ಹಾಸನ: ಅರಸೀಕೆರೆ ತಾಲ್ಲೂಕಿನ ಡಿ.ಎಂ. ಕುರ್ಕೆ ಗ್ರಾಮದಲ್ಲಿ ಗುರುವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ಆರಂಭವಾಗಿದ್ದು, ಯುವಕನ ಮೇಲೆ ಬಂದೂಕಿನಿಂದ ಗುಂಡು ಹಾರಿಸಲು ಯತ್ನಿಸಿರುವ ಘಟನೆ ನಡೆದಿದೆ. ಗುಂಡು ಗುರಿ ತಪ್ಪಿ ನೆಲಕ್ಕೆ ಬಿದ್ದಿದ್ದರಿಂದ ಶ್ರೀನಿವಾಸ್ ಎಂಬಾತ ಪಾರಾಗಿದ್ದಾನೆ.

ಡಿ.ಎಂ.ಕುರ್ಕೆ ಗ್ರಾಮದ ರವಿ, ಕಾರ್ತಿಕ್, ಕುಮಾರ್ ಮತ್ತು ಶ್ರೀನಿವಾಸ್, ಗ್ರಾಮದ ಬಾರ್ ಮುಂಭಾಗದಲ್ಲಿ ಮದ್ಯ ಸೇವಿಸುತ್ತಿದ್ದರು. ಈ ವೇಳೆ ಮಳೆ ಆರಂಭವಾಗಿದ್ದು, ಬಾರ್ ಮುಂದೆ ಹಾಕಿದ್ದ ಶೀಟ್ ಕೆಳಗೆ ಕುಳಿತು ಮದ್ಯಪಾನ ಮಾಡುತ್ತಿದ್ದರು. ಅದೇ ಸ್ಥಳದಲ್ಲಿ ಸಿಂಗೇನಹಳ್ಳಿ ಪಾಳ್ಯದ ದರ್ಶನ್, ರಮೇಶ್, ಮಂಜುನಾಥ್ ಮತ್ತು ಮಧುಸೂದನ್ ಎಂಬುವರು ಮದ್ಯ ಸೇವಿಸುತ್ತಿದ್ದರು. ಈ ಸಂದರ್ಭದಲ್ಲಿ ದರ್ಶನ್ ಬಿಯರ್ ಬಾಟಲ್ ತೆರೆದಿದ್ದು, ಬಿಯರ್ ಚಿಮ್ಮಿ ಪಕ್ಕದಲ್ಲೇ ಕುಳಿತಿದ್ದ ಶ್ರೀನಿವಾಸ್ ಮೇಲೆ ಬಿದ್ದಿದೆ.

‘ಬಿಯರ್ ಯಾಕೆ ನನ್ನ ಮೇಲೆ ಚೆಲ್ಲಿದೆ?’ ಎಂದು ಶ್ರೀನಿವಾಸ್ ಪ್ರಶ್ನಿಸಿದ್ದಕ್ಕೆ ಕುಪಿತಗೊಂಡ ದರ್ಶನ್, ಶ್ರೀನಿವಾಸ್ ಮೇಲೆ ಹಲ್ಲೆ ನಡೆಸಿದ್ದಾನೆ. ತಕ್ಷಣ ರವಿ, ಕಾರ್ತಿಕ್ ಮತ್ತು ಕುಮಾರ್ ಮಧ್ಯಪ್ರವೇಶಿಸಿ ಸಮಾಧಾನಪಡಿಸಿದ್ದಾರೆ.

ಗಲಾಟೆ ತಣ್ಣಗಾದ ಬಳಿಕ ಇಲ್ಲೇ ಇರಿ ಎಂದು ಹೇಳಿ ಬೈಕ್ನಲ್ಲಿ ತೆರಳಿದ ರಮೇಶ್ ಮತ್ತು ಮಂಜುನಾಥ್, ಮನೆಯಿಂದ ಲೋಡ್ ಮಾಡಿದ ಬಂದೂಕು ತಂದಿದ್ದಾರೆ. ರಮೇಶ್ ನೇರವಾಗಿ ಶ್ರೀನಿವಾಸ್ ಮೇಲೆ ಗುಂಡು ಹಾರಿಸಲು ಮುಂದಾಗಿದ್ದು, ರವಿ ತಕ್ಷಣ ಬಂದೂಕನ್ನು ಹಿಡಿದುಕೊಂಡಿದ್ದಾನೆ. ಗುಂಡು ಗುರಿ ತಪ್ಪಿ ನೆಲಕ್ಕೆ ಬಿದ್ದಿದೆ. ಬಳಿಕ ಆರೋಪಿಗಳಾದ ರಮೇಶ್, ಮಂಜುನಾಥ್, ಮಧುಸೂದನ್ ಮತ್ತು ದರ್ಶನ್ ಸೇರಿ ಶ್ರೀನಿವಾಸ್ಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.

ತಿಳಿದು ಸ್ಥಳಕ್ಕೆ ಧಾವಿಸಿದ ಅರಸೀಕೆರೆ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿದ್ದು, ಆರೋಪಿಗಳಾದ ರಮೇಶ್, ಮಂಜುನಾಥ್, ಮಧುಸೂದನ್ ಮತ್ತು ದರ್ಶನ್ ವಿರುದ್ಧ ಪ್ರಕರಣ ದಾಖಲಿಸಿ, ನಾಲ್ವರನ್ನು ಬಂಧಿಸಿದ್ದಾರೆ. ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-36-655812564

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.