ಹಾಸನ: ಕೆಎಸ್ಆರ್ಟಿಸಿ ಪುತ್ತೂರು ವಿಭಾಗದ ಧರ್ಮಸ್ಥಳ ಡಿಪೋದಿಂದ ಕುಕ್ಕೆ ಸುಬ್ರಹ್ಮಣ್ಯ, ಶನಿವಾರಸಂತೆ, ಮಲ್ಲಿಪಟ್ಟಣ, ಅರಕಲಗೂಡು, ಹಳ್ಳಿ ಮೈಸೂರು ಮಾರ್ಗವಾಗಿ ಮೈಸೂರು ಸಂಪರ್ಕಿಸುವ ನೂತನ ಬಸ್ ಸೇವೆಗೆ ಭಾನುವಾರ ಹೊಳೆನರಸೀಪುರ ತಾಲ್ಲೂಕಿನ ಹಳ್ಳಿ ಮೈಸೂರಿನ ಬಸವೇಶ್ವರ ದೇವಾಲಯದ ಮುಂಭಾಗ ಚಾಲನೆ ನೀಡಲಾಯಿತು.

ಗ್ರಾಮದ ಮುಖಂಡರಾದ ಎಚ್.ಎಸ್. ಮಂಜುನಾಥ್, ಬಾಲಗಂಗಾಧರ, ಎಚ್.ಎಸ್. ಕುಮಾರಸ್ವಾಮಿ, ಎಚ್.ಬಿ. ಕುಮಾರಸ್ವಾಮಿ, ಎಚ್.ಪಿ. ಸೋಮಶೇಖರ್, ದೊಡ್ಡ ಮನೆ ರಾಜಣ್ಣ, ಎಚ್.ಸಿ. ಶ್ರೀಕಂಠಮೂರ್ತಿ, ನಾಗರಾಜಪ್ಪ, ಪೆಟ್ರೋಲ್ ಬಂಕ್ ಮಂಜುನಾಥ್, ಎಚ್.ಟಿ. ಕಾಳೇಗೌಡ, ಎಚ್.ಪಿ. ನಟೇಶ್, ಸ್ವಾಮಿ ಗೌಡ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದು, ಹಸಿರು ನಿಶಾನೆ ತೋರುವ ಮೂಲಕ ಬಸ್ ಸಂಚಾರಕ್ಕೆ ಚಾಲನೆ ನೀಡಿದರು.

ಈ ಬಸ್ ಮೈಸೂರಿನಿಂದ ಬೆಳಿಗ್ಗೆ 6 ಗಂಟೆಗೆ ಹೊರಟು, ಹಳ್ಳಿಮೈಸೂರಿಗೆ ಬೆಳಿಗ್ಗೆ 8ಕ್ಕೆ ತಲುಪಲಿದ್ದು, ಅಲ್ಲಿಂದ ಕುಕ್ಕೆ ಸುಬ್ರಹ್ಮಣ್ಯ ಮಾರ್ಗವಾಗಿ ಮಧ್ಯಾಹ್ನ 1ಕ್ಕೆ ಧರ್ಮಸ್ಥಳ ತಲುಪಲಿದೆ. ಮತ್ತೆ ಧರ್ಮಸ್ಥಳದಿಂದ ಮಧ್ಯಾಹ್ನ 3.30ಕ್ಕೆ ಹೊರಟು ಅದೇ ಮಾರ್ಗವಾಗಿ ರಾತ್ರಿ 9.30ಕ್ಕೆ ಹಳ್ಳಿ ಮೈಸೂರಿಗೆ ತಲುಪುತ್ತದೆ.

ಈ ನೂತನ ಬಸ್ ಸೇವೆಯಿಂದ ಗ್ರಾಮೀಣ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-36-1898753900

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.