ಹಳೇಬೀಡು: ರಾಗಿ ಅಂಬಲಿ, ರಾಗಿ ಹಾಲು, ರಾಗಿ ಗಿಣ್ಣು, ಹಸುವಿನ ಹಾಲಿನ ಗಿಣ್ಣು, ಕಾಳುಗಳಿಂದ ತಯಾರಿಸಿದ ಪಲ್ಯ, ರೊಟ್ಟಿ, ಕಜ್ಜಾಯ ಮುಂತಾದ ವಿವಿಧ ಖಾದ್ಯಗಳನ್ನು ಸಾಂಪ್ರದಾಯಿಕ ದಿರಿಸಿನಲ್ಲಿ ಬಂದಿದ್ದ ಪ್ರಾಧ್ಯಾಪಕರು, ಅತಿಥಿಗಳು ಹಾಗೂ ವಿದ್ಯಾರ್ಥಿಗಳು ಬಾಯಿ ಚಪ್ಪರಿಸಿದರು.

ಆಧುನಿಕತೆಯ ಭರಾಟೆಯಲ್ಲಿ ಇಂದಿನ ಪೀಳಿಗೆಯಿಂದ ದೂರವಾಗುತ್ತಿರುವ ಹಳೆಯ ಕಾಲದ ತಿಂಡಿ ತಿನಿಸು ಹಾಗೂ ಉಡುಗೆಗಳನ್ನು ಪರಿಚಯಿಸುವ ಉದ್ದೇಶದಿಂದ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಜನಪದ ಉತ್ಸವ, ದೇಸಿ ಅಡುಗೆ, ದೇಸಿ ತೊಡುಗೆ ಕಾರ್ಯಕ್ರಮ ಆಯೋಜಿಸಿದ್ದರು.

ವಿದ್ಯಾರ್ಥಿಗಳು ತಮ್ಮ ತಂಡಗಳಿಗೆ ನಿಯೋಜಿಸಿದ್ದ 31 ಸ್ಟಾಲ್ಗಳಲ್ಲಿ ಹಳೆಯ ಕಾಲದ ತಿಂಡಿ ತಿನಿಸುಗಳ ವ್ಯಾಪಾರ ಮಾಡಿದರು. ಜೊತೆಗೆ ವ್ಯವಹಾರ ಜ್ಞಾನ ಅರಿತರು.

ತಿಂಡಿ, ತಿನಿಸುಗಳನ್ನು ಮನೆಯಲ್ಲಿ ತಯಾರಿಸಿಕೊಂಡು ಸಾಕಷ್ಟು ವಿದ್ಯಾರ್ಥಿಗಳು ತಂದು ಜೋಡಿಸಿದ್ದರು. ಕೆಲವು ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಖಾದ್ಯ ತಯಾರಿಸಿ ಮಾರಾಟ ಮಾಡಿದರು. ಹಳೆಯ ಖಾದ್ಯಗಳ ಜೊತೆ ಪಾನಿಪುರಿ, ಮಸಾಲೆಪುರಿ, ವಿವಿಧ ಮಂಚೂರಿಗಳು, ಗರಿಯಾದ ಹಾಗೂ ಹಸಿಯಾದ ಚುರುಮುರಿಯ ವ್ಯಾಪಾರದ ಭರಾಟೆ ಜೋರಾಗಿತ್ತು.

ಶ್ವೇತ ವರ್ಣದ ಪಂಚೆ, ಶರ್ಟ್, ಶಲ್ಯ ಧರಿಸಿದ್ದ ಗಣ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ಟ್ರ್ಯಾಕ್ಟರ್ಗಳಲ್ಲಿ ಕೂರಿಸಿಕೊಂಡು ದೇಸಿ ಅಡುಗೆ, ಉಡುಗೆ ನಡೆಯುವ ಕಾರ್ಯಕ್ರಮದ ಸ್ಥಳಕ್ಕೆ ಕರೆತರಲಾಯಿತು.

ಪ್ರಾಧ್ಯಾಪಕರಾದ ಡಾ.ಅಭಿಷೇಕ್ ಎನ್, ರೋವಿನ್ ಮಾರ್ಟಿಸ್ ಅಯೋಜಿಸಿದ್ದು, ಸಾಂಸ್ಕೃತಿಕ ಸಮಿತಿ ಸಂಚಾಲಕ ಶಿವರಾಜ್ ಕುಮಾರ್ ಸಾಥ್ ನೀಡಿದ್ದರು. ಸಿಡಿಸಿ ಕಾರ್ಯಾಧ್ಯಕ್ಷ ಎಚ್.ಸಿ. ಚೇತನ್, ಹಲಸಿನ ಹಣ್ಣು ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಲೇಜು ಕಟ್ಟಡದ ಭೂದಾನಿ ಸಿ.ಆರ್.ಲಿಂಗಪ್ಪ(ಪ್ರೇಮಣ್ಣ), ಸಿಡಿಸಿ ಸದಸ್ಯ ರಂಜಿತ್ ಮಾರಾಟ ಮಳಿಗೆಗಳಿಗೆ ಚಾಲನೆ ನೀಡಿದರು.

ಹಿರಿಯ ಶ್ರೇಣಿ ಗ್ರಂಥಪಾಲಕಮನೋಜ್, ಪ್ರಾಧ್ಯಾಪಕರಾದ ದಶರಥ ಕೆ.ಟಿ., ಡಾ.ತಿಮ್ಮನಾಯಕ ಕೆ.ಬಿ., ಡಿಂಪಲ್ ವಿ., ಪದ್ಮಪ್ರಿಯಾ, ಚಂದ್ರಶೇಖರ್ ಸಿಂಗ್, ರಾಘವೇಂದ್ರ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-36-764607017

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.