ಹಳೇಬೀಡು: ಹೊಯ್ಸಳರ ನಾಡಿನ ವೈಭವ ಹೆಚ್ಚಿಸುವ ಗ್ರಾಮ ದೇವತೆ ಕರಿಯಮ್ಮ ಹಾಗೂ ಉಡಸಲಮ್ಮ ದೇವಿಯ ಜಾತ್ರಾ ಮಹೋತ್ಸವ ಏಪ್ರಿಲ್ 7ರಿಂದ 10ರವರೆಗೆ ನಡೆಯಲಿದೆ. ಜಾತ್ರೆ ಮುಗಿಯುವವರೆಗೆ ಹಳೇಬೀಡಿನಲ್ಲಿ ಭಕ್ತರ ಕಲರವದೊಂದಿಗೆ ವಾದ್ಯ ಹಾಗೂ ಡೊಳ್ಳಿನ ಸದ್ದು ಮೊಳಗಲಿದೆ.

ಏಪ್ರಿಲ್ 7 ರಂದು ಕರಿಯಮ್ಮ ದೇವಿ ಹಾಗೂ ಪರಿವಾರ ದೇವತೆಗಳನ್ನು ವಾದ್ಯ ವೈಭವದೊಂದಿಗೆ ಉಡಸಲಮ್ಮ ದೇವಾಲಯ ಆವರಣಕ್ಕೆ ಕರೆತಂದು ಪೂಜೆ ಸಲ್ಲಿಸಿ, ಗಂಗಾಸ್ನಾನ ನೆರವೇರಿಸುತ್ತಾರೆ. ನಂತರ 7.30ಕ್ಕೆ ಕರಿಯಮ್ಮ ದೇವಿ ಪರಿವಾರ ದೇವತೆಗಳಿಗೆ ನೈವೇದ್ಯ ಸಮರ್ಪಿಸಲಾಗುವುದು. ಕರಿಯಮ್ಮ ದೇವಿಯರ ಬಾನಕ್ಕೆ ವಿವಿಧ ಊರಿನ ಭಕ್ತರು ತಮ್ಮ ಸಂಬಂಧಿಕರ ಮನೆಗಳಿಗೆ ಬರುತ್ತಾರೆ. ದೇವಿಗೆ ಅಭಿಷೇಕ ನೆರವೇರಿಸಿ ಪುಷ್ಪಾಲಂಕಾರ ಸೇವೆ ಸಲ್ಲಿಸಲಾಗುವುದು ಎಂದು ದೇವಾಲಯ ಟ್ರಸ್ಟ್ ಕಾರ್ಯದರ್ಶಿ ಎಚ್.ಎಂ. ಕುಮಾರ್ ಹೇಳಿದರು.

ಏಪ್ರಿಲ್ 8 ರಂದು ಕರಿಯಮ್ಮ ದೇವಿ ಹಾಗೂ ಪರಿವಾರ ದೇವತೆಗಳ ಉತ್ಸವ ಹಳೇಬೀಡಿನ ಪ್ರಮುಖ ಬೀದಿಗಳಲ್ಲಿ ಸಾಗುತ್ತದೆ. ಅಂದು ರಾತ್ರಿ ದೇವಿ ಪರಿವಾರವನ್ನು ಬಸ್ತಿಹಳ್ಳಿಯ ಭಕ್ತರು ಬಸ್ತಿಹಳ್ಳಿಗೆ ಕರೆದುಕೊಂಡು ಹೋಗುತ್ತಾರೆ. ಬಸ್ತಿಹಳ್ಳಿ ಗ್ರಾಮದಲ್ಲಿ ಏಪ್ರಿಲ್ 9 ರಂದು ಪೂಜಾ ವಿಧಾನ ನಡೆಸುತ್ತಾರೆ. ದೇವಿಯ ಮದುವಣಿಗಿತ್ತಿ ಶಾಸ್ತ್ರ ನಡೆಯುತ್ತದೆ. ಮಧ್ಯಾಹ್ನ 1ಗಂಟೆಗೆ ದೇವಿಯ ವಿವಾಹ ಮಹೋತ್ಸವ ನಡೆಸುತ್ತಾರೆ. ಸಂಜೆ ಊರಿನ ಮುಂದೆ ಪೂಜಾ ವಿಧಾನ ನಡೆಸಿದ ನಂತರ ಭಕ್ತರು ಸಂಭ್ರಮದಿಂದ ಪಲ್ಲಕ್ಕಿ ಹೊತ್ತು ಕುಣಿಯುತ್ತಾರೆ. ರಾತ್ರಿಯಿಡೀ ಗ್ರಾಮದ ಬೀದಿಗಳಲ್ಲಿ ಉತ್ಸವ ನಡೆಸಿ, ದ್ವಾರಸಮುದ್ರ ಕೆರೆಯಲ್ಲಿ ಗಂಗಾಪೂಜೆ ನೆರವೇರಿಸಿ ಹಳೇಬೀಡಿಗೆ ಕರೆ ತರಲಾಗುತ್ತದೆ.

ಏಪ್ರಿಲ್ 10 ರಂದು ಬೆಳಿಗ್ಗೆ 3ಕ್ಕೆ ಹೆಣ್ಣು ಮಕ್ಕಳು ಹಾಗೂ ಮಹಿಳೆಯರು ದೀಪಾರತಿ ಸೇವೆ ಸಲ್ಲಿಸುತ್ತಾರೆ. 5ಗಂಟೆಗೆ ದೇವಿಗೆ ಕೆಂಡದ ನೈವೇದ್ಯ ಸಮರ್ಪಿಸುವ ವಿಶೇಷ ಆಚರಣೆ ನಡೆಯುತ್ತದೆ. ನಂತರ ಕೆಂಡೋತ್ಸವ ನಡೆಯುತ್ತದೆ. ಮಧ್ಯಾಹ್ನ ಕೆಪಿಎಸ್ ಶಾಲೆ ಆವರಣದಲ್ಲಿ ಅನ್ನ ಸಂತರ್ಪಣೆ ನಡೆಯುತ್ತದೆ. ಕರಿಯಮ್ಮ ಪರಿವಾರ ದೇವತೆಗಳನ್ನು ಉಡಸಲಮ್ಮ ದೇವಾಲಯ ಆವರಣಕ್ಕೆ ಕರೆ ತಂದು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಿಡಿ ಉತ್ಸವ ನಡೆಯುತ್ತದೆ. ನಂತರ ಮೆರವಣಿಗೆಯಲ್ಲಿ ದೇವತೆಗಳು ಕರಿಯಮ್ಮ ದೇವಾಲಯಕ್ಕೆ ಹಿಂದಿರುಗುತ್ತಾರೆ. ಓಕುಳಿ ಸೇವೆ ಸಲ್ಲಿಸಿದ ನಂತರ ಉಯ್ಯಾಲೆ ಉತ್ಸವ ನಡೆಯುತ್ತದೆ.

ಏಪ್ರಿಲ್ 12 ರಂದು ಮಾಯಾಗೊಂಡನಹಳ್ಳಿಯಲ್ಲಿ, ಏಪ್ರಿಲ್ 13 ಮಲ್ಲಾಪುರದಲ್ಲಿ ಉತ್ಸವ ನಡೆಯುತ್ತದೆ. ಏಪ್ರಿಲ್ 14 ರಂದು ಮಲ್ಲಾಪುರ ಗ್ರಾಮಸ್ಥರು ಜಾತ್ರೆ ಮೈದಾನದಲ್ಲಿ ಮರಿಸಿಡಿ ನಡೆಸಿದ ನಂತರ ಜಾತ್ರೆ ಸಮಾಪ್ತಿಯಾಗುತ್ತದೆ ಎಂದು ಗ್ರಾಮದ ಹಿರಿಯ ಎಚ್.ಎಸ್. ಮಲ್ಲಪ್ಪ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-36-1640918466

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.