿಣ ದಿಕ್ಕಿಗೆ ಸ್ಥಳಾಂತರಿಸಿದರು. ಈಗ ಪುನಃ ಬದಲಾವಣೆಗೆ ಮುಂದಾಗಿರುವುದು ಬೇಸರದ ವಿಚಾರ ಎನ್ನುತ್ತಾರೆ ದಲಿತ ಮುಖಂಡ ಭೈರೇಶ್.

‘ದಕ್ಷಿಣ ದಿಕ್ಕಿನ ಪ್ರವೇಶ ದ್ವಾರದಲ್ಲಿ ಸುರಕ್ಷತೆ ಇಲ್ಲ ಎಂಬ ದೂರುಗಳು ಪ್ರವಾಸಿಗರಿಂದ ಬಂದಿವೆ. ಹೀಗಾಗಿ ಪುರಾತತ್ವ ಅಧೀಕ್ಷಕರು ಉತ್ತರ ದಿಕ್ಕಿಗೆ ಪ್ರವೇಶ ದ್ವಾರ ಬದಲಿಸಲು ಸೂಚಿಸಿದ್ದಾರೆ. ಪ್ರವೇಶ ದ್ವಾರ ಬದಲಿಸಲು ಪರಿಶೀಲನೆ ನಡೆಸುತ್ತಿದ್ದೇವೆ’ ಎಂದು ಸಹಾಯಕ ಸ್ಮಾರಕ ಸಂರಕ್ಷಣಾಧಿಕಾರಿ ಸುನಿಲ್ ಹೇಳಿದರು.

ವಾಹನ ನಿಲುಗಡೆಗೆ ಜಾಗ ಇಲ್ಲ

4 ವರ್ಷದ ಹಿಂದೆ ಹೊಯ್ಸಳೇಶ್ವರ ದೇವಾಲಯದ ಉತ್ತರ ದ್ವಾರದ ಪಕ್ಕದ ಹಗರೆ ರಸ್ತೆ ಕಿರಿದಾಗಿತ್ತು. ರಸ್ತೆ ಬದಿ ಸ್ವಲ್ಪ ಖಾಲಿ ಜಾಗ ಇತ್ತು. ಈಗ ದೇವಾಲಯದ ಕಾಂಪೌಂಡ್ವರೆಗೂ ರಸ್ತೆ ವಿಸ್ತರಿಸಲಾಗಿದೆ. ಪ್ರವಾಸಿಗರು ರಸ್ತೆಯಲ್ಲಿಯೇ ವಾಹನ ನಿಲ್ಲಿಸಬೇಕು. ಪಾದಚಾರಿ ಓಡಾಟಕ್ಕೆ ಜಾಗ ಇಲ್ಲದಂತಾಗುತ್ತದೆ. ಶಾಲಾ ಪ್ರವಾಸದ ಕಾಲದಲ್ಲಿ ಮಕ್ಕಳನ್ನು ದೇವಾಲಯಕ್ಕೆ ಕರೆದುಕೊಂಡು ಹೋಗಿ ಬರುವುದು ಕಷ್ಟವಾಗುತ್ತದೆ.

‘ಎರಡು ದಶಕದಿಂದಲೂ ಗ್ರಾಮ ಪಂಚಾಯಿತಿಯಿಂದ ಪ್ರವೇಶ ದ್ವಾರ ದಕ್ಷಿಣ ದಿಕ್ಕಿಗೆ ಬದಲಿಸಿ ಎಂದು ಪುರಾತತ್ವ ಇಲಾಖೆಗೆ ಸೂಚಿಸಲಾಗಿತ್ತು. 4 ತಿಂಗಳ ಹಿಂದೆ ನಾನು ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿದ್ದಾಗ ದಕ್ಷಿಣ ದಿಕ್ಕಿನಲ್ಲಿದ್ದ ಹಳೆಯ ಶೌಚಾಲಯ ನವೀಕರಿಸಿದ್ದರಿಂದ ಪ್ರವಾಸಿಗರಿಗೆ ಅನುಕೂಲವಾಗಿದೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಆರ್.ಮಧು ಹೇಳಿದರು.

‘ವ್ಯವಸ್ಥಿತವಾಗಿಲ್ಲದ ಹೊಯ್ಸಳ ವೃತ್ತ’

ಹೊಯ್ಸಳ ವೃತ್ತದಲ್ಲಿ ವಾಹನಗಳು ಕ್ರಮಬದ್ಧವಾಗಿ ಚಲಿಸುವುದಿಲ್ಲ. ಟ್ಯಾಂಕರ್ ಮೊದಲಾದ ದೊಡ್ಡ ವಾಹನಗಳು ವೃತ್ತದಲ್ಲಿ ತಿರುವು ಪಡೆಯುವಾಗ ದೇವಾಲಯದ ಗೇಟ್ವರೆಗೂ ಚಲಿಸುವ ಪರಿಸ್ಥಿತಿ ಇದೆ. ಈ ಪರಿಸ್ಥಿತಿಯಲ್ಲಿ ಪ್ರವಾಸಿಗರು ಓಡಾಡುವುದು ಸುರಕ್ಷಿತವಲ್ಲ ಎನ್ನುತ್ತಾರೆ ಸ್ಥಳೀಯರು.

ಹಿಂದೂ ಸಂಪ್ರದಾಯದ ಪ್ರಕಾರ ದೇವಾಲಯದ ಪ್ರವೇಶ ದಕ್ಷಿಣದಲ್ಲಿ ಇರಬೇಕು. ಉತ್ತರಕ್ಕೆ ಬದಲಿಸಿದರೆ ಹಿಂದೂ ಭಾವನೆಗಳಿಗೆ ಧಕ್ಕೆಯಾಗುತ್ತದೆ
ಸುರೇಶ್ ಎಂ.ಎಸ್, ಪುಷ್ಪಗಿರಿ ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ

ಹೊಯ್ಸಳ ದೇವಾಲಯದ ದಕ್ಷಿಣ ಪ್ರವೇಶ ದ್ವಾರ ಜೈನ ಬಸದಿ, ಕೇದಾರೇಶ್ವರ ದೇವಾಲಯಕ್ಕೆ ಸಮೀಪದಲ್ಲಿದೆ. ಜೊತೆಗೆ ರಾಜಮಾರ್ಗವಾಗಿದ್ದು, ಬದಲಿಸಬಾರಾದು
ಅಡುಗೆ ರಾಜು, ವರ್ತಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.