ಹಳೇಬೀಡು: ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಿಂದ ಅಡಗೂರಿನಿಂದ ಉಮಾದೇವರಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣಕ್ಕೆ ಹಣ ಮಂಜೂರು ಮಾಡಿಸಿದ್ದು, ಕಾಮಗಾರಿ ಆರಂಭಿಸುತ್ತಿದ್ದೇವೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.

ಹಳೇಬೀಡು ಸಮೀಪದ ಉಮಾದೇವರಹಳ್ಳಿಯಲ್ಲಿ ರಸ್ತೆ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಉಮಾದೇವರಹಳ್ಳಿಯ ಜನರು ಅಗತ್ಯ ಕೆಲಸಗಳಿಗೆ ಪ್ರತಿ ದಿನ ಅಡಗೂರು ಗ್ರಾಮಕ್ಕೆ ಹೋಗಿ ಬರಬೇಕಿದ್ದು, ನಗರಗಳಿಗೆ ಶಾಲಾ, ಕಾಲೇಜು ಆಸ್ಪತ್ರೆ ಮೊದಲಾದ ತುರ್ತು ಕೆಲಸಕ್ಕೆ ನಗರಗಳಿಗೆ ಹೋಗಲು ಅಡಗೂರು ಕೇಂದ್ರ ಸ್ಥಳವಾಗಿದೆ. ರಸ್ತೆ ಡಾಂಬರೀಕರಣದಿಂದ ಗ್ರಾಮದ ಜನರಿಗೆ ಅನುಕೂಲವಾಗಲಿದೆ’ ಎಂದರು.

1.87 ಕಿ.ಮೀ ರಸ್ತೆ ಡಾಂಬರೀಕರಣಕ್ಕೆ ₹16 ಲಕ್ಷ ಹಣ ಹಣ ಮಂಜೂರಾಗಿದ್ದು, ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಎಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ವಿಧಾನಸಭಾ ಚುನಾವಣಾ ಪೂರ್ವದಲ್ಲಿಯೇ ಗ್ರಾಮಕ್ಕೆ ಭೇಟಿ ನೀಡಿದ್ದಾಗ ರಸ್ತೆಯ ಸ್ಥಿತಿಗತಿ ಅರಿತುಕೊಂಡಿದ್ದೆವು’ ಎಂದು ಸುರೇಶ್ ಹೇಳಿದರು.

ಎಂಜಿನಿಯರ್ ಹರೀಶ್, ಮುಖಂಡರಾದ ಎ.ಜಿ.ವಿಶ್ವನಾಥಯ್ಯ, ಎಂ.ಎಸ್.ಆನಂದ್, ವಿಜಯ್ ಕುಮಾರ್ ಮುತ್ತಯ್ಯ, ಪರಮೇಶ್, ದರ್ಶನ್, ರವಿಸಿಂಗ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-36-1777381335

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.